ಬೆಂಗಳೂರು, ಮೇ.2 www.bengaluruwire.com : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ (IPL-2024)ಗಳಂದು ಕ್ರೀಡಾಂಗಣದಿಂದ ನಗರದ ವಿವಿಧ ಭಾಗಗಳಿಗೆ ಬಸ್ ಸೇವೆ ಒದಗಿಸಲಿದೆ.
ಮೇ.4, ಮೇ.12 ಹಾಗೂ ಮೇ.18 ರಂದು ಕ್ರಿಕೆಟ್ ಪಂದ್ಯಾವಳಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕ್ರಿಕೆಟ್ ಪಂದ್ಯಾವಳಿಗೆ ಬಂದು- ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬಿಎಂಟಿಸಿಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೆಂಗಳೂರು ನಗರದ ವಿವಿಧ ಭಾಗಗಳಿಗೆ ಕಾರ್ಯಾಚರಿಸಲಾಗುವ ಸಾರಿಗೆಗಳ ಮಾರ್ಗದ ವಿವರ (ಬಸ್ ಮಾರ್ಗದ ಸಂಖ್ಯೆಯೊಂದಿಗೆ) ಕೆಳಕಂಡಂತಿದೆ :
1. SBS-1K – ಕಾಡುಗೋಡಿ ಬಸ್ ನಿಲ್ದಾಣ (HAL ರಸ್ತೆ)
2. ಜಿ-2 – ಸರ್ಜಾಪುರ
3. ಜಿ-3 – ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)
4. ಜಿ-4 – ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
5. G-6 – ಕೆಂಗೇರಿ KHB ಕ್ವಾರ್ಟರ್ಸ್ (MCTC-ನಾಯಂಡಹಳ್ಳಿ )
6. ಜಿ-7 – ಜನಪ್ರಿಯ ಟೌನ್‌ಶಿಪ್ (ಮಾಗಡಿ ರಸ್ತೆ)
7. ಜಿ-9 – ಯಲಹಂಕ 5ನೇ ಹಂತ
8. ಜಿ-10 – ಆರ್ ಕೆ ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ)
9. ಜಿ-11 ಬಾಗಲೂರು (ಹೆಣ್ಣೂರು ರಸ್ತೆ)
10. 317 ಜಿ – ಹೊಸಕೋಟೆ
11. 13 – ಬನಶಂಕರಿ