ಬೆಂಗಳೂರು, ಜು.13 www.bengaluruwire.com : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಂಗೇರಿ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗಲು ಜು.15ರಿಂದ ಎಂಎಫ್-35 ಮಾರ್ಗ ಸಂಖ್ಯೆಯ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಪರಿಚಯಿಸುತ್ತಿದೆ.
ಹವಾನಿಯಂತ್ರಣರಹಿತ ಸೇವೆಯಡಿ ಕೆಂಗೇರಿ ಟಿಟಿಎಂಸಿಯಿಂದ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ತನಕ ಬೆಳಗ್ಗೆಯಿಂದ ರಾತ್ರಿ 8.30ರ ತನಕ ಮೆಟ್ರೋ ಫೀಡರ್ ಬಸ್ ಸೇವೆಯಿರಲಿದೆ.
ವಿವರ ಕೆಳಕಂಡಂತಿದೆ :
ಕೆಂಗೇರಿ ಟಿಟಿಎಂಸಿಯಿಂದ ಹೊರಟು ಶ್ರೀನಿವಾಸಪುರ ಕ್ರಾಸ್, ಕರಿಯನಪಾಳ್ಯ, ಕರಿಷ್ಮ ಹಿಲ್ಸ್, ರಘುವನಹಳ್ಳಿ ಕ್ರಾಸ್, ಅವಲಹಳ್ಳಿ ಬಿಡಿಎ ಲೇಔಟ್, ಅಂಜನಪುರ ಮೂಲಕ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ವರೆಗೆ ಫೀಡರ್ ಬಸ್ ಹೋಗಿ ಬರುವ ಸೇವೆ ಒದಗಿಸಲಿದೆ.
ಈ ಮಾರ್ಗದ ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿದೆ :
ಕೆಂಗೇರಿ ಟಿಟಿಎಂಸಿಯಿಂದ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ಕಡೆಗೆ ಹೊರಡುವ ಸಮಯ :
7:05, 7:35, 8:15, 8:50, 9:35, 10:30, 11:00, 11:40, 12:20, 12:50, 13:30, 14:00, 14:45, 15:15, 16:15, 16:45, 17:30, 18:00, 20:00, 20:30
ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ನಿಂದ ಕೆಂಗೇರಿ ಟಿಟಿಎಂಸಿ ಕಡೆಗೆ ಹೊರಡುವ ಸಮಯ :
ಬೆಳಗ್ಗೆ 6:05, 6:35, 8:15, 8:45, 9:30, 10:30, 11:10, 11:40, 12:20, 12:50, 13:35, 14:05, 15:05, 15:35, 15:55, 16:50, 17:25, 17:55, 18:50, 19:20