ಬೆಂಗಳೂರು, ಮೇ.16 www.bengaluruwire.com : ನಗರದ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ – JNP) ನಕ್ಷತ್ರ ವೀಕ್ಷಕರಿಗಾಗಿ ಮತ್ತೊಂದು ಅತ್ಯಾಕರ್ಷಕ ಕಾರ್ಯಕ್ರಮವನ್ನು ಹೊರತರುತ್ತಿದೆ. ಜೆಎಸ್ ಪಿ, ಶಿಕ್ಷಣ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳಿಗಾಗಿ ದೂರದರ್ಶಕ ಸಂಗ್ರಹಾಲಯ (Telescope Library) ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಒಬ್ಬರು ದೂರದರ್ಶಕ/ಬೈನಾಕ್ಯುಲರ್/ಗ್ನೋಮನ್ ಅನ್ನು ನಿಗದಿತ ಸಮಯದ ತನಕ, ಶುಲ್ಕ ನೀಡಿ ಎರವಲು ಪಡೆಯಬಹುದು.
ಅವುಗಳನ್ನು ಆಸಕ್ತ ಸಂಸ್ಥೆ ಅಥವಾ ಬಾಹ್ಯಾಕಾಶ ವೀಕ್ಷಿಸುವ ಹವ್ಯಾಸಿಗರು ತಮ್ಮ ಆವರಣದಲ್ಲಿ ಪಡೆದು ಬಳಸಬಹುದು. ಹಾಗೂ ನಿಗದಿತ ಅವಧಿಯ ನಂತರ ಅಲ್ಲಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ವ್ಯವಸ್ಥೆಯನ್ನು ನೆಹರು ಪ್ಲಾನಿಟೋರಿಯಂ ಕಲ್ಪಿಸಿಕೊಟ್ಟಿದೆ. ಆಸಕ್ತ ಅಭ್ಯರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಜೆಎನ್ ಪಿ ಯಲ್ಲಿ ತಿಳುವಳಿಕೆ ಕಾರ್ಯಾಗಾರಕ್ಕೆ ಹಾಜರಾಗಬೇಕು. ಮೇ.18 ಮತ್ತು 19ನೇ ತಾರೀಖು ಬೆಳಗ್ಗೆ 11ರಿಂದ 5ರ ತನಕ ಕಾರ್ಯಾಗಾರ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳಲು ಗೂಗಲ್ ಫಾರಮ್ ಲಿಂಕ್ https://tinyurl.com/3r24auak ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರಿಗೆ 1,000₹ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ : 080-22379725, 080- 22266084 ಸಂಪರ್ಕಿಸಬಹುದು.
ಇದರ ವಿಷಯಗಳು ಈ ಕೆಳಕಂಡಂತಿದೆ :
ದೂರದರ್ಶಕದ ದೃಗ್ವಿಜ್ಞಾನದ ಮೂಲಭೂತ ಅಂಶಗಳು, ದೂರದರ್ಶಕಗಳ ಕಾರ್ಯಾಚರಣೆಯ ತತ್ವಗಳು, ದೂರದರ್ಶಕಗಳು/ಬೈನಾಕ್ಯುಲರ್‌ಗಳ ನಿರ್ವಹಣೆ ಮತ್ತು ಬಳಕೆ, ಗ್ನೋಮನ್‌ಗಳನ್ನು ಬಳಸಿಕೊಂಡು ಹಗಲಿನ ಖಗೋಳಶಾಸ್ತ್ರದ ಚಟುವಟಿಕೆಗಳು, ರಾತ್ರಿ ಆಕಾಶದ ವೀಕ್ಷಣೆಗಳು ಹಾಗೂ ಬಾಹ್ಯಾಕಾಶ ಫೋಟೋಗ್ರಫಿ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ.