ಬೆಂಗಳೂರು, ಮಾ.25 www.bengaluruwire.com : ಲೋಕಸಭಾ ಚುನಾವಣೆಯ ಮಾದರಿ ನೀತಿಸಂಹಿತೆ (MCC) ಜಾರಿಗೆ ಬಂದ ಮಾ.16ರಿಂದ ಮಾ.25ರ ವರೆಗೆ ಚುನಾವಣೆ ಅಕ್ರಮ ಸಂಬಂಧ ಇದುವರೆಗೆ 2,83,83,179 (2.83 ಕೋಟಿ) ರೂ. ಮೌಲ್ಯದ ನಗದು, ಮದ್ಯ, ಮಾದಕವಸ್ತು, ಚಿನ್ನ ಬೆಳ್ಳಿ ಆಭರಣ, ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಒಟ್ಟಾರೆ 240 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ.
ಮಾ.25ರ ಒಂದೇ ದಿನದಲ್ಲಿ 1,51,621 ಮೌಲ್ಯದ 216.505 ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದಲ್ಲದೇ ಬರೋಬ್ಬರಿ 17 ಕೆಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಅದರ ಮೌಲ್ಯ 1,87,800 ಆಗಿದೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಎಫ್‌ಐಆರ್ ದಾಖಲಿಸಲಾಗಿದೆ. 30,000 ಮೌಲ್ಯ ಒಂದು ವಾಹನ ಕೂಡ ಸೀಜ್ ಮಾಡಿರುವುದಾಗಿ ಬಿಬಿಎಂಪಿ ಚುನಾವಣಾ ವಿಭಾಗ ವಿಶೇಷ ಆಯುಕ್ತರು ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾ.16 ರಿಂದ ಮಾ.25ರ ಬೆಳಗ್ಗೆ 9 ಗಂಟೆಯವರೆಗೆ ಒಟ್ಟಾರೆ 10 ದಿನಗಳಲ್ಲಿ 67 ಲಕ್ಷ ರೂ. ನಗದು, 1.54 ಕೋಟಿ ರೂ. ಮೌಲ್ಯದ 30,908 ಲೀ ಅಕ್ರಮ ಮದ್ಯ, 3.96 ಲಕ್ಷ ರೂ. ಮೌಲ್ಯದ 21.99 ಕೆ.ಜಿ ತೂಕದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. 67,00,500 ನಗದು ಹಣ, ಗಿಫ್ಟ್, ಆಮಿಷಗಳನ್ನು ಒಡ್ಡಿದ ಸಂಬಂಧ 6,05,600 ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈವರೆಗೆ 22 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅದರ ಮೌಲ್ಯ 14,65,010 ಆಗಿದೆ. ಒಟ್ಟಾರೆ 2,83,83,179 ಹಣ, ವಸ್ತು, ಮಾದಕ ದ್ರವ್ಯ, ವಾಹನ ವಶಕ್ಕೆ ಪಡೆಯಲಾಗಿದೆ. 240 ಎಫ್‌ಐಆರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.