ಬೆಂಗಳೂರು, ಜೂ.7 www.bengaluruwire.com : ಕನ್ನಡ ರ್ಯಾಪ್ ಹಾಡುಗಳ ಮೂಲಕ ಮನೆ ಮಾತಾದ ಸ್ಯಾಂಡಲ್ವುಡ್ನ ಸ್ಟಾರ್ ಜೋಡಿ ಎಂದೇ ಖ್ಯಾತಿಗೊಂಡಿರುವ ಚಂದನ್ ಶೆಟ್ಟಿಗೆ ನಿವೇದಿತಾ ಬಾಳಲ್ಲಿ ಬಿರುಗಾಳಿ ಬೀಸಿದೆ. ಇವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ತಾರಾ ಜೋಡಿಯಾಗಿ ಮಿಂಚಿದ್ದ ನಿವೇದಿತಾ ಹಾಗೂ ಚಂದನ್ ವಿಚ್ಚೇದನ ಸುದ್ದಿ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ದಂಪತಿ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.
ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಲುತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರ ಕೋರ್ಟ್ ನಲ್ಲಿ ಜೂನ್ 6ರಂದು ದಂಪತಿ ವಿಚ್ಛೇದನಕ್ಕಾಗಿ (ಕೇಸ್ ನಂ. MC 3388/ 2024) ಅರ್ಜಿ ಸಲ್ಲಿಸಿದ್ದಾರೆ. ಇಬ್ಬರಿಗೂ ಒಬ್ಬರೇ ಮಹಿಳಾ ವಕೀಲರು.
ಗಾಯಕ, ಸಂಗೀತ ಸಂಯೋಜಕನಾಗಿದ್ದ ಚಂದನ್ ಶೆಟ್ಟಿ, ಸೂತ್ರಧಾರ ಚಿತ್ರದ ಮೂಲಕ ನಾಯಕನಟನಾಗಿ ಹೊರಹೊಮ್ಮುತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ರಿಲೀಸ್ಗೆ ರೆಡಿಯಿದೆ ಚಂದನ್ ನಟನೆಯ ಎಲ್ರ ಕಾಲೆಳೆಯುತ್ತೆ ಕಾಲ ಸಿನಿಮಾ. ರಾಜ-ರಾಣಿ, ಗಿಚ್ಚ ಗಿಲಿಗಿಲಿ ಶೋಗಳಿಂದ ನಿವೇದಿತಾ ಮನೆ ಮಾತಾಗಿದ್ದರು.
ಬಿಗ್ ಬಾಸ್ -5ರಲ್ಲಿ ರಿಯಾಲಿಟಿ ಶೋನಿಂದಲೇ ಚಂದನ್ ಶೆಟ್ಟಿಗೆ ನಿವೇದಿತಾ ಅವರ ಪರಿಚಯವಾಗಿ, 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಬೊಂಬೆ ಬೊಂಬೆ ಅಂತ ಹಾಡುತ್ತಲೇ ಕಿಡ್ಡಿಶ್ ಎನಿಸಿದರೂ, ಪ್ರಬುದ್ಧತೆ ತೋರಿದ ನಿವೇದಿತಾ ಬಿಗ್ ಬಾಸ್-5 ಮನೆ ಸೇರಿದಂತೆ ಎಲ್ಲರ ಫೇವರೇಟ್ ಆಗಿದ್ದಳು. ಇಬ್ಬರೂ ಕೆಲವು ವರ್ಷಗಳ ಕಾದು ಮದುವೆಯಾಗಿದ್ದರೂ, ಮೈಸೂರು ಯುವ ದಸರಾದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು. ಇದಾದ ಬಳಿಕ ಎಲ್ಲರೂ ಇವರ ಬೆಂಬಲಕ್ಕೆ ನಿಂತು ಈ ವಿಷಯವನ್ನು ತಹಬದಿಗೆ ತಂದಿದ್ದರು. ಆಮೇಲೆ ಮೈಸೂರಲ್ಲಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಿತ್ತು.
ಚಂದನ್ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಗೌಡ ಆಗಾಗ ಒಟ್ಟಿಗೆ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದರು. ಕೆಲವು ರೀಲ್ಸ್ಗಳನ್ನು ನೋಡಿ ನೆಟ್ಟಿಗರ ಸಿಟ್ಟಿಗೂ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿ ʻʻಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲʼʼ ಎಂದು ಟೀಕೆ ಮಾಡುತ್ತಿದ್ದರು.