ಹೊಸ ಮಾರುತಿ ಸ್ವಿಫ್ಟ್‌ಗಾಗಿ ಬುಕ್ಕಿಂಗ್ ದರವನ್ನು ಅಂತಿಮವಾಗಿ 11,000 ರೂ.ಗಳಿಗೆ ನಿಗದಿಪಡಿಸಲಾಗಿದೆ ಮತ್ತು ಮೇ 9 ರಂದು ಈ ನೂತನ ಕಾರು ಬಿಡುಗಡೆಗೊಳ್ಳಲಿವೆ. ಇದು ಜನಪ್ರಿಯ ಹ್ಯಾಚ್‌ಬ್ಯಾಕ್‌ನ ನಾಲ್ಕನೇ ತಲೆಮಾರಿನಾಗಿದ್ದು, ಪೆಟ್ರೋಲ್ ಮತ್ತು ಸಿಎನ್‌ಜಿ ಶಕ್ತಿ ಎರಡರಲ್ಲೂ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಜಪಾನ್ ಮತ್ತು ಯುಕೆಯಂತಹ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಿದ ನಂತರ, ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅಂತಿಮವಾಗಿ ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಹೊಸ ಹ್ಯಾಚ್ಬ್ಯಾಕ್ ಒಳಗೆ ಮತ್ತು ಹೊರಗೆ ಹೊಸ ವಿನ್ಯಾಸವನ್ನು ಹೊಂದಿದೆ. ಸುಜುಕಿ ಹೊಸ 1.2 – ಲೀಟರ್ 3 – ಸಿಲಿಂಡರ್ ಝಡ್ ಸಿರೀಸ್ ಪೆಟ್ರೋಲ್ ಎಂಜಿನ್ (82 ಪಿಎಸ್ / 112 ಎನ್‌ಎಂ ವರೆಗೆ), 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ ಸಿವಿಟಿಯೊಂದಿಗೆ ಜೋಡಿಸಲ್ಪಟ್ಟಿದೆ.
ಮಾರುತಿ ಸುಜುಕಿ ಕಂಪನಿಯು ಮೇ 9 ರಂದು ಅಧಿಕೃತವಾಗಿ ಹೊಸ ಸ್ವಿಫ್ಟ್ ಕಾರನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ. ಇನ್ನು ಸುಜುಕಿ ಕಂಪನಿಯು ಈಗಾಗಲೇ ಈ ಮಾದರಿಯನ್ನು ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ.
ವಾಹನ ಡಿಕ್ಕಿ ಪರೀಕ್ಷೆಯಲ್ಲಿ ಬಂದ ಫಲಿತಾಂಶವೇನು?:
ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರನ್ನು ಜಪಾನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇತ್ತೀಚೆಗೆ ಪರೀಕ್ಷಿಸಲಾಗಿದ್ದು, ಹೊಸ ಸ್ವಿಫ್ಟ್ 4-ಸ್ಟಾರ್ ರೇಟಿಂಗ್ ಗಳಿಸಿದೆ. ಈ ಕ್ರ್ಯಾಶ್ ಟೆಸ್ಟ್ ಕ್ರೂಸ್ ಕಂಟ್ರೋಲ್ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಕ್ರ್ಯಾಶ್ ಟೆಸ್ಟ್ ಮೌಲ್ಯಮಾಪನದಲ್ಲಿ, ಸ್ವಿಫ್ಟ್ 55 ಕಿ.ಮೀ ವೇಗದಲ್ಲಿ ಮುಂಭಾಗದ ಪರೀಕ್ಷೆಗೆ ಒಳಗಾಯಿತು. ನಂತರ ಅದರ ಆಕ್ಟಿವ್ ಸುರಕ್ಷತಾ ತಂತ್ರಜ್ಞಾನಗಳ ಮೌಲ್ಯಮಾಪನಗಳನ್ನು ಮಾಡಲಾಯಿತು.
ಇವುಗಳಲ್ಲಿ ಆಕ್ಟಿವ್ ಎರ್ಮಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಫೀಚರ್ಸ್ ನಂತಹ ಸ್ವಿಫ್ಟ್‌ನ ಆಕ್ಟಿವ್ ಸುರಕ್ಷತಾ ಫೀಚರ್ಸ್ ಗಳನ್ನು ಪರೀಕ್ಷಿಸಲಾಯಿತು. ಈ ಟೆಸ್ಟ್ ಗಳನ್ನು ಗಂಟೆಗೆ 50-60 ಕಿಮೀ ವೇಗದಲ್ಲಿ ನಡೆಸಲಾಯಿತು. ಎಡಿಎಎಸ್ ಫೀಚರ್ಸ್ (ADAS Feature) ಗಳನ್ನು ಪರೀಕ್ಷಿಸಿದ ನಂತರ, ಕಾರನ್ನು ಕ್ರಮವಾಗಿ 55 ಮತ್ತು 64 ಕಿ.ಮೀ ವೇಗದಲ್ಲಿ ಮುಂಭಾಗವನ್ನು ಟೆಸ್ಟ್ ಮಾಡಿದ್ದಾರೆ. ಹೊಸ ಸ್ವಿಫ್ಟ್‌ನಲ್ಲಿ ಸೈಡ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನಡೆಸಲಾಯಿತು.
ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ವಿಫ್ಟ್ ಗೆ ಉತ್ತಮ ಅಂಕ ಹಾಗೂ ಸ್ಟಾರ್ ರೇಟಿಂಗ್ :
ಈ ಕಾರು ಸಂಪೂರ್ಣ ಸುತ್ತು-ಮುಂಭಾಗ, ಆಫ್-ಸೆಟ್ ಮುಂಭಾಗದ ಘರ್ಷಣೆ ಮತ್ತು ಪ್ರಯಾಣಿಕರ ಸೀಟ್ ಬೆಲ್ಟ್ ರಿಮೈಂಡರ್ ಟೆಸ್ಟ್ ನಲ್ಲಿ 4 ಸ್ಟಾರ್ ಗಳಿಸಿದೆ. ಇನ್ನು ಸೈಡ್ ಡಿಕ್ಕಿ, ಕುತ್ತಿಗೆ ಗಾಯದ ರಕ್ಷಣೆ ಮತ್ತು ಪಾದಚಾರಿ ಲೆಗ್ ರಕ್ಷಣೆ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿತು. ಒಟ್ಟಾರೆಯಾಗಿ, ಜಪಾನ್ ನಲ್ಲಿ ನಡೆದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ವಿಫ್ಟ್ 197 ಅಂಕಗಳಲ್ಲಿ 117.80 ಅಂಕಗಳೊಂದಿಗೆ 4-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಹೊಸ ಸ್ವಿಫ್ಟ್ ಕಾರಿನ ಬೆಲೆ ಹೀಗಿದೆ :
ಹೊಸ ಸ್ವಿಫ್ಟ್ ಕಾರಿನ ಬೆಲೆ 6.5 ಲಕ್ಷದಿಂದ ರೂ. 10 ಲಕ್ಷ ರೂ. ನಡುವೆ ಬೆಲೆಯನ್ನು ನಿರೀಕ್ಷಿಸಲಾಗಿದೆ. ಇದು ರೆನಾಲ್ಟ್ ಟ್ರೈಬರ್, ಮಾರುತಿ ವ್ಯಾಗನ್ ಆರ್, ಮಾರುತಿ ಸೆಲೆರಿಯೊ, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗೆ ಸ್ಪರ್ಧೆ ನೀಡಬಹುದು ಎನ್ನಲಾಗುತ್ತಿದೆ. ಆದಾಗ್ಯೂ, ಅದರ ದೊಡ್ಡ ಪ್ರತಿಸ್ಪರ್ಧಿ ಹ್ಯುಂಡೈ ಗ್ರಾಂಡ್ i10 ನಿಯೋಸ್, ಕಳೆದ 17 ವರ್ಷಗಳಲ್ಲಿ ಅನೇಕ ತಲೆಮಾರುಗಳಲ್ಲಿ ಅದರ ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾಗಿದೆ.
ಹೊಸ ಕಾರಿನ ವಿಶೇಷತೆಗಳೇನು?:
ಜಪಾನ್ ನಲ್ಲಿ, ಸ್ವಿಫ್ಟ್ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಲಭ್ಯವಿದೆ. ಇಂಡಿಯಾ-ಸ್ಪೆಕ್ ಸ್ವಿಫ್ಟ್ ಹೈಬ್ರಿಡ್ ಮತ್ತು ಎಡಬ್ಲ್ಯುಡಿ ಆವೃತ್ತಿಗಳನ್ನು ಪಡೆಯುವುದಿಲ್ಲ. ಆದರೆ ಸಿವಿಟಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಎಎಂಟಿ ಆಯ್ಕೆಯೊಂದಿಗೆ ಬದಲಾಯಿಸಬಹುದು. ಹೊಸ ಸ್ವಿಫ್ಟ್ ಪ್ಯಾಕ್‌ನಲ್ಲಿ 9 ಇಂಚಿನ ಟಚ್ ಸ್ಕ್ರೀನ್, ಆಟೋ ಎಸಿ, 360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಮಾರುತಿ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಿದೆ. ಹೊಸ ಸ್ವಿಫ್ಟ್ ಕಾರಿನ ಎಂಜಿನ್‌ನಲ್ಲಿ 12V ನ ಮೈಲ್ಡ್ ಹೈಬ್ರಿಡ್ ಸಹ ಇರಲಿದ್ದು, ಇದರಿಂದ ಈ ಕಾರಿನ ಮೈಲೇಜ್ 35 ಕಿಮೀ ವರೆಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಮಾರುತಿ ಸ್ವಿಫ್ಟ್ ಕಾರು, 1.2 ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಅನ್ನು ಒಳಗೊಂಡಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸ್ವಿಫೃ ಇದೇ ರೀತಿಯ ಸುರಕ್ಷತಾ ಸಾಮರ್ಥ್ಯವನ್ನು ತೊರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಭಾರತದಲ್ಲಿ ಕೆಲವು ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಮುಂಬರುವ ಸ್ವಿಫ್ಟ್ ಮಾದರಿಯ ಪ್ರಿ-ಬುಕಿಂಗ್‌ಗಳನ್ನು ಅನಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರು ಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ.