ಬೆಂಗಳೂರು, ಜು.21 www.bengaluruwire.com : ರಾಜ್ಯ ಸರ್ಕಾರವು ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕ್ ನೀಡಿದೆ. ಇಂಜಿನಿಯರಿಂಗ್ (Engineering) ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಳ ಮಾಡಿ ಆದೇಶ ಹೊರಸಿಡಿದೆ. 2024-25ನೇ ಸಾಲಿನ ಪ್ರವೇಶಕ್ಕೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ.
ಅದರಂತೆ ಸರ್ಕಾರಿ ಕಾಲೇಜು, ಮೈಸೂರು ವಿಶ್ವವಿದ್ಯಾಲಯ (Mysore University) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (Vishveshwariah Technical University) ದ ಘಟಕ ಕಾಲೇಜುಗಳ ಶೇ.50 ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟುಗಳಿಗೆ 42,116 ರೂ. ನಿಗದಿ ಪಡಿಸಿದೆ. ಯುವಿಸಿಇ 47,250 ರೂ., ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರೂ. ಮತ್ತು 84,596 ರೂ. ಹಾಗೂ ಕಾಮೆಡ್-ಕೆ ಕೋಟಾದ ಸೀಟುಗಳಿಗೆ 1,86,111 ರೂ. ಮತ್ತು 2,61,477 ರೂಗಳನ್ನು ನಿಗದಿ ಪಡಿಸಲಾಗಿದೆ.
ಇದರ ಜತೆಗೆ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಇತರೆ ಶುಲ್ಕವಾಗಿ ವಾರ್ಷಿಕ 20 ಸಾವಿರ ರೂ.ಮೀರದಂತೆ ಪ್ರಥಮ ವರ್ಷದ ಶುಲ್ಕವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು
ಈ ಮೊದಲೇ ಶೇ.10 ಶುಲ್ಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ಜತೆಗೆ ಒಪ್ಪಂದವಾಗಿತ್ತು. ಆದರೆ, ಶುಲ್ಕ ನಿಗದಿ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿರಲ್ಲಿಲ್ಲ. ಇದೀಗ ಉನ್ನತ ಶಿಕ್ಷಣ ಇಲಾಖೆ (Higher Education)ಯು ಶುಲ್ಕ ನಿಗದಿ ಮಾಡಿ ಈ ಆದೇಶ ಹೊರಡಿಸಿದೆ.
ಶುಲ್ಕದ ಮಾಹಿತಿ ಈ ರೀತಿಯಿದೆ :
ಸರ್ಕಾರಿ ಕಾಲೇಜು : 42,116 ರೂ., ಖಾಸಗಿ ಕಾಲೇಜಿನ ಶುಲ್ಕ 76,135, 84,596 ರೂ. ಸರ್ಕಾರಿ ಕೋಟಾ 1,86,111 ಮತ್ತು ಕಾಮೆಡ್ ಕೆ ಸೀಟಿಗೆ 2,61,477 ರೂ.