ಬೆಂಗಳೂರು, ಸೆ.10 www.bengaluruwire.com : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಮರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರದಂದು ಬೆಂಗಳೂರು ಬಂದ್ ಆಗಲಿದೆ. ಇದರಲ್ಲಿ ಖಾಸಗಿ ಬಸ್, ಟ್ಯಾಕ್ಸಿ, ಆಟೋ ಸಿಗೋದು ಡೌಟ್ ಆಗಿದೆ.
ಆಟೋ ರಿಕ್ಷಾ, ಟ್ಯಾಕ್ಸಿಗಳು, ಏರ್ ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳು, ಮ್ಯಾಕ್ಸಿ ಕ್ಯಾಬ್, ಸ್ಕೂಲ್ ವ್ಯಾನ್ ,ಬಸ್, ಮಿನಿ ಲಗೇಜ್ ವಾಹನಗಳು, ಖಾಸಗಿ ಬಸ್ ಗಳು ಇದರಲ್ಲಿ ಬಂದ್ ನಲ್ಲಿ ಪಾಲ್ಗೊಳ್ಳುತ್ತಿವೆ.
ಅನಧಿಕೃತ ಬೈಕ್ ಟ್ಯಾಕ್ಸಿ ಬಂದ್ ಆಗಬೇಕು. ಜೀವನಾವಧಿ ತೆರಿಗೆ ಹಿಂಪಡೆಯಬೇಕು. ಆನ್ ಲೈನ್ ಹಾಗೂ ಆಫ್ ಲೈನ್ ಕಾರುಗಳಿಗೆ ಒನ್ ಸಿಟಿ ಒನ್ ರೇಟ್ ಮಾಡಬೇಕು. ಖಾಸಗಿ ಬಸ್ ಗಳನ್ನು ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಸೇರ್ಪಡಿಸಬೇಕು. ಗೂಡ್ಸ್ ವಾಹನಗಳಿಗೆ ಆನ್ ಕೈನ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಶಕ್ತಿ ಯೋಜನೆಯಿಂದ ವಾಣಿಜ್ಯ ಬಳಕೆಯ ವಾಹನ ಚಾಲಕರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಓಲಾ
ಬೆಂಗಳೂರು ಬಂದ್ ವೇಳೆ ಏನಿರುತ್ತೆ?:
ಕೆಎಸ್ ಆರ್ ಟಿಸಿ ಬಸ್, ಬಿಎಂಟಿಸಿ ಬಸ್, ಬೈಕ್ ಟ್ಯಾಕ್ಸಿ, ಸ್ವಂತ ವಾಹನಗಳ ಸಂಚಾರ ಎಂದಿನಂತಿರುತ್ತದೆ.
ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ತಯಾರಿ :
ಇದೇ ಸೋಮವಾರ ಸೆಪ್ಟೆಂಬರ್ 11 ರಂದು ಖಾಸಗಿ ಟ್ಯಾಕ್ಸಿ, ಗೂಡ್ಸ್, ಆಟೋರಿಕ್ಷಾ ಮತ್ತಿತರ ವಾಹನ ಚಾಲಕರು ಬಂದ್ ನಲ್ಲಿ ಭಾಗವಹಿಸುವುದರಿಂದ ಬೆಂಗಳೂರು ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆಯಿದೆ. ಸೋಮವಾರ ನಿಮಗೂ ಖಾಸಗಿ ವಾಹನ ಸಿಗಲ್ಲ, ನಿಮ್ಮ ಮಕ್ಕಳನ್ನ ಶಾಲೆಗೆ ಕರೆದೊಯ್ಯುಲು ಖಾಸಗಿ ವಾಹನ ಬರಲ್ಲ ಈ ಬಗ್ಗೆ ಎಚ್ಚರಿಕೆವಹಿಸಿ.
ಖಾಸಗಿ ವಾಹನಗಳು ಭಾನುವಾರ ರಾತ್ರಿ 12 ಗಂಟೆಯಿಂದಲೇ ರಸ್ತೆಗಿಳಿಯಲ್ಲ. ಸೋಮವಾರ ಮಧ್ಯರಾತ್ರಿವರೆಗೆ ಅದೇ ರೀತಿ ಪರಿಸ್ಥಿತಿ ಕಾಪಾಡುವಂತೆ ಒಕ್ಕೂಟ ಮನವಿ ಮಾಡಲಾಗಿದೆ. 30ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ಆಗಲಿವೆ.
ಬಂದ್ ರೂಪುರೇಷೆ ಹೇಗಿರುತ್ತದೆ? :
– ಭಾನುವಾರ ಮಧ್ಯ ರಾತ್ರಿಯಿಂದಲೇ ಸ್ತಬ್ದವಾಗಲಿದೆ ಖಾಸಗಿ ಸಾರಿಗೆ ಓಡಾಟ.
– ಏರ್ ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಗೊಳಿಸುವುದು.
– ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್
– ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ
– ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ
ಯಾರಿಗೆಲ್ಲ ಹೆಚ್ಚು ಪರಿಣಾಮವಾಗುವ ಸಾಧ್ಯತೆ? :
– ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಪರಿಣಾಮವಾಗುವ ಸಾಧ್ಯತೆ.
– ಏರ್ ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ಏರ್ಪೋಟ್ ಪ್ರಯಾಣಿರಿಗೆ ತೊಂದರೆಯಾಗಬಹುದು.
– ಓಲಾ, ಊಬರ್ ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ಆಟೋ ಸಿಗದೇ ಇರಬಹುದು.
– ಕಾರ್ಪೋರೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ ಗಳು ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದು ಇವು ರಸ್ತೆಗಿಳಿಯೋದು ಅನುಮಾನವಿದೆ.
-ಕಂಪನಿಗಳಿಗೆ ಹೋಗುವವರಿಗೆ ತೊಂದರೆ ಸಾಧ್ಯತೆ
– ಖಾಸಗಿ ವಾಹನಗಳ ಮೂಲಕ ಮಕ್ಕಳನ್ನ ಶಾಲೆಗೆ ಕಳುಹಿಸುವವರಿಗೂ ಬಿಸಿ ತಟ್ಟಲಿದೆ.
– ಸಾರಿಗೆ ಬಸ್ ಬಿಟ್ಟು, ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ತೊಂದರೆಯಾಗುವ ನಿರೀಕ್ಷೆಯಿದೆ.
– ಗೂಡ್ಸ್ ವಾಹನಗಳನ್ನ ಬಳಕೆ ಮಾಡುವವರಿಗೆ ವಾಹನಗಳು ಸಿಗದೇ ಇರಬಹುದು.
– ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ನಲ್ಲಿ ಭಾಗವಹಿಸಲಿವೆ.
– ಒಟ್ಟು 5ಲಕ್ಷಕ್ಕೂ ಹೆಚ್ಚು ವಾಹನಗಳು ಸ್ತಬ್ದವಾಗುವ ಸಾಧ್ಯತೆ
ಯಾರಿಂದೆಲ್ಲ ಬಂದ್ ಗೆ ಬೆಂಬಲವಿದೆ? :
-ಕರ್ನಾಟಕ ಚಾಲಕರ ಒಕ್ಕೂಟ
-ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್
– ಪೀಸ್ ಆಟೋ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್
– ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್
-ಕರ್ನಾಟಕ ರಾಜೀವ್ ಗಾಂಧಿ ಚಾಲಕರ ವೇದಿಕೆ
– ಕೆಎಸ್ ಟಿಒಎ ( KSTOA), ಕೆಎಸ್ ಬಿಒಎ (KSBOA)
– ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ
– ನಮ್ಮ ಚಾಲಕರ ಟ್ರೇಡ್ ಯೂನಿಯನ್
– ವಿಜಯಸೇನೆ ಆಟೋ ಘಟಕ
– ಜಯಕರ್ನಾಟಕ ಆಟೋ ಘಟಕ
– ಜೈ ಭಾರತ್ ಆಟೋ ಚಾಲಕರ ಸಂಘ
– ಬೆಂಗಳೂರು ಆಟೋ ಸೇನೆ
– ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್
– ಕರ್ನಾಟಕ ರಾಜ್ಯಾ ಶಾಲಾ ಮಕ್ಕಳ ವಾಹನ ಟ್ರೇಡ್ ಯೂನಿಯನ್
– ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್
– ಬೆಂಗಳೂರು ಸಾರಥಿ ಸೇನೆ
– ಕರ್ನಾಟಕ ಸಿಟಿ ಟ್ಯಾಕ್ಸ್ ಆಪರೇಟರ್ ಕಂಟ್ರೋಲರ್ ಅಸೋಸಿಯೇಷನ್
– ಕರುನಾಡು ಸಾರಥಿ ಸೇನೆ ಟ್ರೇಡ್ ಯೂನಿಯನ್
– ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ
– ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್
– ಕೆ.ಆರ್ ಪುರ ಆಟೋ ಚಾಲಕರ ಸಂಘ
-ಕರುನಾಡು ವಿಜಯ ಸೇನೆ ಚಾಲಕರ ಸಂಘ
– ಮೈಸೂರು ಬಸ್ ಮಾಲೀಕರ ಸಂಘ
-ಪ್ರೀಪೈಡ್ ಟ್ಯಾಕ್ಸಿ ಡ್ರೈವರ್ ವೆಲ್ಫೇರ್ ಅಸೋಸಿಯೇಷನ್
– ಕೆಟಿಡಿಒ (KTDO)
– ನೊಂದ ಚಾಲಕರ ವೇದಿಕೆ
– ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ
-ಶಂಕರ್ ನಾಗ್ ಆಟೋ ಸೇನೆ
-ರಾಜ್ ಕುಮಾರ್ ಆಟೋ ಸೇನೆ
-ಕರ್ನಾಟಕ ಸ್ವಾಭಿಮಾನಿ ಆಟೋ ಡ್ರೈವರ್ಸ್ ಯೂನಿಯನ್
ನೈತಿಕ ಬೆಂಬಲ:
– ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ARDU-Auto Riksha Drivers union)
– ಎಐಸಿಟಿಯು (AICTU – all india communist trade union)
– ಓಲಾ ಉಬರ್ ಮಾಲೀಕರ ಸಂಘ