ಬೆಂಗಳೂರು, ಮೇ.27 www.bengaluruwire.com : ನಗರದಲ್ಲಿ ಅಭಿವೃದ್ಧಿಯ ಹೊಡೆತಕ್ಕೆ ಒಂದೊಂದೇ ಕೆರೆಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಅವುಗಳಲ್ಲಿ ಕೆ.ಆರ್.ಪುರದ ಸಮೀಪವಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯೂ ಒಂದು. ಪ್ಲಾಸ್ಟಿಕ್ ತ್ಯಾಜ್ಯ, ಕೊಳಚೆ ನೀರು, ಕಟ್ಟಡ ತ್ಯಾಜ್ಯ ಹಾಗೂ ಒತ್ತುವರಿಯಿಂದ ನಲುಗಿರುವ ಕೆರೆಯನ್ನು ರಕ್ಷಿಸಲು ಸ್ಥಳೀಯರು “ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಉಳಿಸಿ” ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಆ ಮೂಲಕ ಕರೆಯೆ ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಮೊದಲು ಇದು ಬೆಂಗಳೂರಿನಲ್ಲಿರುವ ಸುಂದರ ಮತ್ತು ಪ್ರಮುಖ ಜಲಮೂಲವಾಗಿತ್ತು. ಇದೀಗ ಹತ್ತಿರದ ಬಡಾವಣೆ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಇಲ್ಲಿನ ಕರೆಯು ಹೂಳು, ಜೋಂಡುಗಳಿಂದ ಕೆರೆಯ ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದಾಗಿ ನೀರಿನಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆಯಾಗಿ, ಇವು ಇಲ್ಲಿನ ಜಲಚರಗಳ ಮೇಲೆ ಪರಿಣಾಮ ಬೀರುತ್ತಿದೆ.
ಕೆರೆಯನ್ನು ಸಂರಕ್ಷಿಸುವ ಭಾಗವಾಗಿ ಫ್ರೆಂಡ್ಸ್ ಫಾರ್ ಲೇಕ್, ಮೇಡಹಳ್ಳಿ ರೈಸಿಂಗ್ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಸ್ವಯಂ ಸೇವಕರು ಕೆರೆ ಉಳಿವಿಗಾಗಿ 50-60ಕ್ಕೂ ಹೆಚ್ಚು ಮಂದಿ ಕೆರೆಯಲ್ಲಿ ಕಸ ಸಂಗ್ರಹ ಕಾರ್ಯ ಕೈಗೊಂಡರು.
“ಕೆರೆಯನ್ನು ಉಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆದೇಶ, ಸ್ಥಳೀಯರು ಹೋರಾಟ ನಡೆಸುತ್ತಿದ್ದರೂ, ಕೆರೆಯಲ್ಲಿ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮತ್ತೊಂದೆಡೆ ಕಸ ಸುರಿಲಾಗುತ್ತಿದೆ. ಅವ್ಯಾಹತವಾಗಿ ಕೆರೆ ಒತ್ತುವರಿಯಾಗುತ್ತಿದೆ. ಕೆರೆಯ ಗತವೈಭವ ಮರುಸ್ಥಾಪಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಬಿಬಿಎಂಪಿ ಇತ್ತ ಕಡೆ ಗಮನಹರಿಸಿ ಕ್ರಮಕೈಗೊಳ್ಳುವ ಅಗತ್ಯವಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ. (ಚಿತ್ರಕೃಪೆ : ಎಕ್ಸ್/ ಮೇಡನಹಳ್ಳಿ ರೈಸಿಂಗ್)