ಬೆಂಗಳೂರು, ಜು.18 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎನಿಂದ ಈತನಕ ಬೆಂಗಳೂರು 73 ಬಡಾವಣೆಗಳನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಈ ಪೈಕಿ ಪ್ರಾಧಿಕಾರದ ಬಳಿ ಕೇವಲ 4,611 ಮೂಲೆ ನಿವೇಶನಗಳು (Corner Sites) ಹಾಗೂ 156 ನಾಗರೀಕ ಸೌಲಭ್ಯದ ನಿವೇಶನಗಳ(CA Sites)ಷ್ಟೇ ಹಂಚಿಕೆಯಾಗದೆ ಬಾಕಿ ಉಳಿದುಕೊಂಡಿದೆ.
ವಿಧಾನಸಭೆಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದು, ಪ್ರಾಧಿಕಾರದಿಂದ ನಿರ್ಮಿಸಿರುವ ಬಡಾವಣೆಗಳಲ್ಲಿ ಒಟ್ಟು 22,670 ಮೂಲೆ ನಿವೇಶನಗಳಿದ್ದು, ಈತನಕ 18,059 ಮೂಲೆ ನಿವೇಶನಗಳು ಹಂಚಿಕೆಯಾಗಿದೆ. 4,611 ಮೂಲೆ ನಿವೇಶನಗಳು ಹಂಚಿಕೆಯಾಗದೇ ಉಳಿದಿದೆ. ಪ್ರಾಧಿಕಾರದಿಂದ ನಿರ್ಮಿಸಿರುವ ಬಡಾವಣೆಗಳಲ್ಲಿ ಒಟ್ಟು 1559 ಸಿ.ಎ ನಿವೇಶನಗಳನ್ನು ರಚಿಸಲಾಗಿತ್ತು. ಆ ಪೈಕಿ 1403 ನಿವೇಶನಗಳನ್ನು ಈವರೆಗೆ ಹಂಚಿಕೆ ಮಾಡಲಾಗಿದ. ಇನ್ನು ಕೇವಲ 156 ನಾಗರೀಕ ಸೌಲಭ್ಯದ ಸೈಟುಗಳಿವೆ ಎಂದು ಸದನಕ್ಕೆ ಡಿ.ಕೆ.ಶಿವಕುಮಾರ್ ಲಿಖಿತ ಉತ್ತರ ನೀಡಿದ್ದಾರೆ.
ಇದನ್ನೂ ತಪ್ಪದೇ ಓದಿ : BDA Published 172 Illegal Layouts List | ಬೆಂಗಳೂರಿನಲ್ಲಿದೆ 172 ಅನಧಿಕೃತ ಬಡಾವಣೆಗಳು ಎಚ್ಚರ!! : ಬಿಡಿಎ, ಕಾನೂನು ಬದ್ಧವಲ್ಲದ ಖಾಸಗಿ ಲೇಔಟ್ ಗಳ ಸಂಪೂರ್ಣ ವಿವರ ಪ್ರಕಟಿಸಿದೆ : ಇಲ್ಲಿದೆ ಅವುಗಳ ಪಟ್ಟಿ
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳನ್ನು ತಡೆಗಟ್ಟಲು ಸಾರ್ವಜನಿಕರ ತಿಳುವಳಿಕೆಗಾಗಿ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ. ಅನಧಿಕೃತ ಬಡಾವಣೆಗಳಲ್ಲಿ ರಚಿಸಿರುವ ನಿವೇಶನಗಳನ್ನು ನೋಂದಣಿ ಮಾಡಿಕೊಳ್ಳದಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರನ್ನು ಕೋರಲಾಗಿರುತ್ತದೆ. ನಿರ್ಮಾಣ ಹಂತದಲ್ಲಿರುವ ಅನಧಿಕೃತ ಬಡಾವಣೆಯ ಸಂಬಂಧ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 17(4) ರಡಿಯಲ್ಲಿ ನೊಟೀಸ್ ಜಾರಿಗೊಳಿಸಿ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗಿರುತ್ತದೆ ಎಂದು ಶಾಸಕ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡಿಎ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಬಿಡಿಎ ವ್ಯಾಪ್ತಿಯಲ್ಲಿ 172 ಅನಧಿಕೃತ ಬಡಾವಣೆಗಳ ಹೆಸರು, ಸರ್ವೇ ನಂಬರ್, ಆ ಬಡಾವಣೆ ಅಭಿವೃದ್ಧಿಪಡಿಸಿದವರ ಹೆಸರು, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಗಳಿರುವ ಪಟ್ಟಿಯನ್ನು ಪ್ರಕಟಿಸಿತ್ತು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.