ಶಿಮ್ಲಾ (ಹಿಮಾಚಲಪ್ರದೇಶ), ಮೇ.12 www.bengaluruwire.com : ಜಖು ದೇವಾಲಯ (Jakhu Temple) ಭಾರತದ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಪುರಾತನ ಹನುಮಂತ ದೇವರ ದೇವಸ್ಥಾನವಾಗಿದೆ. ಜಖು ದೇವಸ್ಥಾನದಲ್ಲಿನ 108 ಅಡಿ ಎತ್ತರದ ಹನುಮಂತನ ವಿಗ್ರಹ ಪ್ರಪಂಚದಲ್ಲೇ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.
ಇದು ಸಮುದ್ರ ಮಟ್ಟದಿಂದ 2,455 ಮೀ (8,054 ಅಡಿ) ಎತ್ತರದಲ್ಲಿ ರಿಡ್ಜ್‌ನ ಪೂರ್ವಕ್ಕೆ 2.5 ಕಿಮೀ (1.6 ಮೈಲಿ) ದೂರದಲ್ಲಿದ್ದು, ಶಿಮ್ಲಾದ ಅತಿ ಎತ್ತರದ ಶಿಖರವಾದ ಜಖು ಬೆಟ್ಟದ ತಪ್ಪಲಿನಲ್ಲಿದೆ. ಹನುಮಂತನ ಅವರ ಪ್ರತಿಮೆಯು ಜಖು ದೇವಾಲಯದ ಆವರಣದಲ್ಲಿದೆ. ಈ ಪ್ರತಿಮೆಯನ್ನು 4 ನವೆಂಬರ್ 2010 ರಂದು ಅನಾವರಣಗೊಳಿಸಲಾಯಿತು. ಇತ್ತೀಚೆಗಷ್ಟೆ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹೊರಗೆ ಅಳವಡಿಸುವ ಮೊತ್ತ ಮೊದಲ ಎಸ್ಕಲೇಟರನ್ನು ಹಾಕಲಾಗಿದೆ. ಇದರ ಜೊತೆಗೆ ಮೆಟ್ಟಿಲುಗಳನ್ನು ಬಹಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ.
ದೇವಸ್ಥಾನದಲ್ಲಿ ಹನುಮಾನ್ ಮೂರ್ತಿಯ ಶಿಲಾಮಯ ವಿಗ್ರಹವಿದೆ. ಸದಾ ಕಾಲ ಅರ್ಚಕರು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಮಂಗಳವಾರ ಮತ್ತು ಶನಿವಾರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಾಂಗವಾಗಿ ನೆಡೆಸಿಕೊಂಡು ಬರಲಾಗುತ್ತಿದೆ.
ಪುರಾಣದ ಮಹತ್ವ ಸಾರುವ ಪವಿತ್ರ ಸ್ಥಳ :
ರಾಮಾಯಣದ ಪ್ರಕಾರ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಲಕ್ಷ್ಮಣನನ್ನು ಬದುಕಿಸಲು ಆಂಜನೇಯನು ಸಂಜೀವಿನಿ ಹುಡುಕುತ್ತಿರುವ ಸಂದರ್ಭದಲ್ಲಿ ಹನುಮಂತನು ಈ ಸ್ಥಳದಲ್ಲಿ ವಿಶ್ರಾಂತಿ ಪಡೆದರು ಎಂದು ಪ್ರತೀತಿಯಿದೆ. ಶಿಮ್ಲಾ ದಟ್ಟ ಜನವಸತಿ ಪ್ರದೇಶದಿಂದ ಕೊಂಚ ದೂರವಿದ್ದು, ಶಿಮ್ಲಾ ಬಹುತೇಕ ಎಲ್ಲಾ ಸ್ಥಳಗಳಿಂದಲೂ ನಿಂತು ಕತ್ತೆತ್ತಿ ನೋಡಿದರೆ 108 ಅಡಿ ಎತ್ತರದ ಸ್ಪುರದ್ರೂಪಿ ವಾಯುಪುತ್ರನನ್ನು ದೂರದಿಂದಲೇ ಜನರು ಕಣ್ತುಂಬಿಕೊಳ್ಳಬಹುದು.
ಇಲ್ಲಿದೆ ಜಖು ದೇವಸ್ಥಾನದ ವಿಡಿಯೋ ಇರುವ ಫೇಸ್ ಬುಕ್ ಲಿಂಕ್ :
https://www.facebook.com/share/r/8ksPLhZCfUnNoAem/?mibextid=qi2Omg
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.