ನವದೆಹಲಿ/ಜಮ್ಮು, ಮಾ.13 www.bengaluruwire.com : ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ರಾಜೀನಾಮೆ ಮತ್ತು ಲೋಕಸಭಾ ಚುನಾವಣೆಗೆ ಮುನ್ನ ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಖಾಲಿ ಇರುವ ಎರಡೂ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಭಾರತದ ನೂತನ ಚುನಾವಣಾ ಆಯುಕ್ತರಾಗಿ ರಾಜೇಶ್ ಕುಮಾರ್ ಗುಪ್ತಾ ಮತ್ತು ಪ್ರಿಯಾಂಶ್ ಶರ್ಮಾ ಅವರನ್ನು ಭಾರತೀಯ ಚುನಾವಣಾ ಆಯೋಗ ನೇಮಕ ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ ಎಂದು ಪಿಐಬಿ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರ ಉನ್ನತ ಮಟ್ಟದ ಸಮಿತಿ ಈ ಇಬ್ಬರನ್ನು ಆಯ್ಕೆ ಮಾಡಿದೆ. ಈಗ ರಾಜೇಶ್ ಕುಮಾರ್ ಗುಪ್ತಾ ಮತ್ತು ಪ್ರಿಯಾಂಶ್ ಶರ್ಮಾ ಅವರ ಹೆಸರುಗಳನ್ನು ಕೇಂದ್ರ ಚುನಾವಣಾ ಆಯುಕ್ತ ಅನುಮೋದಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ರಾಜೀವ್ ಕುಮಾರ್ ಅವರ ಸಹಾಯಕರಾಗಿ ಇವರಿಬ್ಬರು ಕಾರ್ಯನಿರ್ವಹಿಸುವರು ಎಂದು ತಿಳಿಸುವ ನಕಲಿ ಗೆಜೆಟ್ ಅಧಿಸೂಚನೆಯಿರುವ ದಾಖಲೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದು ಸತ್ಯಾಂಶದಿಂದ ಕೂಡಿದ ಮಾಹಿತಿಯಲ್ಲ. ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ ಎಂದು ಪಿಐಬಿ ತನ್ನ ಎಕ್ಸ್ ಖಾತೆಯಲ್ಲಿ ದೃಢಪಡಿಸಿದೆ.
ಮಾರ್ಚ್ 9 ರಂದು ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಲೋಕಸಭಾ ಚುನಾವಣೆ 2024 ರ ಸಿದ್ಧತೆಗಳ ನಡುವೆ ರಾಜೀನಾಮೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ಮಧ್ಯೆ ಚುನಾವಣಾ ಆಯೋಗವು (Election Commission) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (SBI) ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಸ್ವೀಕರಿಸಿದೆ. ಎಲ್ಲಾ ಸಂಬಂಧಿತ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಹಂಚಿಕೊಳ್ಳುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಬುಧವಾರ ಹೇಳಿದ್ದಾರೆ.
ಏಪ್ರಿಲ್ 12, 2019 ರಿಂದ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಬ್ಯಾಂಕ್ ಈ ಮಾಹಿತಿಯನ್ನು ಮಂಗಳವಾರ ಸಂಜೆ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಎಸ್‌ಬಿಐ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಅಧಿಕೃತ ಹಣಕಾಸು ಸಂಸ್ಥೆಯಾಗಿದೆ.
ಎಸ್ ಬಿಐ ಮಾರ್ಚ್ 12 ರೊಳಗೆ ಡೇಟಾವನ್ನು ಸಲ್ಲಿಸಬೇಕಿತ್ತು. ಅವರು ನಮಗೆ ವಿವರಗಳನ್ನು ಸಮಯಕ್ಕೆ ನೀಡಿದ್ದಾರೆ. ನಾವು ಡೇಟಾವನ್ನು ನೋಡುತ್ತೇವೆ. ಅದನ್ನು ಸರಿಯಾದ ಸಮಯಕ್ಕೆ ಬಹಿರಂಗಪಡಿಸುತ್ತೇವೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ತಿಳಿಸಿದ್ದಾರೆ.