Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

SALIGRAMA HABBA 2024 | ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಇಂದು (ಜ.17) ವೈಭವದ ವಾರ್ಷಿಕ “ಬ್ರಹ್ಮರಥೋತ್ಸವ” – LIVE

by Bengaluru Wire Desk
January 17, 2024
in News Wire, Public interest, Video
Reading Time: 1 min read
0
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರ ಅಲಂಕೃತ ಮೂರ್ತಿ (ಸಾಂದರ್ಭಿಕ ಚಿತ್ರ)

ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರ ಅಲಂಕೃತ ಮೂರ್ತಿ (ಸಾಂದರ್ಭಿಕ ಚಿತ್ರ)

ಸಾಲಿಗ್ರಾಮ, ಜ.17 www.bengaluruwire.com : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ ಕ್ಷೇತ್ರದ ವೈಭವದ ಸಾಲಿಗ್ರಾಮ ಹಬ್ಬ-2024ರ ಬ್ರಹ್ಮರಥೋತ್ಸವ ರಥಾವರೋಹಣ ಬುಧವಾರ ಬೆಳಗ್ಗೆ 10.45ಕ್ಕೆ ಸಲ್ಲುವ ಮೀನಲಗ್ನದಲ್ಲಿ ಚಾಲನೆ ದೊರೆಯಲಿದೆ. 

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ‌ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮದ ನೇರಪ್ರಸಾರ Costallive ಅವರ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದೆ. ರಥಬೀದಿಯಲ್ಲಿ ಶ್ರೀ ಗುರುನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ದೇವರ ಉತ್ಸವಮೂರ್ತಿಯನ್ನು ಹೊತ್ತ ರಥ ಗುರುನರಸಿಂಹ ದೇವಸ್ಥಾನದ ಎದುರಿನ ಶ್ರೀ ಆಂಜನೇಯ ದೇವಸ್ಥಾನದ ವರೆಗೆ ರಥೋರೋಹಣ ನಡೆಯಲಿದೆ. ಸಂಜೆ 6ಕ್ಕೆ ರಥಾವರೋಹಣ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ,  ದಿ|| ಪಾರಂಪಳ್ಳಿ ರಾಮಚಂದ್ರ ಐತಾಳರ ಶಿಷ್ಯ ವೃಂದದವರಿಂದ“ಭಕ್ತಿ ಲಹರಿ” (ಸಂಗೀತ ಸೇವೆ), ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾನಕ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ  ಅನ್ನಸಂತರ್ಪಣೆ ಸೇವೆ ಹಮ್ಮಿಕೊಳ್ಳಲಾಗಿದೆ.

ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ “ಬ್ರಹ್ಮರಥೋತ್ಸವ” ಕಾರ್ಯಕ್ರಮದ ನೇರ ಪ್ರಸಾರ (ಕೃಪೆ : ಕೋಸ್ಟಲ್ ಲೈವ್.ಕಾಮ್)

ಬೆಳಗ್ಗೆ 5.30ರಿಂದ ಗುರುನರಸಿಂಹ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿನ ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಶ್ರೀ ಗುರುನರಸಿಂಹ ಬ್ರಹ್ಮರಥೋತ್ಸವ ಹಲವು ದಶಕಗಳಿಂದ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ. ಜ.20ರ ತನಕ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಶ್ರೀ ದೇವರ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲು ಕೊಂಡೊಯ್ಯುತ್ತಿರುವ ದೃಶ್ಯದ ಸಂಗ್ರಹ ಚಿತ್ರ.

ಕೋಟ ಗ್ರಾಮದ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳ ಭಕ್ತರಲ್ಲದೆ, ದೇಶ ವಿದೇಶಗಳು ಹಾಗೂ ವಿವಿಧ ರಾಜ್ಯಗಳಲ್ಲಿರುವ ಶ್ರೀ ಗುರುನರಸಿಂಹನ ಭಕ್ತರು ಬ್ರಹ್ಮರಥೋತ್ಸವದಂದು ಒಂದೆಡೆ ಸೇರಿ, ಸಾಲಿಗ್ರಾಮ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಪಡುವುದು ಅನಾದಿ ಕಾಲದಿಂದ ಸತ್ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ.

ಶ್ರೀ ಗುರುನರಸಿಂಹ ದೇಗುಲ ಹಾಗೂ ಶ್ರೀ ಆಂಜನೇಯ ಸ್ವಾಮಿ‌ ದೇವಸ್ಥಾನದ ಬಗ್ಗೆ 360 ಡಿಗ್ರಿಯಲ್ಲಿ, ದೇವಾಲಯದ ಫೊಟೊವನ್ನು https://www.turiya.co/360/Temple/Gurunarasimha/ ಈ ಲಿಂಕ್‌ ಕ್ಲಿಕ್ ಮಾಡಿ ನೋಡಬಹುದು.

ಗುರುನರಸಿಂಹ ದೇವಸ್ಥಾನದ ಇತಿಹಾಸ ಮತ್ತು ವೈಶಿಷ್ಟ್ಯತೆ :

ಗುರುನರಸಿಂಹ ದೇಗುಲವು ಕೂಟ ಬ್ರಾಹ್ಮಣರ ಆಡಳಿತವನ್ನು ಹೊಂದಿದ ಏಕೈಕ ದೇವಸ್ಥಾನವಾಗಿದೆ. ಕೋಟ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳನ್ನೊಳಗೊಂಡ ಕೋಟ ಮಹಾಜಗತ್ತು ಅಥವಾ ಕೂಟ ಮಹಾಜಗತ್ತು ಎನ್ನುವುದಾಗಿ ಹಾಗೂ ಇಲ್ಲಿ ವಾಸಿಸುವ ಬ್ರಾಹ್ಮಣರನ್ನು ಕೂಟ ಮತಸ್ಥ ಬ್ರಾಹ್ಮಣರೆಂದು ಕರೆಯಲಾಗುತ್ತದೆ. ಇವರೆಲ್ಲರಿಗೂ ಪ್ರತ್ಯೇಕವಾದ ಮಠ ಅಥವಾ ಮಠಾಧೀಶ ಗುರು ಪರಂಪರೆ ಇಲ್ಲ. ಇವರು ಗುರುನರಸಿಂಹನನ್ನೇ ಗುರುವಾಗಿ, ಕುಲದೇವರಾಗಿ ನಂಬಿಕೊಂಡು ಬಂದವರು ಮತ್ತು ಗುರುವಿಗೆ ಸಲ್ಲಿಸಬೇಕಾದ ಗುರುಕಾಣಿಕೆ, ಹರಿಕೆ ಸೇವೆಗಳನ್ನು ನರಸಿಂಹನಿಗೆ ಸಲ್ಲಿಸುವವರು.

ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ಕ್ಷೇತ್ರವು ಒಂದಾಗಿದೆ. ಯೋಗಾನಂದ ಶ್ರೀ ಗುರುನರಸಿಂಹನೆಂದು ಕರೆಯಲ್ಪಡುತ್ತಿರುವ ಇಲ್ಲಿನ ಶ್ರೀ ದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು, ಆದಿಯಲ್ಲಿ ಶ್ರಿ ಮಹಾಗಣಪತಿ ಯಂತ್ರ ಸ್ಥಾಪಿಸಿ ಅದರ ಮೇಲೆ ಕಮಲಪತ್ರದ ಮೇಲೆ ಶ್ರೀನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀದೇವರ ವಿಗ್ರಹವು ಅರ್ಧಯೋಗ ಪಟ್ಟಾನ್ವಿತವಾಗಿದ್ದು ಇದನ್ನು ಯೋಗನರಸಿಂಹನೆಂದು ಲಕ್ಷಿತ್ರ್ಮಯು ಹೃದಯ ಭಾಗದಲ್ಲಿ ಅಂತರ್ಗತವಾಗಿರುವುದರಿಂದ ಶ್ರೀಲಕ್ಷಿತ್ರ್ಮೕನರಸಿಂಹನೆಂದು ಕರೆಯುತ್ತಾರೆ. ಸ್ವಯಂ ವ್ಯಕ್ತವಾದ ಮಹಾ ವಿಷ್ಣುವಿನ ಅಷ್ಠ ಕ್ಷೇತ್ರಗಳಲ್ಲಿಇದು ಒಂದಾಗಿದ್ದು ಶ್ರೀದೇವರ ವಿಗ್ರಹವು ಎಂಟನೇ ಶತಮಾನದ್ದಾಗಿರಬಹುದೆಂದು ಗುರುತಿಸಲಾಗಿದೆ.

ಶ್ರೀ ಆಂಜನೇಯ ಸ್ವಾಮಿ ಮೂರ್ತಿಯ ಸಾಂದರ್ಭಿಕ ಚಿತ್ರ.

ದೇವಳವು ಚರ್ತುರಶ್ವ ಸಿಂಹ ಆಯದಲ್ಲಿದ್ದು ಪ್ರಧಾನ ದೇವರು ನರಸಿಂಹ, ದಕ್ಷಿಣ ಪೌಳಿಯ ಪಶ್ಚಿಮ ಮೂಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ, ಉತ್ತರ ಪೌಳಿಯ ಪಶ್ಚಿಮ ಮೂಲೆಯಲ್ಲಿ ಗಣಪತಿ ವಿಗ್ರಹದಿಂದ ಕಂಗೊಳಿಸುತ್ತಿದ್ದರೆ, ನರಸಿಂಹನಿಗೆ ಎದುರಾಗಿ ರಥಬೀದಿ ಪಶ್ಚಿಮ ತುದಿಯಲ್ಲಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಪೌಳಿಯ ನೈರುತ್ಯ ದಿಕ್ಕಿನಲ್ಲಿ ಶಂಖ ತೀರ್ಥ ಸರೋವರದ ದಡದಲ್ಲಿ ನಾಗನ ದೇವರನ್ನು ಸ್ಥಾಪಿಸಲಾಗಿದೆ. ಶ್ರೀ ಯೋಗಾನಂದ ನರಸಿಂಹಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು ದ್ವಿಭುಜವಾಗಿದೆ. ಬಲಗೈಯಲ್ಲಿ ಚಕ್ರವೂ, ಎಡಗೈಯಲ್ಲಿ ಶಂಖವೂ ಧರಿಸಲ್ಪಟ್ಟದ್ದರಿಂದ ದೇವಳದ ಎಡಬಲಗಳಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥ ಸರೋವರಗಳಿವೆ. ಇವುಗಳ ತೀರ್ಥಸ್ನಾನ ಹಾಗೂ ನರಸಿಂಹ ಆರಾಧನೆಯಿಂದ ಬ್ರಹ್ಮಹತ್ಯಾದಿ ಸರ್ವ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನಜನಿತವಾಗಿದೆ.

ಹಿಂದೆ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು. ಆಗ ನರಸಿಂಹನ ಉಗ್ರತೆಯಿಂದ ಪೂರ್ವದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು. ಇದರಿಂದ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಅಂದರೆ ಅರಬ್ಬಿಸಮುದ್ರದ ಕಡೆ ಮುಖ ಮಾಡಿ ಸ್ಥಾಪಿಸಲಾಯಿತು. ಪಶ್ಚಿಮಬದಿಯ ಕೃಷಿಯ ಹಾನಿ ತಪ್ಪಿಸಲು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ನೇರವಾಗಿ ಎದುರಿನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವ ಇತಿಹಾಸವಿದೆ. ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಲೇಪಿಸಲಾಗುತ್ತಿದೆ. ಹಾಗೂ ಅಂದು ಸ್ಥಾಪಿಸಿದ ನಂದಾದೀಪಗಳಲ್ಲಿ ನಿರಂತರವಾಗಿ ದೀಪವು ಉರಿಯುತ್ತಿದ್ದು ದೂರ ಪ್ರಯಾಣ ಬೆಳೆಸುವರು ಸುಖ ಪ್ರಯಾಣಕ್ಕಾಗಿ ಮತ್ತು ಭಕ್ತಾದಿಗಳು ಎಣ್ಣೆಯನ್ನು ನಂದಾದೀಪಕ್ಕೆ ಹರಕೆ ರೂಪದಲ್ಲಿ ಹಾಕಿ ಪ್ರಾರ್ಥಿಸುವ ಸಂಪ್ರದಾಯ ಇಟ್ಟುಕೊಂಡಿರುತ್ತಾರೆ. ಭಕ್ತರು ಇಷ್ಟಾರ್ಥ ಪ್ರಾಪ್ತಿಗಾಗಿ ಪೂರ್ಣಾಲಂಕಾರ, ರಂಗಪೂಜೆ, ಸುಂದರಕಾಂಡ ಪಾರಾಯಣ ಸೇವೆ ಸಲ್ಲಿಸುತ್ತಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

BBMP Property Tax News | ಆಸ್ತಿ ತೆರಿಗೆ ವಿನಾಯಿತಿ, ದಂಡ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

BBMP News | ನಗರದ ನಿವಾಸಿಗಳೇ ಗಮನಿಸಿ : ನಿಮ್ಮ ಏರಿಯಾದ ಬಿಬಿಎಂಪಿ ಪಾರ್ಕ್, ಕೆರೆ ಮೇಲ್ವಿಚಾರಣೆ ಮಾಡುವ ಆಸಕ್ತಿಯಿದ್ಯಾ? ಕೂಡಲೇ ರಿಜಿಸ್ಟರ್ ಮಾಡಿ

Next Post

BBMP News | ನಗರದ ನಿವಾಸಿಗಳೇ ಗಮನಿಸಿ : ನಿಮ್ಮ ಏರಿಯಾದ ಬಿಬಿಎಂಪಿ ಪಾರ್ಕ್, ಕೆರೆ ಮೇಲ್ವಿಚಾರಣೆ ಮಾಡುವ ಆಸಕ್ತಿಯಿದ್ಯಾ? ಕೂಡಲೇ ರಿಜಿಸ್ಟರ್ ಮಾಡಿ

ತೆರಿಗೆ ವಂಚನೆ ಕುರಿತ ಸಾಂದರ್ಭಿಕ ಚಿತ್ರ

GST TAX EVASION | ಅಂತರ್ ರಾಜ್ಯ ಜಿಎಸ್ ಟಿ ವಂಚನೆ ಜಾಲ ಪತ್ತೆ : 1008 ಕೋಟಿ ರೂ. ನಕಲಿ ಬಿಲ್ ಸೃಷ್ಟಿ - ಪ್ರಮುಖ ಸೂತ್ರಧಾರಿ ಬಂಧನ

Please login to join discussion

Like Us on Facebook

Follow Us on Twitter

Recent News

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d