ಶ್ರೀಹರಿಕೋಟಾ, ಅ.21 www.bengaluruwire.com : ದೇಶದ ಮೊದಲ ಮಾನವ ಸಹಿತ ‘ಗಗನಯಾನ’ ಯೋಜನೆಗೆ (Gaganyaan mission) ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ (Unmanned flight tests) ಇಂದು ಇಸ್ರೋ ನಿರ್ಧರಿಸಿದಂತೆ ಯಶಸ್ವಿಯಾಗಿ ನೆರವೇರಿತು.
ಮೂರು ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಪ್ರಯತ್ನಿಸಿದ ಇಸ್ರೋ, ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ TV-D1 ಕ್ರ್ಯೂ ಮಾಡ್ಯೂಲ್ ಅನ್ನು ಉಡಾವಣೆ ಮಾಡಿತು. ಯಶಸ್ವಿಯಾಗಿ ಹಾರಾಟ ನಡೆಸಿದ, ಮಾನವರಹಿತ ಕ್ರ್ಯೂ ಮಾಡೆಲ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಶ್ರೀಹರಿ ಕೋಟದಿಂದ ಗಗನಮುಖಿಯಾಗಿ ಹೊರಟ ಮಾನವರಹಿತ ಪರೀಕ್ಷಾ ವಾಹನವು ಅಂದುಕೊಂಡಂತೆ ಕ್ರ್ಯೂ ಮಾಡ್ಯೂಲ್’ನ ಪರೀಕ್ಷೆಯನ್ನು ಟಿವಿ-ಡಿ1 (ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ – Tv-D1) ಮೂಲಕ ಕೈಗೊಳ್ಳಲಾಯಿತು.
ಶನಿವಾರ ಬೆಳಿಗ್ಗೆ 10ಕ್ಕೆ ಈ ಉಡಾವಣೆ ಕಾರ್ಯ ನಡೆದಿದೆ. ಈ ಪರೀಕ್ಷೆಯಲ್ಲಿ ಗಗನಯಾನಿಗಳು ಪಾರಾಗುವ ವ್ಯವಸ್ಥೆಯ (ಕ್ರೂ ಎಸ್ಕೇಪ್ ಸಿಸ್ಟಂ) ಪ್ರಾತ್ಯಕ್ಷಿಕೆಯೂ ಹಮ್ಮಿಕೊಳ್ಳಲಾಯಿತು. ಈ ಮಾಹಿತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯು (ಇಸ್ರೋ) ‘ಎಕ್ಸ್’ ಮೂಲಕ ಹಂಚಿಕೊಂಡಿದೆ.
ಇದು ಗಗನಯಾನದ ಪರೀಕ್ಷಾರ್ಥ ವಾಹನವು, ಕ್ರ್ಯೂ ಮಾಡ್ಯೂಲ್‌ನಷ್ಟೇ ಗಾತ್ರ ಮತ್ತು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಅಲ್ಲದೆ, ನೈಜ ಮಾಡ್ಯೂಲ್‌ನಲ್ಲಿರುವ ಎಲ್ಲ ವ್ಯವಸ್ಥೆಗಳು ಅಂದರೆ ಪ್ಯಾರಾಚೂಟ್, ಪತ್ತೆ ಸಾಧನ ಮತ್ತಿತರ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಇಂದು ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8 ಗಂಟೆ ಬಳಿಕ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು.
ಮುಂದಿನ ವರ್ಷದ ಕೊನೆಯ ವೇಳೆಗೆ ಮೂವರು ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶ ನೌಕೆಯು 400 ಕಿ.ಮೀ ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಸುರಕ್ಷಿತವಾಗಿ ಕರೆತರಲಾಗುತ್ತದೆ. ಇದಕ್ಕಾಗಿ ಗಗನಯಾನಿಗಳು ಕುಳಿತು ಪಯಣಿಸುವ ಕೋಶದ ಮಾದರಿ ರೀತಿಯ ಕ್ರ್ಯೂ ಮಾಡೆಲ್ ಸೃಷ್ಟಿಸಿ, ಈ ಕೋಶವನ್ನು ಮಂಗಳವಾರ ಉಡಾವಣೆ ಮಾಡಲಾಯಿತು. ಮಾನವ ಸಹಿತ ಗಗನಯಾನದಲ್ಲಿ ಮೂವರು ಗಗನಯಾನಿಗಳನ್ನು ಭೂಮಿಯ
ಪರೀಕ್ಷಾರ್ಥ ಮಾನವರಹಿತ ಕ್ರ್ಯೂ ಮಾಡ್ಯೂಲ್ ಪ್ರಯೋಗ ಹೇಗೆ ನಡೆಯಿತು?:
ಶನಿವಾರ ಬೆಳಗ್ಗೆ ನಭಕ್ಕೆ ಚಿಮ್ಮಿದ ಸುಮಾರು 60 ಸೆಕೆಂಡುಗಳಲ್ಲಿ ಭೂಮಿಯಿಂದ 1.7 ಕಿ.ಮೀ. ಕ್ಯೂ ಮಾಡ್ಯೂಲ್ ಎತ್ತರಕ್ಕೆ ತಲುಪಿ, ಗಗನನೌಕೆಯನ್ನು ಸ್ಥಗಿತಗೊಳಿಸುವ ಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ಈ ಸಮಯದಲ್ಲಿ ಕ್ಯೂ ಮಾಡ್ಯೂಲ್ ನ ವೇಗ ಶಬ್ದದ ವೇಗಕ್ಕಿಂತ 1.2 ಪಟ್ಟು ಅಧಿಕವಾಗಿತ್ತು.
ಗಗನಯಾತ್ರಿಗಳ ರಕ್ಷಣಾ ವ್ಯವಸ್ಥೆಯು (ಕ್ರ್ಯೂ ಎಸ್ಕೆಪ್ ಸಿಸ್ಟಂ) ಪ್ರತ್ಯೇಕಗೊಂಡು, ಕ್ರ್ಯೂ ಮಾಡ್ಯೂಲ್ ಅನ್ನು ಸುಮಾರು 17 ಕಿ.ಮೀ. ಎತ್ತರಕ್ಕೆ ಎಳೆಯುತ್ತದೆ. ಇದಾದ ಕೂಡಲೇ ಕ್ರ್ಯೂ ಎಸ್ಕೆಪ್ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವೇಳೆ ಈ ವ್ಯವಸ್ಥೆಯು ಗುರುತ್ವಬಲದಿಂದಾಗಿ ತಾನಾಗಿಯೇ ಕೆಳಕ್ಕೆ ಬೀಳಲಾರಂಭಿಸುತ್ತದೆ.
ಆನಂತರ 16.7 ಕಿ.ಮೀ. ಎತ್ತರದಲ್ಲಿ ಕ್ರ್ಯೂ ಮಾಡ್ಯೂಲ್ ನಲ್ಲಿರುವ ಪ್ಯಾರಾಚೂಟ್‌ಗಳು ತೆರೆಯಲ್ಪಡುತ್ತವೆ. ಆಗ ಮಾಡ್ಯೂಲ್‌ನ ವೇಗವು ತಗ್ಗುತ್ತಾ ಸೆಕೆಂಡಿಗೆ 150 ಮೀಟರ್ ಇದ್ದಿದ್ದು 50ರಿಂದ 60 ಸೆಕೆಂಡುಗಳಿಗೆ ಇಳಿಯುತ್ತದೆ. ಹೀಗೆ ಕೆಳಗಿಳಿಯುತ್ತಾ ಕ್ರ್ಯೂ ಮಾಡ್ಯೂಲ್ ಭೂಮಿಯಿಂದ 2.5 ಕಿ.ಮೀ. ಎತ್ತರಕ್ಕೆ ತಲುಪಿದಾಗ, ಪ್ರಧಾನ ಪ್ಯಾರಾಚೂಟ್ ಅನ್ನು ತೆರೆಯಲಾಗುತ್ತದೆ.
ಇನ್ನೇನು ಇದು ಸಮುದ್ರವನ್ನು ಸ್ಪರ್ಶಿಸಬೇಕು ಎನ್ನುವಷ್ಟರಲ್ಲಿ ವೇಗವು ಸೆಕೆಂಡಿಗೆ 8.5 ಮೀಟರ್ ಗೆ ಬಂದಿರುತ್ತದೆ. ಹೀಗೆ ಮಾಡ್ಯೂಲ್ ಸಮುದ್ರದಲ್ಲಿ ಇಳಿಯುತ್ತದೆ. ಇದು ತೇಲುವ ವ್ಯವಸ್ಥೆಯನ್ನು ಹೊಂದಿರುವ ಕಾರಣ, ಸಮುದ್ರದಲ್ಲಿ ಮುಳುಗದೇ ತೇಲುತ್ತಿರುತ್ತದೆ. ಕೂಡಲೇ ಸನ್ನದ್ಧ ಸ್ಥಿತಿಯಲ್ಲಿರುವ ನೌಕಾ ಪಡೆಯ ತಂಡವು ಶ್ರೀಹರಿಕೋಟಾ ಕರಾವಳಿಯಾಚೆ 10 ಕಿ.ಮೀ. ದೂರದ ಸ್ಥಳಕ್ಕೆ ತೆರಳಿ ಕ್ರ್ಯೂ ಮಾಡ್ಯೂಲ್ ಅನ್ನು ರಕ್ಷಿಸಿ ಹೊರತಂದಿದೆ.