ಬೆಂಗಳೂರು, ಅ.31 www.bengaluruwire.com : ನಾಡಿನ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟ ಮಾಡಿದೆ.
ವೈಯುಕ್ತಿಕ ವಿಭಾಗದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಸೇರಿದಂತೆ 68 ಪ್ರಶಸ್ತಿ ಹಾಗೂ “ಕರ್ನಾಟಕ ಸಂಭ್ರಮ-50″ರ ಅಂಗವಾಗಿ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ನಾಡು-ನುಡಿ, ಇತಿಹಾಸ, ಕ್ರೀಡೆ, ವಿಜ್ಞಾನ, ವೈದ್ಯಕೀಯ, ರಂಗಭೂಮಿ, ಯಕ್ಷಗಾನ, ಆಡಳಿತ, ಜಾನಪದ, ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸರ್ಕಾರ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷ ಪೂರ್ಣಗೊಳಿಸುತ್ತಿರುವ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ-50″ರ ಅಂಗವಾಗಿ ಇದೇ ಮೊದಲ ಬಾರಿಗೆ 10 ಸಂಘ ಸಂಸ್ಥೆಗಳಿಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಗಣ್ಯರು ಸಾಧಕರಿಗೆ, ಸಂಘ- ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳ ಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 5 ಲಕ್ಷ ನಗದು ಹಣ, 25 ಗ್ರಾಂ ಚಿನ್ನದ ಪದಕ, ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಕಂಡಂತಿದೆ :
ಚಲನಚಿತ್ರ ಕ್ಷೇತ್ರ :
* ಡಿಂಗ್ರಿ ನಾಗರಾಜ್
* ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)
ರಂಗಭೂಮಿ ಕ್ಷೇತ್ರ :
* ಎ.ಜಿ. ಚಿದಂಬರ ರಾವ್ ಜಂಬೆ
* ಪಿ. ಗಂಗಾಧರ ಸ್ವಾಮಿ
* ಹೆಚ್.ಬಿ.ಸರೋಜಮ್ಮ
* ತಯ್ಯಬಖಾನ್ ಎಂ.ಇನಾಮದಾರ
* ಡಾ.ವಿಶ್ವನಾಥ್ ವಂಶಾಕೃತ ಮಠ
* ಪಿ.ತಿಪ್ಪೇಸ್ವಾಮಿ
ಸಂಗೀತ ಕ್ಷೇತ್ರ :
* ಡಾ.ನಯನ ಎಸ್.ಮೋರೆ
* ನೀಲಾ ಎಂ ಕೊಡ್ಲಿ
* ಶಬ್ಬೀರ್ ಅಹಮದ್
* ಡಾ.ಎಸ್ ಬಾಳೇಶ ಭಜಂತ್ರಿ
ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ :
* ಟಿ.ಶಿವಶಂಕರ್
* ಕಾಳಪ್ಪ ವಿಶ್ವಕರ್ಮ
* ಮಾರ್ಥಾ ಜಾಕಿಮೋವಿಚ್
* ಪಿ.ಗೌರಯ್ಯ
ಯಕ್ಷಗಾನ ಮತ್ತು ಬಯಲಾಟ ಕ್ಷೇತ್ರ :
* ಅರ್ಗೋಡು ಮೋಹನದಾಸ ಶೆಣೈ
* ಕೆ. ಲೀಲಾವತಿ ಬೈಪಾಡಿತ್ತಾಯ
* ಕೇಶಪ್ಪ ಶಿಳ್ಳಿಕ್ಯಾತರ
* ದಳವಾಯಿ ಸಿದ್ದಪ್ಪ
ಜಾನಪದ ಕ್ಷೇತ್ರ :
* ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
* ಶಿವಂಗಿ ಶಣ್ಮರಿ
* ಮಹದೇವು
* ನರಸಪ್ಪಾ
* ಶಕುಂತಲಾ ದೇವಲಾನಾಯಕ
* ಎಚ್.ಕೆ ಕಾರಮಂಚಪ್ಪ
* ಶಂಭು ಬಳಿಗಾರ
* ವಿಭೂತಿ ಗುಂಡಪ್ಪ
* ಚೌಡಮ್ಮ
ಸಮಾಜಸೇವೆ ಕ್ಷೇತ್ರ :
* ಹುಚ್ಚಮ್ಮ ಬಸಪ್ಪ ಚೌದ್ರಿ
* ಚಾರ್ಮಾಡಿ ಹಸನಬ್ಬ
* ಕೆ.ರೂಪ್ಲಾ ನಾಯಕ್
*ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
* ನಾಗರಾಜು.ಜಿ
ಆಡಳಿತ ಕ್ಷೇತ್ರ
* ಬಲರಾಮ್, ತುಮಕೂರು
ವೈದ್ಯಕೀಯ ಕ್ಷೇತ್ರ
* ಡಾ.ಸಿ. ರಾಮಚಂದ್ರ, ಬೆಂಗಳೂರು
* ಡಾ.ಪ್ರಶಾಂತ್, ದ.ಕನ್ನಡ
ಸಾಹಿತ್ಯ ಕ್ಷೇತ್ರ
* ಪ್ರೊ. ಸಿ.ನಾಗಣ್ಣ, ಚಾಮರಾಜನಗರ
* ಸುಬ್ಬು ಹೊಲೆಯಾರ್, ಹಾಸನ
* ಸತೀಶ್ ಕುಲಕರ್ಣಿ, ಹಾವೇರಿ
* ಲಕ್ಷ್ಮೀಪತಿ ಕೋಲಾರ
* ಪರಪ್ಪ ಗುರುಪಾದಪ್ಪ ಸಿದ್ದಾಪುರ
*ಡಾ. ಕೆ ಷರೀಫಾ
ಶಿಕ್ಷಣ ಕ್ಷೇತ್ರ
* ರಾಮಪ್ಪ, ರಾಯಚೂರು
* ಕೆ.ಚಂದ್ರಶೇಖರ್, ಕೋಲಾರ
* ಕೆ.ಟಿ ಚಂದು, ಮಂಡ್ಯ
ಕ್ರೀಡಾ ಕ್ಷೇತ್ರ
* ಟಿ.ಎಸ್. ದಿವ್ಯಾ
* ಅದಿತಿ ಅಶೋಕ್
* ಅಶೋಕ್ ಗದಿಗೆಪ್ಪ ಏಣಗಿ
ಪರಿಸರ ಕ್ಷೇತ್ರ
* ಸೋಮನಾಥ ರೆಡ್ಡಿ ಪೂರ್ಮಾ
* ದ್ಯಾವನಗೌಡ ಟಿ ಪಾಟೀಲ
* ಶಿವರೆಡ್ಡಿ ಹನುಮರೆಡ್ಡಿ ವಾಸನ
ನ್ಯಾಯಾಂಗ ಕ್ಷೇತ್ರ
* ಜ. ವಿ ಗೋಪಾಲ ಗೌಡ
ಸಂಕೀರ್ಣ ಕ್ಷೇತ್ರ
*ಎಂಎಂ ಮದರಿ
*ಹಾಜಿ ಅಬ್ದುಲ್ಲಾ, ಪರ್ಕಳ
*ಮಿಮಿಕ್ರಿ ದಯಾನಂದ್
*ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
*ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ
ಮಾಧ್ಯಮ ಕ್ಷೇತ್ರ
*ದಿನೇಶ ಅಮೀನ್ಮಟ್ಟು
*ಜವರಪ್ಪ
*ಮಾಯಾ ಶರ್ಮ
*ರಫೀ ಭಂಡಾರಿ
ವಿಜ್ಞಾನ ಮತ್ತು ತಂತ್ರಜ್ಞಾನ
* ಎಸ್. ಸೋಮನಾಥನ್ ಶ್ರೀಧರ್ ಪನಿಕರ್
* ಪ್ರೊ. ಗೋಪಾಲನ್ ಜಗದೀಶ್
ಹೊರನಾಡು ಮತ್ತು ಹೊರದೇಶ
* ಸೀತಾರಾಮ ಅಯ್ಯಂಗಾರ್
* ದೀಪಕ್ ಶೆಟ್ಟಿ
* ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ
* ಪುಟ್ಟಸ್ವಾಮಿ ಗೌಡ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು
* ಕರ್ನಾಟಕ ಸಂಘ, ಶಿವಮೊಗ್ಗ
* ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
* ಮಿಥಿಕ್ ಸೊಸೈಟಿ, ಬೆಂಗಳೂರು
* ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
* ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ
* ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ
* ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
* ಚಿಣ್ಣರಬಿಂಬ, ಮುಂಬೈ
* ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
* ವಿದ್ಯಾದಾನ ಸಮಿತಿ, ಗದಗ