ಬೆಂಗಳೂರು, ಜೂ.11 www.bengaluruwire.com : ಕೊಲೆ ಪ್ರಕರಣವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ಮೈಸೂರಿನ ಕೆಂಪಯ್ಯನಹುಂಡಿ ಗ್ರಾಮದ ಬಳಿ ಇರುವ ಫಾರ್ಮ್ಹೌಸ್ನಲ್ಲಿ ನಗರದ ಕಾಮಾಕ್ಷಿ ಠಾಣೆ ಪೊಲೀಸರು ಬಂಧನ ಮಾಡಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಈತನಕ ನಟ ದರ್ಶನ್ ಸೇರಿದಂತೆ 10 ಮಂದಿಗೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣವೊಂದರ ಬಂಧಿತ ಆರೋಪಿಗಳು ನಟ ದರ್ಶನ್ ಹೆಸರನ್ನು ಬಾಯ್ಬಿಟ್ಟಿರುವ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಹತ್ಯೆ ಸಂಬಂಧ ನಟಿ ಪವಿತ್ರಾಗೌಡ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ (28) ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯ ಶೆಡ್ ಒಂದರಲ್ಲಿ ಜೂನ್ 8ರಂದು ರೇಣುಕಾಸ್ವಾಮಿಯ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ಸುಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಜೂನ್ 9ರ ಭಾನುವಾರ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್ ದೋರ್ ಎಂಬ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.
ಈ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿಗಳು ದರ್ಶನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ 10 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದಂತಾಗಿದೆ.
ಆದರೆ ನಟ ದರ್ಶನ್ ಪೊಲೀಸರಿಗೆ, ನಟಿ ಪವಿತ್ರ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ, ತಾವು ಕೇವಲ ಬೆದರಿಸಿ ಎಂದಷ್ಟೇ ಹೇಳಿದ್ದೆ. ಆದರೆ ಕೊಲೆ ಮಾಡಲು ಹೇಳಿರಲಿಲ್ಲ” ಎಂದು ಹೇಳಿದ್ದಾಗಿ ತಿಳಿದುಬಂದಿದೆ. ಆದರೆ ಇದಕ್ಕೂ ಮುನ್ನ ಬಂಧಿಸಲಾದ ಆರೋಪಿಗಳು ದರ್ಶನ್ ಕೊಲೆ ಮಾಡಲು ತಿಳಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಟಿ ಪವಿತ್ರ ಗೌಡಗೆ ಚಿತ್ರದುರ್ಗದ 28 ವರ್ಷದ ರೇಣುಕಾಸ್ವಾಮಿ ಆಗಾಗ ಬೇರೆ ಬೇರೆ ಮೊಬೈಲ್ ಫೋನ್ ನಿಂದ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಜೂ.8ರಂದು ಶನಿವಾರ ರೇಣುಕಾಸ್ವಾಮಿ ಕಾಣೆಯಾಗಿದ್ದ. ಪ್ರಕರಣ ಸಂಬಂಧ ನಿನ್ನೆ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಇದೀಗ ಇದೇ ಪ್ರಕರಣದ ನಟ ದರ್ಶನ್ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೆಡಿಕಲ್ ಶಾಪ್ ನಲ್ಲಿ ಕೆಲಸಕ್ಕಿದ್ದ ರೇಣುಕಾಸ್ವಾಮಿ :
ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಕೊಲೆ ಪ್ರಕರಣವೊಂದರಲ್ಲಿ ನಟರೊಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ತನಿಖೆಯ ನಂತರವಷ್ಟೇ ತಿಳಿದುಬರಲಿದೆ” ಎಂದು ತಿಳಿಸಿದ್ದಾರೆ.
ಅಸಲಿಗೆ ನಡೆದಿದ್ದೇನು? :
ಪವಿತ್ರಾಗೌಡ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ರೇಣುಕಾ ಸ್ವಾಮಿ ಕಾಮೆಂಟ್ ಮಾಡಿದ್ದ. ಈ ಹಿನ್ನಲೆಯಲ್ಲಿ ರೇಣುಕಾಸ್ವಾಮಿಯನ್ನು ನಟ ದರ್ಶನ್ ಜೂ.8ರಂದು
ಕರೆಸಿಕೊಂಡಿದ್ದರು. ಆರ್ ಆರ್ ನಗರದ ಮನೆ ಬಳಿ ಇರುವ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿಹಾಕಲಾಗಿತ್ತು. ಆ ಸಂದರ್ಭದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ ಕೂಡ ಇದ್ದಿದ್ದರು. ಆಗ ರೇಣುಕಾಸ್ವಾಮಿಗೆ ದರ್ಶನ್ ಕೂಡಾ ಹೊಡೆದಿದ್ದಾರೆ ಎನ್ನಲಾಗಿದೆ.
ಗಿರಿನಗರದ ಮೂವರು ಯುವಕರು ಮರ್ಮಾಂಗಕ್ಕೆ ಹೊಡೆದ ಏಟಿಗೆ ಸ್ಥಳದಲ್ಲೇ ರೇಣುಕಾಸ್ವಾಮಿ ಸಾವಿಗೀಡಾದರು. ರೇಣುಕಾಸ್ವಾಮಿ ದೇಹವನ್ನು ಕಾಮಾಕ್ಷಿಪಾಳ್ಯ ರಾಜಕಾಲುವೆ ಬಳಿ ಹುಡುಗರು ಮೋರಿಯಲ್ಲಿ ಎಸೆದಿದ್ದರು. ಮೃತದೇಹ ಸಿಕ್ಕಾಗ ಪೊಲೀಸರು ಅದರ ಪರಿಶೀಲನೆ ನಡೆಸಿದ್ದರು. ಯಾರೊ ಕೊಲೆ ಮಾಡಿದ್ದಾರೆ ಅಂತ ಪೊಲೀಸರು ತನಿಖೆ ನಡೆಸಿದ್ದರು. ರೇಣುಕಾಸ್ವಾಮಿ ಮೊಬೈಲ್ ಪರಿಶಿಲನೆ ಮಾಡಿದ್ದಾಗ ಆರ್ ಆರ್ ನಗರದಲ್ಲಿನ ನಟ ದರ್ಶನ್ ಮನೆ ಲೊಕೇಶನ್ ತೋರಿಸಿತ್ತು.
ವಿಚಾರ ದೊಡ್ಡದಾಗುತ್ತೆ ಅಂತ ಮೂರು ಜನ ನಿನ್ನೆ ಸೆರಂಡರ್ ಆಗಿದ್ದರು. ಮೊದಲಿಗೆ ಹಣಕಾಸಿನ ವಿಚಾರಕ್ಕೆ ತಾವೇ ಕೊಲೆ ಮಾಡಿದ್ವಿ ಅಂತ ಹೇಳಿದ್ದರು. ಆದರೆ ಯಾವಾಗ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಆರೋಪಿಗಳು ದರ್ಶನ್ ಹೆಸರು ಪ್ರಸ್ತಾಪ ಮಾಡಿದರು ಎಂದು ತಿಳಿದು ಬಂದಿದೆ. ಅಷ್ಟೊತ್ತಿಗಾಗ್ಲೆ ದರ್ಶನ್ ಮೈಸೂರಿಗೆ ತೆರಳಿದರು. ಆದರೆ ಪ್ರಕರಣ ಕಾವೇರುತ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು ನಾಲ್ಕು ಕಾರುಗಳನ್ನು ಬಳಕೆ ಮಾಡಿದ್ದು, ಎರಡು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮತ್ತೆರಡು ಕಾರು ವಶಕ್ಕೆ ಪಡೆಯಲು ಪೊಲೀಸರು ಕೈಗೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳ ವಿವರ :
1.ಪವನ್: ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನಾಪ್ ಮಾಡಲು ಹೇಳಿದ್ದವನು, ಪವಿತ್ರ ಗೌಡನಿಗೂ ಆಪ್ತ.
2. ಪ್ರದೋಶ್: ಹೋಟೆಲ್ ಉದ್ಯಮಿ…
3. ನಂದೀಶ್: ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ ಕಿಡ್ನಾಪ್ ಮಾಡಿಕೊಂಡು ಕರೆತಂದವನು.
4.ಕೇಶವಮೂರ್ತಿ , ಪ್ರದೂಶ್ ಗೆಳೆಯ ಹಾಗೂ ಉದ್ಯಮಿ.
5. ರಾಘವೇಂದ್ರ : ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
6. ಲಕ್ಷ್ಮಣ್,
7. ದೀಪಕ್ ,
8.ಕಾರ್ತಿಕ್