ಬೆಂಗಳೂರು, ಜೂ.21 www.bengaluruwire.com : ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಸಾರ್ವಜನಿಕರ ಪ್ರಮುಖ ಸಂಚಾರ ಸಾರಿಗೆ ಮೂಲವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ಪ್ರಯಾಣಿಕರ ಅನುಕೂಲಕ್ಕಾಗಿ ಮಲ್ಲೇಶ್ವರ ಬಸ್ ನಿಲ್ದಾಣದಿಂದ, ಬನಶಂಕರಿ ಬಸ್ ನಿಲ್ದಾಣಕ್ಕೆ ನೂತನ ಮಾರ್ಗದ ಬಸ್ ಸೇವೆಯನ್ನು ಆರಂಭಿಸಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಲ್ಲೇಶ್ವರ ಬಸ್ ನಿಲ್ದಾಣದಿಂದ ಮಲ್ಲೇಶ್ವರ ಸರ್ಕಲ್, ರಾಜಾಜಿನಗರ ಇ.ಎಸ್.ಐ, ಮಾಗಡಿ ರಸ್ತೆ ಟೋಲ್ ಗೇಟ್, ವಿಜಯನಗರ ಹಾಗೂ ನಾಯಂಡನಹಳ್ಳಿ ಜಂಕ್ಷನ್ ಮಾರ್ಗವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ನೂತನ ಮಾರ್ಗ ಸಂಖ್ಯೆ 401-ಎನ್ ಅನ್ನು ಜೂ.14 ರಿಂದ ಪರಿಚಯಿಸಿದೆ ಎಂದು ಬಿಎಂಟಿಸಿ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬಸ್ ಸಂಚಾರ ವಿವರ ಈ ಕೆಳಕಂಡಂತಿದೆ :
ಬಸ್ ಮಲ್ಲೇಶ್ವರ ಬಸ್ ನಿಲ್ದಾಣದಿಂದ ಬಿಡುವ ವೇಳೆ :
ಬೆಳಗ್ಗೆ – 6.40, 7.45, 8.20, 8.50, 9.20, 9.50, 10.35, 11.10, 11.40, ಮಧ್ಯಾಹ್ನ- 12.40, 1, 1.30, 2.30, 3.55, ಸಂಜೆ- 4.25, 4.50, 5.20, 6.55
ಬನಶಂಕರಿ ಬಸ್ ನಿಲ್ದಾಣದಿಂದ ಬಿಡುವ ವೇಳೆ :
ಬೆಳಗ್ಗೆ – 7.35, 8.05, 8.35, 8.55, 9.35, 10.30, 11.00, 11.30, 11.50, ಮಧ್ಯಾಹ್ನ- 12.20, 12.50, 2.45, 3.05, 3.40, ಸಂಜೆ 5.10, 5.40, ರಾತ್ರಿ- 8.10