ಬೆಂಗಳೂರು, ಮಾ.7 www.bengaluruwire.com : ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್‌ಐ ನಾಗರಾಜ್.ಎ.ಆರ್ ಯೂನಿಫಾರ್ಮ್‌ನಲ್ಲಿಯೇ ಸಂಪ್‌ಗೆ ಇಳಿದು ಮಗುವನ್ನು ರಕ್ಷಿಸಿದ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕರ್ತವ್ಯ ಮುಗಿಸಿಕೊಂಡು ನಿಂಗರಾಹ್ ಮನೆಗೆ ವಾಪಸ್ ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಬಿಇಎಲ್ ಲೇಔಟ್ ಮನೆಯೊಂದರ ಮುಂಭಾಗ ಮಹಿಳೆಯರು ಕೂಗಾಡುತ್ತಿರುವುದು ಕಂಡು ಸ್ಥಳಕ್ಕೆ ತೆರಳಿದ್ದರು. 2.6 ವರ್ಷದ ಮಗು ಹತ್ತು ಅಡಿ ಆಳದ ಸಂಪ್‌ಗೆ ಬಿದ್ದಿತ್ತು. ಆ ಮಗುವನ್ನು ಮೇಲೆತ್ತಲು ಸಾಧ್ಯವಾಗದೆ ಮಹಿಳೆಯರು ಗೋಳಾಡುತ್ತಿರುವುದನ್ನು ಅರಿತ ಪಿಎಸ್‌ಐ ತಕ್ಷಣ ತಾವೇ ಸಂಪ್‌ಗೆ ಇಳಿದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗುವನ್ನು ಮೇಲೆ ಕರೆ ತಂದರು.
ನೀರಿಗೆ ಬಿದ್ದಿದ್ದ ಮಗು ಪ್ರಜ್ಞೆ ತಪ್ಪಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿಗೆ ಚಿಕಿತ್ಸೆ ಮುಂದುವರಿಸಿರುವ ವೈದ್ಯರು ಪ್ರಾಣಾಪಾಯವಿಲ್ಲ ಎಂದು ಖಚಿತಪಡಿಸಿದ್ದಾರೆ. ಪಿಎಸ್‌ಐ ನಿಂಗರಾಜ್ ಅವರು ಸಕಾಲದಲ್ಲಿ ತೋರಿದ ಕರ್ತವ್ಯ ಪ್ರಜ್ಞೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.