ಕಠ್ಮಂಡು (ನೇಪಾಳ) ಮೇ.30 www.bengaluruwire.com : ವಿಶ್ವದ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಹತ್ತುವಾಗ ಮೇ.22 ರಂದು ಕೀನ್ಯಾದ ವೃತ್ತಿಪರ ಪರ್ವತಾರೋಹಿ ಜೋಶುವಾ ಚೆರುಯೋಟ್ ಕಿರುಯಿ ಎಂಬ ಪರ್ವತಾರೋಹಿಯ ದುರಂತ ಸಾವಿನ ನಂತರ, ಅವರ ದೇಹವನ್ನು ಪರ್ವತದ ಮೇಲೆ ಬಿಡಲು ಅವರ ಕುಟುಂಬ ನಿರ್ಧರಿಸಿದೆ.
ಚೆರುಯೋಟ್ ಕಿರುಯಿ ಕುಟುಂಬದ ಹೇಳಿಕೆಯ ಪ್ರಕಾರ, ವ್ಯಾಪಕವಾದ ಸಮಾಲೋಚನೆಗಳು ಮತ್ತು ಎಲ್ಲಾ ಸಂದರ್ಭಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ. ಚೆರುಯೋಟ್ ಶಿಖರದಿಂದ (8,848 ಮೀಟರ್) ಕೇವಲ 48 ಮೀಟರ್ ದೂರದಲ್ಲಿನ ಪರ್ವತದ ಬಿರುಕಿನಲ್ಲಿ ಸಿಲುಕಿ ಅವರು ಸಾವನ್ನಪ್ಪಿದ್ದರು ಎಂದು ಕುಟುಂಬ ವಿವರಿಸಿದೆ.
ಅಂತಹ ಎತ್ತರದ ಸ್ಥಳದಿಂದ ಅವರ ಮೃತದೇಹವನ್ನು ಹಿಂಪಡೆಯುವುದು ರಕ್ಷಣಾ ತಂಡಕ್ಕೆ ಅತ್ಯಂತ ಅಪಾಯಕಾರಿ ಎಂದು ಗಮನಿಸಿದ ಅವರ ಕುಟುಂಬವು, ಬೇರೆ ಯಾವುದೇ ಜೀವಕ್ಕೆ ಅಪಾಯವನ್ನುಂಟುಮಾಡಲು ಬಯಸದ ಕಾರಣ ಜೋಶುವಾ ಚೆರುಯೋಟ್ ಕಿರುಯಿ ಮೃತದೇಹವನ್ನು ವಾಪಸ್ ಪಡೆಯದೆ ಅದೇ ಎವರೆಸ್ಟ್ ಪರ್ವತದಲ್ಲೇ ಉಳಿಸಲು ತೀರ್ಮಾನಿಸಿದ್ದಾರೆ.
ಹಿಮಾಲಯದಲ್ಲಿ ಪರ್ವತಾರೋಹಣ ಘಟನೆಗಳನ್ನು ದಾಖಲಿಸುವ ಸಂಸ್ಥೆ ಎವರೆಸ್ಟ್ ಟುಡೇ (Everest Today), ಚೆರುಯೋಟ್ ಕಿರುಯಿ ಈತ ಆಫ್ರಿಕಾ ಖಂಡದ ಮೊದಲ ವೃತ್ತಿಪರ ಪರ್ವತಾರೋಹಿಯಾಗಿದ್ದು, ಎವೆರೆಸ್ಟ್ ತುತ್ತತುದಿ ಬಹುತೇಕ ಹತ್ತಿದ್ದರು. ಈ ಕಾರಣದಿಂದ ಅವರು ಸಾವನ್ನಪ್ಪಿದ ಆ ಸ್ಥಳವನ್ನು ಅವರ ಗೌರವಾರ್ಥ “ಚೆರುಯೋಟ್ ಪಾಯಿಂಟ್” ಎಂದು ನಾಮಕರಣ ಮಾಡಲು ನಿರ್ಧಿಸಿದೆ. ಅಲ್ಲದೆ ಈತನ ಹೆಸರನ್ನು ಕೀನ್ಯಾದ ಒಂದು ಪರ್ವತಕ್ಕೆ ಹೆಸರಿಡಲು ಅಲ್ಲಿನ ರಾಷ್ಟ್ರಕ್ಕೆ ಸಲಹೆ ನೀಡಿದೆ.
ಚೆರುಯೋಟ್ ಅವರು ಪರ್ವತಗಳ ಮೇಲೆ ಆಳವಾದ ಪ್ರೀತಿಯನ್ನು ಹೊಂದಿದ್ದನೆಂದು ಅವರ ಕುಟುಂಬವು ಹೇಳಿದೆ ಮತ್ತು ಅವರು ಆಳವಾಗಿ ಪ್ರೀತಿಸಿದ ಎವರೆಸ್ಟ್ ಸ್ಥಳದಲ್ಲೇ ಅವರು ಚಿರಶಾಂತಿ ಪಡೆಯುತ್ತಾನೆ ಎಂದು ತಿಳಿದುಕೊಂಡಿದ್ದಾಗಿ ಹೇಳಿದೆ. ಸಂಬಂಧಿಕರು, ಸ್ನೇಹಿತರು ಮತ್ತು ಹೊರಗಿನ ಜನರು, ಸಮುದಾಯದಿಂದ ಪ್ರೀತಿ ಮತ್ತು ಸಂತಾಪ ಸಂದೇಶಗಳನ್ನು ಕಳಿಸಿದ್ದಕ್ಕಾಗಿ ಚೆರುಯಿಯೊಟ್ ಕುಟುಂಬವು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಜೋಶುವಾ ಕೆಲಸ ಮಾಡುತ್ತಿದ್ದ ಕೆಸಿಬಿ (KCB) ಗ್ರೂಪ್ ಕುಟುಂಬದಿಂದ ಪಡೆದ ಅಪಾರ ಬೆಂಬಲವನ್ನು ಅವರು ನೆನೆದಿದ್ದಾರೆ. “ನಮ್ಮ ಮಗ ಪ್ರೀತಿಸಲ್ಪಟ್ಟಿದ್ದಾನೆಂದು ನಮಗೆ ನಿಜವಾಗಿಯೂ ತಿಳಿದಿದೆ.” ಈ ಸಮಯದಲ್ಲಿ ಅವರು ತಮ್ಮ ಕುಟುಂಬಕ್ಕೆ ನೀಡಿದ ಬೆಂಬಲ, ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಸೆವೆನ್ ಸಮ್ಮಿಟ್ ಟ್ರೆಕ್‌ಗಳಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಪರ್ವತಾರೋಹಣ ಸಮಯದಲ್ಲಿ ನವಾಂಗ್ ಶೆರ್ಪಾ, ಚೆರುಯೋಟ್‌ನ ಶೆರ್ಪಾ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುವುದಾಗಿ ಕುಟುಂಬವು ಉಲ್ಲೇಖಿಸಿದೆ, ಅವರು ಇನ್ನೂ ಕಾಣೆಯಾಗಿದ್ದಾರೆ, “ಅವರು ಶಾಂತಿಯನ್ನು ಕಂಡುಕೊಳ್ಳಲಿ” ಎಂದಿದ್ದಾರೆ. ನೈರೋಬಿ ಮತ್ತು ಚೆಪ್ಟೆರಿಟ್ ಗ್ರಾಮದಲ್ಲಿ ಸ್ಮರಣಾರ್ಥ ಸೇವೆಯನ್ನು ನಡೆಸಲಾಗುವುದು, ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಅವರ ಕುಟುಂಬ ವರ್ಗ ತಿಳಿಸಿದೆ.
ಏಪ್ರಿಲ್ 18ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಚೆರುಯೋಟ್, ತಾವು ಮೌಂಟ್ ಎವರೆಸ್ಟ್ ಪರ್ವತ ಹತ್ತುತ್ತಿದ್ದು, ಇದಕ್ಕಾಗಿ ಯಾವುದೇ ಆಮ್ಲಜನಕ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಇದುವರೆಗೆ ಮೌಂಟ್ ಎವರೆಸ್ಟ್ ಹತ್ತುವಾಗ ಮೃತಪಟ್ಟ 330 ಪರ್ವತಾರೋಹಿಗಳ ಪೈಕಿ 200 ಮಂದಿಯ ಮೃತದೇಹ ವಿಶ್ವದ ಅತಿ ಎತ್ತದ ಶಿಖರದಲ್ಲಿಯೇ ಉಳಿದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಮೌಂಟ್ ಎವರೆಸ್ಟ್ ಪರ್ವತವು ಸಮುದ್ರಮಟ್ಟದಿಂದ ಒಟ್ಟಾರೆ 29,029 ಅಡಿ ಎತ್ತರದಲ್ಲಿದೆ. ಇದು ವಿಶ್ವದ ಅತ್ಯಂತ ಎತ್ತರದ ಪರ್ವತ ಎಂಬ ಖ್ಯಾತಿಗೆ ಪಾತ್ರವಾಗಿದೆ. ಎವರೆಸ್ಟ್ ತುದಿಯು ಸಾವಿನ ವಲಯ (“Death Zone”) ದಲ್ಲಿದ್ದು, ಇಲ್ಲಿ ಪರ್ವತ ಹತ್ತುವಾಗ ಬಲಯುತ ಮತ್ತು ಸುರಕ್ಷಿತ ಹಗ್ಗವನ್ನು ಬಳಸಿ ಲಂಬಾಕಾರವಾಗಿ ಹತ್ತಬೇಕಾಗುತ್ತದೆ. ಈ ಸ್ಥಳದಲ್ಲಿ ಆಮ್ಲಜನಕಕ್ಕೆ ತೀವ್ರ ಕೊರತೆಯಿರುವ ಕಾರಣ ಎವರೆಸ್ಟ್ ಚಾರಣ ಸಾಕಷ್ಟು ಸವಾಲಿನದ್ದಾಗಿರುತ್ತದೆ.
ಚೆರುಯೋಟ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಎವರೆಸ್ಟ್ ಶಿಖರದ ಪರ್ವತಾರೋಹಣದ ವಿಡಿಯೋ ಅಪಲೋಡ್ ಮಾಡಿದ್ದರು :