ಗಾಂಧಿನಗರ, ಏ.28 www.bengaluruwire.com : ಗುಜರಾತ್ ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್ಲಿನ ಕರಾವಳಿಯಲ್ಲಿ 602 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ಈ ಸಂಬಂಧ 14 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿದೆ.
ಈ 14 ಮಂದಿಯ ಬಳಿ ಅವರ ಬಳಿ 602 ಕೋಟಿ ಮೌಲ್ಯದ 86 ಕೆಜಿಗಳಷ್ಟು ನಿಷೇಧಿತ ಮಾದಕ ದ್ರವ್ಯಗಳು ಇರುವುದು ಪತ್ತೆಹಚ್ಚಿ ಅವುಗಳನ್ನು ಎಟಿಎಸ್ ಹಾಗೂ ಎನ್ ಸಿಬಿ ವಶಪಡಿಸಿಕೊಂಡಿದೆ.
ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಕಿಸ್ತಾನಿ ಪ್ರಜೆಗಳು, ಎಟಿಎಸ್ ಅಧಿಕಾರಿಗಳ ಮೇಲೆ ದೋಣಿಯನ್ನು ಚಲಾಯಿಸಲು ಪ್ರಯತ್ನಿಸಿದರು. ಈ ವೇಳೆ ಗುಂಡಿನ ದಾಳಿಯೂ ನಡೆದಿದೆ. ಭದ್ರತಾ ಏಜೆನ್ಸಿಗಳು ಕಳೆದ ಎರಡು ದಿನಗಳಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಬಳಿ ಅಂದರೆ ಭಾರತದ ಪ್ರಾದೇಶಿಕ ಜಲ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.