ಬೆಂಗಳೂರು, ಮೇ.25 www.bengaluruwire.com : ಹಿಂದೂ ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆಯಿಂದ
24*7 ಹೆಲ್ಪ್ ಲೈನ್ ಆರಂಭ ಮಾಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮೇ.29ರಂದು ಏಕೀಕೃತ ಸಹಾಯವಾಣಿ ಸಂಖ್ಯೆಗಳನ್ನು ಶ್ರೀರಾಮ ಸೇನೆ ಘೋಷಣೆ ಮಾಡಲಿದೆ.
ಮೇ.29ರಂದು ಹುಬ್ಬಳ್ಳಿ ಕೇಂದ್ರಕೃತವಾಗಿ ರಾಜ್ಯದಾದ್ಯಂತ
6 ಕೇಂದ್ರಗಳನ್ನು ಶ್ರೀರಾಮ ಸೇನೆ ಆರಂಭಿಸಲಿದೆ. ಲವ್ ಜಿಹಾದ್ ನಿಂದ ಹಿಂದೂ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಯ ಉದ್ದೇಶದಿಂದ ಈ ಸಹಾಯವಾಣಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮೇ.29 ರಂದು ಪತ್ರಿಕಾಗೋಷ್ಠಿಯಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಘೋಷಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಹಲವು ಮಠಾಧೀಶರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.