ಬೆಂಗಳೂರು, ಡಿ.2 www.bengaluruwire.com : ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದ ಸಂಖ್ಯೆ 65ಎ ನಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್ ನಿಂದ ಮೂರು ತಿಂಗಳುಗಳ ಕಾಲ ವಿವಿಧ ದಿನಾಂಕಗಳಂದು ನೈಋತ್ಯ ರೈಲ್ವೆಯು ರದ್ದುಗೊಳಿಸಿದೆ.
ಇದರ ಜತೆಗೆ 6 ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದ್ದು, 30 ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಚಾರ ರದ್ದುಗೊಳ್ಳುತ್ತಿರುವ, ರೈಲು ಸೇವೆ ಭಾಗಶಃ ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಿರುವ ರೈಲುಗಳ ವಿವರ ಈ ಕೆಳಕಂಡಂತಿದೆ :