ಬೆಂಗಳೂರು, ಏ.25 www.bengaluruwire.com : ಚಿಕ್ಕಪೇಟೆ ವ್ಯಾಪ್ತಿಯಲ್ಲಿ ನಾಲ್ಕೈದು ಮಂದಿ ಕುಟುಂಬದವರಂತೆ ವಸ್ತ್ರ ಮತ್ತಿತರ ವಸ್ತುಗಳ ಖರೀದಿ ಸೋಗಿನಲ್ಲಿ ಆಗಮಿಸಿ ಬಟ್ಟೆ ಮತ್ತಿತರ ವಸ್ತುಗಳನ್ನು ಕದ್ದೊಯ್ದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಏ.21ರಂದು ಮಹಾವೀರ ಜಯಂತಿ ದಿನದಂದು ಮಧ್ಯಾಹ್ನ 12.30ಕ್ಕೆ ಈ ಘಟನೆ ಸಂಭವಿಸಿದೆ. ಈ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ. ಸುದರ್ಶನ್ ಸಿಲ್ಕ್, ಭೈರಪ್ಪ ಎಂಡ್ ಸನ್ಸ್ ಹಾಗೂ ರಾಜಾ ಮಾರ್ಕೆಟ್ ಮಧ್ಯದಲ್ಲಿನ ರಜತಾ ಕಾಂಪ್ಲೆಕ್ಸ್ ನಲ್ಲಿ ಪೂನಾಗರ್ ಎಂಬ ವಸ್ತ್ರದ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಮೂವರು ಮಹಿಳೆಯರು, ಒಬ್ಬ ಬಾಲಕ ಹಾಗೂ ಒಬ್ಬ ಸಣ್ಣ ಹುಡುಗಿಯರಿದ್ದ ತಂಡವು ಈ ಕೃತ್ಯ ನಡೆಸಿದ್ದು, ಅವರು ಕಾಂಪ್ಲೆಕ್ಸ್ ಗೆ ಆಗಮಿಸಿ, ಬಟ್ಟೆ ಕದ್ದು ನಿರ್ಗಮಿಸಿದ ವಿಡಿಯೋ ಸಿಸಿ ಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.
“ಮಧ್ಯಪ್ರದೇಶದಿಂದ ಗ್ರಾಹಕರೊಬ್ಬರು ಶನಿವಾರವೇ ನಮ್ಮ ಅಂಗಡಿಗೆ ಬಂದು 48,000 ರೂ. ಮೌಲ್ಯದ ಕುರ್ತೀಸ್, ಗಾಗ್ರಾ ಮತ್ತಿತರ ವಸ್ತ್ರವನ್ನು ಖರೀದಿಸಿ ಎರಡು ಕವರ್ ಗಳನ್ನು ನಮ್ಮ ಅಂಗಡಿಯಲ್ಲಿ ಇಟ್ಟಿದ್ದರು. ಭಾನುವಾರ ಪಾರ್ಸಲ್ ಮಾಡ
ಲು ರಜೆ ಇದ್ದಿದ್ದರಿಂದ ಸೋಮವಾರ ಕಳಿಸಬೇಕು ಅಂತ ಅಂದುಕೊಂಡಿದ್ದೆ. ಪ್ಯಾಸೇಜ್ ಕಾರಿಡಾರ್ ನಲ್ಲಿಟ್ಟಿದ್ದೆವು. ನಮ್ಮ ಹುಡುಗರು ಪಾರ್ಸೆಲ್ ಕಳಿಸಿದ್ದಾರೆಂದು ಅಂದುಕೊಂಡಿದ್ದೆ. ಏ.24ರಂದು ಆ ವಸ್ತ್ರ ಖರೀದಿಸಿದ ಗ್ರಾಹಕರು ಫೋನ್ ನನಗೆ ಕೇಳಿದಾಗ, ನಮ್ಮ ಕೆಲಸದ ಹುಡುಗರನ್ನು ಮಂಗಳವಾರ ಮಧ್ಯಪ್ರದೇಶದ ಗ್ರಾಹಕರಿಗೆ ವಸ್ತ್ರಗಳನ್ನು ಪಾರ್ಸೆಲ್ ಕಳಿಸಿದ್ರಾ ಅಂತ ಕೇಳಿದಾಗ ಅವರಿಂದ ಇಲ್ಲ ಎಂಬ ಮಾಹಿತಿ ಬಂತು. ಆಗ ನಮ್ಮಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ನಮ್ಮಲ್ಲಿ ಖರೀದಿಸಿಟ್ಟ ಆ ಗ್ರಾಹಕರ ಬಟ್ಟೆ ಕಳುವಾಗಿರುವ ವಿಷಯ ಬೆಳಕಿಗೆ ಬಂದಿತ್ತು” ಎಂದು ಹೇಳುತ್ತಾರೆ ಪೂನಾಗರ್ ವಸ್ತ್ರದ ಅಂಗಡಿ ಮಾಲೀಕ ಭರತ್ ರಾಥೋಡ್.

“ನಾವು ಮಾರಾಟ ಮಾಡಿದ 25 ಕೆಜಿ ವಸ್ತ್ರವನ್ನು ಸೋಮವಾರ ಅಥವಾ ಮಂಗಳವಾರ ಪಾರ್ಸೆಲ್ ನಲ್ಲಿ ಆ ಗ್ರಾಹಕರು ನೀಡಿದ ವಿಳಾಸಕ್ಕೆ ಪಾರ್ಸೆಲ್ ಮಾಡಲೆಂದು ಕವರ್ ನಲ್ಲಿ ಅಂಗಡಿ ಮುಂಭಾಗದ ಶೆಲ್ಫ್ ನಲ್ಲಿ ಇಟ್ಟಿದ್ದೆವು. ಆಗ ಮೂವರು ಹೆಂಗಸರು ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಹುಡುಗಿ ಇದ್ದ ಫ್ಯಾಮಿಲಿ ಗ್ಯಾಂಗ್ ವಸ್ತ್ರಗಳಿಟ್ಟ ಬಿಳಿಯ ಕವರ್ ಅನ್ನು ಬಹಳ ಸುಲಭವಾಗಿ ಕದ್ದು ಹೋಗಿದ್ದಾರೆ. ಇದು ಸಣ್ಣ ಮೊತ್ತದ ವಸ್ತು ಆಗಿರಬಹುದು, ಆದರೆ ದಿನಕ್ಕೆ ಕೋಟಿಗಟ್ಟಲೆ ವ್ಯವಹಾರ ನಡೆಯುವ ಚಿಕ್ಕಪೇಟೆಯಂತಹ ಜಾಗದಲ್ಲಿ ಹೀಗೆ ಬಿಟ್ಟರೆ ದೊಡ್ಡ ಮಟ್ಟದ ಕಳವು ಪ್ರಕರಣ ಆಗಬಹುದು. ಹೀಗಾಗಿ ಈ ಐವರು ತಂಡವನ್ನು ಪೊಲೀಸರು ಕೂಡಲೇ ಹುಡುಕಿ ಬಂಧಿಸಬೇಕು. ಇಂತಹ ಪ್ರಕರಣಗಳು ಮತ್ತೊಮ್ಮೆ ಮರುಕಳಿಸಬಾರದು” ಎಂದು ಭರತ್ ರಾಥೋಡ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.