ಪಾಮಿದಿ (ಆಂಧ್ರಪ್ರದೇಶ) ಮೇ.3 www.bengaluruwire.com : ಲೋಕಸಭೆ ಚುನಾವಣೆಯ ಹೊತ್ತಿನಲ್ಲೇ 2,000 ಕೋಟಿ ಮೌಲ್ಯದ ‘ಕೊಳಕಾದ’ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ನಾಲ್ಕು ಕಂಟೈನರ್ ಟ್ರಕ್‌ಗಳನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಇಲ್ಲಿ ವಶಕ್ಕೆ ಪಡೆದಿದ್ದಾರೆ. ಆದರೆ ಅವು ಕೆಲವು ಬ್ಯಾಂಕ್‌ಗಳಿಗೆ ಸೇರಿದ ಬಗ್ಗೆ ದಾಖಲೆ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕರೆನ್ಸಿ ನೋಟುಗಳು ಐಸಿಐಸಿಐ (ICICI), ಐಡಿಬಿಐ (IDBI) ಮತ್ತು ಫೆಡರಲ್ ಬ್ಯಾಂಕ್ (Federab Bank)ಗೆ ಸೇರಿವೆ ಎಂದು ಅನಂತಪುರ ರೇಂಜ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿಪಿ) ಆರ್ ಎನ್ ಅಮ್ಮಿ ರೆಡ್ಡಿ ತಿಳಿಸಿದ್ದಾರೆ.
ಕೇರಳ ಕೊಚ್ಚಿಯಿಂದ ಬರುವ ಟ್ರಕ್‌ಗಳು ಹೈದರಾಬಾದ್‌ನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಾದೇಶಿಕ ಕಚೇರಿಗೆ ಈ ಭಾರೀ ಪ್ರಮಾಣದ ನೋಟುಗಳನ್ನು ಹೊತ್ತು 4 ಟ್ರಕ್ ಗಳು ಹೋಗುತ್ತಿದ್ದವು’ ಎಂದು ರೆಡ್ಡಿ ಪಿಟಿಐಗೆ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಟ್ರಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೇ 13 ರಂದು ಆಂಧ್ರಪ್ರದೇಶದಲ್ಲಿ ಏಕಕಾಲದಲ್ಲಿ ಸಂಸತ್ ಮತ್ತು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ.
ಟ್ರಕ್‌ಗಳು ಬೆಂಗಾವಲು ವಾಹನಗಳನ್ನು ಹೊಂದಿದ್ದವು ಮತ್ತು ಅಗತ್ಯವಿರುವ ಎಲ್ಲಾ ಸಾರಿಗೆ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿತ್ತು ಸಂಬಂಧಿಸಿದ ಬ್ಯಾಂಕುಗಳು ಮತ್ತು ಆರ್‌ಬಿಐ ದೃಢೀಕರಣವನ್ನು ತೆಗೆದುಕೊಂಡು ಪರಿಶೀಲಿಸಲಾಗಿದೆ ಎಂದು ಡಿಐಜಿಪಿ ಹೇಳಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಚುನಾವಣಾ ಚುನಾವಣಾಧಿಕಾರಿ ಮತ್ತು ಇತರರನ್ನು ಪರಿಶೀಲನೆ ಪ್ರಕ್ರಿಯೆಗೆ ನಿಯೋಜಿಸಲಾಗಿದೆ. ಆದರೆ, ಇಂತಹ ಕರೆನ್ಸಿ ನೋಟುಗಳ ಚಲನವಲನದ ಬಗ್ಗೆ ರಾಜ್ಯ ಪೊಲೀಸರ ಬಳಿ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ರೆಡ್ಡಿ ಅವರು ವಿವರಿಸಿದರು. ಏಕಾಏಕಿ ನಾಲ್ಕು ಟ್ರಕ್ ನಲ್ಲಿ ಸಿಕ್ಕ ಭಾರೀ ಪ್ರಮಾಣದ ಕರೆನ್ಸಿ ನೋಟುಗಳು ಮೊದಲಿಗೆ ಚುನಾವಣಾ ಅಧಿಕಾರಿಗಳು ಬೆಚ್ಚಿ ಬೀಳುವಂತೆ ಮಾಡಿದ್ದು ಸುಳ್ಳಲ್ಲ.