ಬೆಂಗಳೂರು, ಫೆ.29 www.bengaluruwire.com : ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನ ಆಯವ್ಯಯ ಇಂದು ಬೆಳಗ್ಗೆ 10.30ಕ್ಕೆ ಮಂಡನೆಯಾಗುತ್ತಿದೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಬೆಂಗಳೂರು ವೈರ್ ನಲ್ಲಿ ನೋಡಬಹುದಾಗಿದೆ.
ನಗರದ ಸರ್.ಪುಟ್ಟಣ್ಣ ಚೆಟ್ಟಿ ಪುರಭವನ (Town Hall) ದಲ್ಲಿ ಆಡಳಿತಗಾರರು ಆದ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ಉಪಸ್ಥಿತಿಯಲ್ಲಿ, ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶಿವಾನಂದ ಕಲ್ಕೆರೆ ಮಂಡಿಸುತ್ತಿದ್ದಾರೆ.
ನಗರದ ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯ ನಂತರ ಪಾಲಿಕೆಯ ವೆಬ್ ಸೈಟ್ https://bbmp.gov.in ನಲ್ಲಿ ಬಜೆಟ್ ಪ್ರತಿ ಲಭ್ಯವಾಗಲಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳೇ 2024-25ನೇ ಸಾಲಿನ ಬಜೆಟ್ ಸೇರಿದಂತೆ ಸತತ ನಾಲ್ಕನೇ ವರ್ಷ ಆಯವ್ಯಯ ಮಂಡಿಸುತ್ತಿದ್ದಾರೆ.
2023-24ನೇ ಸಾಲಿನಲ್ಲಿ ಒಟ್ಟು11,163 ಕೋಟಿ ರೂ. ಮೊತ್ತದ ಆಯವ್ಯಯವನ್ನು ಹಣಕಾಸು ವಿಭಾಗದ ಆಗಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಾರ್ಚ್ 2ರಂದು ಮಂಡಿಸಿದ್ದರು. 6.14 ಕೋಟಿ ರೂ. ಹಣ ಉಳಿತಾಯ ಬಜೆಟ್ ಅಗಲಿದೆ ಎಂದಿದ್ದರು. ಆದರೆ, ಬಜೆಟ್ನಲ್ಲಿ ಘೋಷಿಸಿದ್ದ ಯೋಜನೆಗಳು, ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳು ಶೇ. 22-25ರಷ್ಟೂ ಅನುಷ್ಠಾನವಾಗಿಲ್ಲ. ಹಲವು ಯೋಜನೆಗಳೂ ಆರ್ಥಿಕ ವರ್ಷ ಮುಕ್ತಾಯದ ಹಂತ ಸಮೀಪಿಸುತ್ತಿದ್ದರೂ ಇನ್ನೂ ಜಾರಿಗೆ ಬಂದಿಲ್ಲ.