ಬೆಂಗಳೂರು, ಫೆ.28 www.bengaluruwire.com : ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ವಿದ್ಯುತ್ ದರ ಇಳಿಕೆ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಆದೇಶ ಮಾಡಿದೆ. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. 100 ಯೂನಿಟ್‌ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಅದೇ ರೀತಿಯಾಗಿ ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 100 ಯೂನಿಟ್‌ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಅದೇ ರೀತಿಯಾಗಿ ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್‌ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ ಪ್ರತಿ ಘಟಕಕ್ಕೆ 2 ರೂಪಾಯಿ ಬೆಲೆ ಇಳಿಕೆ ಮಾಡಿದೆ. 100 ಯೂನಿಟ್‌ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್ 1 ರಿಂದಲೇ ಅನ್ವಯವಾಗಲಿದೆ.
ಐದು ವಿದ್ಯುತ್ ಸರಬರಾಜು ಕಂಪನಿಗಳು (Escoms) 2024-25ನೇ ಸಾಲಿಗೆ ವಾರ್ಷಿಕ 69,474.75 ಕೋಟಿ ರೂ.ಗಳ ಕಂದಾಯ ಅಗತ್ಯತೆಯಿದೆ. ಒಟ್ಟಾರೆ 4,863.85 ಕೋಟಿ ರೂ.ಗಳ ಕಂದಾಯ ಕೊರತೆ ಸರಿದೂಗಿಸಲು ಸರಾಸರಿಯಾಗಿ ಯೂನಿಟ್ ಗೆ 66 ಪೈಸೆ ಹೆಚ್ಚಲಕ ಮಾಡುವಂತೆ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಕೆಇಆರ್ ಸಿ ಆಯೋಗವು ವಿಚಾರಣೆ ನಡೆಸಿ ಎಸ್ಕಾಂಗಳ ಕೋರಿಕೆಗೆ ಪ್ರತಿಯಾಗಿ ಒಟ್ಟು ವಾರ್ಷಿಕ ಕಂದಾಯ ಅಗತ್ಯತೆ (ARR) ಮೊತ್ತ 64,944.54 ಕೋಟಿ ರೂ. ಗಳಿಗೆ ಅನುಮೋದನೆ ನೀಡಿದೆ. ಆರ್ಥಿಕ ವರ್ಷ 2024-25ನೇ ಸಾಲಿಗೆ ನಿವ್ವಳ ಕಂದಾಯ ಹೆಚ್ಚಳ 290.76 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ.
ವಿದ್ಯುತ್ ದರ ಇಳಿಕೆ ಕುರಿತ ವಿವರ ಈ ಕೆಳಕಂಡಂತಿದೆ :
ಎಲ್‌ಟಿ ಡೊಮೆಸ್ಟಿಕ್ ಲೈಟಿಂಗ್: 100 ಯೂನಿಟ್‌ಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್‌ಗೆ 1.10 ರೂ.ನಷ್ಟು ಕಡಿಮೆ ಮಾಡಲಾಗಿದೆ.
ಹೆಚ್ಟಿ ಕಮರ್ಷಿಯಲ್: ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 1 ರೂ. 25 ಪೈಸೆ ಕಡಿಮೆ ಮಾಡಲಾಗಿದೆ. ಅಂದರೆ ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ (ಕಿಲೋ ವೋಲ್ಟ್ ಆಂಪಿಯರ್) ರೂ.10 ರಷ್ಟು ಕಡಿಮೆ ಮಾಡಲಾಗಿದೆ.
ಹೆಚ್ಟಿ ಇಂಡಸ್ಟ್ರಿಯಲ್: ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಿದೆ.
ಹೆಚ್ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳು ಪ್ರತಿ ರೂ.10 ರಷ್ಟು ಕಡಿಮೆಯಾಗಿದೆ.
ಹೆಚ್ಟಿ ಖಾಸಗಿ ಏತ ನೀರಾವರಿ: ಪ್ರತಿ ಯೂನಿಟ್‌ಗೆ 200 ಪೈಸೆ ಕಡಿಮೆಯಾಗಿದೆ.
ಹೆಚ್ಟಿ ವಸತಿ ಅಪಾರ್ಟ್‌ಮೆಂಟ್‌ಗಳು: ಪ್ರತಿ ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಿದೆ.
ಎಲ್‌ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ.
ಎಲ್‌ಟಿ ಕೈಗಾರಿಕಾ ಸ್ಥಾಪನೆಗಳು: ಪ್ರತಿ ಘಟಕಕ್ಕೆ 100 ಪೈಸೆ ಕಡಿಮೆ ಮಾಡಲಾಗಿದೆ.
ಎಲ್‌ಟಿ ವಾಣಿಜ್ಯ ಸ್ಥಾಪನೆಗಳು: ಪ್ರತಿ ಯೂನಿಟ್‌ಗೆ 50 ರಷ್ಟು ಕಡಿಮೆಯಾಗಿದೆ.
ಕೆಇಆರ್ ಸಿ ತೀರ್ಪು ಉತ್ತೇಜನಕಾರಿಯಾಗಿದೆ :
“ಕೆಇಆರ್ ಸಿ ಈ ಬಾರಿಯ ಆದೇಶ ಸಮತೋಲಿತ ತೀರ್ಪು ನೀಡಿದೆ. ವೈಜ್ಞಾನಿಕವಾಗಿದೆ ಹಾಗೂ ಕೈಗಾರಿಕಾ ಉತ್ಪಾದನೆಗೆ ಪ್ರೋತ್ಸಾಹದಾಯಕವಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯಲು ದಿಕ್ಸೂಚಿಯಾಗಿದೆ. 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಮೊದಲು 7 ರೂ. ಪ್ರತಿ ಯೂನಿಟ್ ಇತ್ತು. ಈಗ 1.10 ರೂ. ಕಡಿಮೆಯಾಗಿದೆ. ಪ್ರೀ ಪೇಯ್ಡ್ ಮೀಟರ್ ಬಳಸುವ ಗ್ರಾಹಕರಿಗೆ ಎರಡು ತಿಂಗಳ ಕನಿಷ್ಠ ಭದ್ರತಾ ಠೇವಣಿ ಈಗ ಒಂದು ತಿಂಗಳಿಗೆ ಇಳಿಸಲಾಗಿದೆ. ಇದರಿಂದ 5.60 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಇದರಿಂದ ವಿಶೇಷ ಸಹಾಯಕವಾಗಲಿದೆ. ಒಟ್ಟಾರೆ ಕೆಇಆರ್ ಸಿ ಆದೇಶವು ಈ ಬಾರಿ ಚೈತನ್ಯದಾಯಕವಾಗಿದೆ.”
– ಎಂ.ಜಿ.ಪ್ರಭಾಕರ್, ಇಂಧನ ತಜ್ಞರು