ಬೆಂಗಳೂರು, ಮೇ.2 www.bengaluruwire.com : ಕಾದು ಕೆಂಡದಂತಾಗಿದ್ದ ಬೆಂಗಳೂರಿಗೆ ವರುಣನ ಆಗಮನವಾಗಿದೆ. ಕಳೆದ ಹಲವು ದಿನಗಳಿಂದ ನಗರದ ತಾಪಮಾನ 37 ರಿಂದ 40 ಡಿಗ್ರಿವರೆಗೆ ತಲುಪಿದ್ದರಿಂದ, ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದರು. ಗುರುವಾರ ಸಂಜೆ 6.45ರ ಸುಮಾರಿಗೆ ಆರಂಭವಾದ ವರ್ಷಧಾರೆ ಗುಡುಗು ಸಿಡಿಲಿನ ಅಬ್ಬರದ ನಡುವೆ ಆಗಮಿಸಿ ನಗರಕ್ಕೆ ತಂಪೆರೆಯಿತು. ಇದರಿಂದ ಬಿಸಿಲಿನಿಂದ ಕಂಗೆಟ್ಟಿದ ಜನರು ಸಂತಸಗೊಂಡಿದ್ದಾರೆ.
ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ಉಲ್ಲಾಳ, ನಾಗರಭಾವಿ, ದೊಮ್ಮಲೂರು, ರಾಮಮೂರ್ತಿ ನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಳೆಯಾಗಿದೆ. ಸುಮಾರು 60 ವಾರ್ಡ್ ಗಳಲ್ಲಿ ಧಾರಾಕಾರ ಮಳೆ ಸುರಿದರೆ, ಕೆಲವು ಕಡೆಗಳಲ್ಲಿ ತುಂತುರು ಮಳೆ ಹನಿಯಾಯಿತು. ಮಳೆಯಿಲ್ಲದೆ ಸೊರಗಿದ್ದ ಉದ್ಯಾನವನ, ರಸ್ತೆ ಬದಿಯಲ್ಲಿನ ಮರಗಿಡಗಳಿಗೆ ಮುಂಗಾರು ಪೂರ್ವ ಮಳೆಯ ಸಿಂಚನವು ಸ್ವಲ್ಪ ಮಟ್ಟಿಗೆ ಆಸರೆಯಾದಂತಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರದ ಬಳಿ ಪೆಟ್ಟಿ ಅಂಗಡಿಯೊಂದರ ಶೀಟ್ಸ್ ಹಾರಿ ವಾಹನಗಳ ಮೇಲೆ ಬಿದ್ದ ಕಾರಣ ಹಲವು ವಾಹನಗಳು ಜಖಂಗೊಂಡವು. ಸ್ವಲ್ಪ ಕಾಲ ಮಳೆ ಬಂದು ನಿಂತು ಹೋಗಿದ್ದರಿಂದ ಕಾದ ನೆಲದ ಕಾವಿನಿಂದ ಸೆಖೆ ಮತ್ತಷ್ಟು ಹೆಚ್ಚಾಗಿದೆ.
ಬೃಹತ್ ನೀರುಗಾಲುವೆಗಳಲ್ಲಿನ ನೀರಿನ ಮಟ್ಟವು ಶೇ.25.32ರಷ್ಟಿದೆ. ಪ್ರಸ್ತುತ ನಗರದ ತಾಪಮಾನವು 8.3 ಡಿಗ್ರಿಯಷ್ಟಿದ್ದು, ಶೇ.70 ತೇವಾಂಶವಿದೆ. ಸಂಜೆ 5.30ರ ಸಂದರ್ಭದಿಂದ ಮುಂದಿನ 12 ಗಂಟೆಯ ವರೆಗೆ ಯಲಹಂಕ ವಲಯದಲ್ಲಿ 3.57 ಮಿ.ಮೀ, ಮಹದೇವಪುರ ವಲಯದಲ್ಲಿ 2.54 ಮಿ.ಮೀ, ಬಿಬಿಎಂಪಿ ಪೂರ್ವ ವಲಯದಲ್ಲಿ 2.47 ಮಿ.ಮೀ, ದಾಸರಹಳ್ಳಿ 1.79 ಮಿ.ಮೀ, ರಾಜರಾಜೇಶ್ವರಿ ನಗರದಲ್ಲಿ 1.73.ಮಿ.ಮೀ, ಪಶ್ಚಿಮ ವಲಯದಲ್ಲಿ 0.79 ಮಿ.ಮೀ ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿ ಅತ್ಯಂತ ಕಡಿಮೆ ಅಂದರೆ 0.25 ಮಿ.ಮೀ ಮಳೆಯಾಗಲಿದೆ ಎಂದು ಎಂದು ಕರ್ನಾಟಕ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಬೆಂಗಳೂರು ಹವಾಮಾನ ಕೇಂದ್ರವು ರಾಜಧಾನಿ ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದ್ದು, ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ ತನಕ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂಗಾರು ಪೂರ್ವ ಮಳೆಯಾಗುವ ಸಂದರ್ಭದಲ್ಲಿ ಗುಡುಗು ಮಿಂಚು ಸಹಿತ ಗಾಳಿಯ ವೇಗ ಹೆಚ್ಚಿದ್ದು, ವರುಣನ ಅಬ್ಬರ ಹೆಚ್ಚಿರುವ ಸಾಧ್ಯತೆಯಿರುವುದರಿಂದ ಜನರು ಮನೆಯೊಳಗೆ ಇದ್ದು, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ, ಸಾಧ್ಯವಾದರೆ ವಾಹನಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಿದೆ. ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕು. ಮರಗಳ ಕೆಳಗೆ, ಕರೆಂಟ್ ಕಂಬದ ಕೆಳಗೆ ನಿಲ್ಲಬೇಡಿ ಮತ್ತು ಕಾಂಕ್ರಿಟ್ ಗೋಡೆಗಳಿಗೆ ಒರಗದಂತೆ ಸಲಹೆ ನೀಡಿದೆ. ಅದೇ ರೀತಿ ವಿದ್ಯುತ್ ನಿಂದ ನಡೆಸುವ ಎಲ್ಲಾ ವಸ್ತುಗಳಿಂದ ದೂರವಿರಲು ಹಾಗೂ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಲು ಸಲಹೆ ನೀಡಿದೆ. ನಗರದ ಹಲವು ಭಾಗಗಳಲ್ಲಿ