ನವದೆಹಲಿ, ಮಾ.27 www.bengaluruwire.com : ದೇಶದಲ್ಲಿ ಕರ್ನಾಟಕವೂ ಸೇರಿದಂತೆ 2024 ರ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದಲ್ಲಿನ ಚುನಾವಣೆಗೆ ಅಭ್ಯರ್ಥಿಗಳು ನಾಮ ನಿರ್ದೇಶನ ಸಲ್ಲಿಸುವ ಪ್ರಕ್ರಿಯೆ ನಾಳೆಯಿಂದ ಪ್ರಾರಂಭವಾಗಲಿವೆ. ಅದೇ ರೀತಿ ಲೋಕಸಭೆ 2024 ರ ಸಾರ್ವತ್ರಿಕ ಚುನಾವಣೆಯು 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 88 ಸಂಸದೀಯ ಕ್ಷೇತ್ರಗಳಿಗೆ (PCs) ಗೆಜೆಟ್ ಅಧಿಸೂಚನೆಯನ್ನು ನಾಳೆ ಅಂದರೆ ಮಾ.28 ರಂದು ಬಿಡುಗಡೆ ಮಾಡಲಾಗುತ್ತದೆ.
ಲೋಕಸಭಾ ಚುನಾವಣೆ 2ನೇ ಹಂತದಲ್ಲಿ ಮಣಿಪುರದಲ್ಲಿ (ಮಣಿಪುರ ಹೊರಭಾಗ) ಒಂದು ಭಾಗದ ಲೋಕಸಭಾ ಸ್ಥಾನವೂ ಸೇರಿದಂತೆ ಈ 88 ಕ್ಷೇತ್ರಗಳಲ್ಲಿ ಮತದಾನವು ಏ.26 ರಂದು ನಡೆಯಲಿದೆ. 1 ನೇ ಹಂತಕ್ಕೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯಲ್ಲಿ ಮಣಿಪುರ ಹೊರಭಾಗದ ಲೋಕಸಭಾ ಸ್ಥಾನಕ್ಕೂ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಮಣಿಪುರ ಹೊರಭಾಗದ 15 ಕ್ಷೇತ್ರಗಳಿಗೆ ಏ.19 ರಂದು (ಹಂತ 1) ಚುನಾವಣೆ ನಡೆಯಲಿದೆ. ಅದೇ ರೀತಿ 13 ಸ್ಥಾನ ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು (2ನೇ ಹಂತದಲ್ಲಿ) ಚುನಾವಣೆ ನಡೆಯುತ್ತವೆ.
ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ, ಮಣಿಪುರದ ಒಂದು ಭಾಗ ಹೊರತುಪಡಿಸಿ (ಔಟರ್ ಮಣಿಪುರ) 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 2ನೇ ಹಂತದಲ್ಲಿ ಚುನಾವಣೆಗೆ ನಡೆಯಲಿದೆ.
ಎಲ್ಲಾ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2ನೇ ಹಂತ 2 ರಲ್ಲಿ ಏ.4ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ ಏಪ್ರಿಲ್ 5 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 6 ಆಗಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಏ.8 ಕೊನೆಯ ದಿನಾಂಕವಾಗಿರುತ್ತದೆ. ಜೂ.4ರಂದು ಈ ಎಲ್ಲಾ 89 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದೆ.
ನಾಮಪತ್ರ ಸಲ್ಲಿಸುವ ಸಮಯ :
ಲೋಕಸಭಾ ಚುನಾವಣೆಗೆ ಮಾ.28 ರಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, ಪ್ರತಿ ನಿತ್ಯ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ (ಸಾರ್ವತ್ರಿಕ ರಜೆ ದಿನವನ್ನು ಹೊರತುಪಡಿಸಿ) ಸಲ್ಲಿಸಬಹುದಾಗಿದೆ.
18ನೇ ಲೋಕಸಭೆಯ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗುತ್ತದೆ ಮತ್ತು ನಂತರದ ಹಂತಗಳು ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.