ಬೆಂಗಳೂರು, ಮೇ.29 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಗಾತ್ರದ ಉಡ (Monitor lizard)ವೊಂದು ಐಟಿಸಿ ಟಿನ್ ಫ್ಯಾಕ್ಟರಿ ಹತ್ತಿರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿನ ಪೇಪರ್ ಗೋಡನ್ ಒಳಗೆ ಸೇರಿಕೊಂಡಿದ್ದನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಕರು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ಬಿಡುಗಡೆ ಮಾಡಿದ್ದಾರೆ.
ಪೇಪರ್ ಗೋಡನ್ ಒಳಗೆ ಬೃಹತ್ ಗಾತ್ರದ ಉಡ ಸೇರಿಕೊಂಡಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್ ಹಾಗೂ ವನ್ಯಜೀವಿ ಸಂರಕ್ಷಕ ಸೈಯದ್ ನಯಾಸ್ ಪಾಷಾ ಅವರು ಉಡವನ್ನು ರಕ್ಷಣೆ ಮಾಡಿದ್ದಾರೆ. ಈ ಉಡವು ಅಂದಾಜು ನಾಲ್ಕು ಅಡಿ ಉದ್ದ, 3 ಕೆಜಿ ತೂಕವಿತ್ತು. ಈ ರೀತಿಯ ಮಾನಿಟರ್ ಲಿಜಾರ್ಡ್, ಬೆಂಗಳೂರು ಗ್ರಾಮಾಂತರ ಪ್ರದೇಶ, ತುಮಕೂರು ಉದ್ಯಾನವನಗಳು ಹಾಗೂ ಕುರುಚಲು ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುತ್ತವೆ.