ಬೆಂಗಳೂರು, ಆ.12 www.bengaluruwire.com : ಬಿಬಿಎಂಪಿ (BBMP) ಕೇಂದ್ರ ಕಚೇರಿಯ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಆಕಸ್ಮಿಕದಿಂದ ಗಾಯಗೊಂಡ 9 ಮಂದಿ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾಕೇರ್ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಉಳಿದ ಏಳು ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (BMCRI) ಯು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಪ್ರಯೋಗಾಲಯದಲ್ಲಿದ್ದವರನ್ನು ಬಿಎಂಸಿಆರ್ ಐ ನಲ್ಲಿರುವ ನ ವಿವಿಧ ವಿಭಾಗಗಳ ಮುಖ್ಯಸ್ಥರ ತಂಡವನ್ನು ನೇಮಿಸಿದ್ದು, 9 ಮಂದಿಯನ್ನು ಪರೀಕ್ಷಿಸಿದ್ದು ಪ್ರತಿಯೊಬ್ಬರಿಗೂ ವಿವಿಧ ರೀತಿಯಲ್ಲಿ ಸುಟ್ಟಗಾಯ ಹಾಗೂ ಅಗ್ನಿ ಅನಾಹುತದಲ್ಲಿ ಉಂಟಾದ ಹೊಗೆಯಿಂದಾಗಿ ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ. ಏಳು ಮಂದಿಯ ಆರೋಗ್ಯ ಸ್ಥಿರವಾಗಿದೆ.
ಒಟ್ಟಾರೆ ಒಂಭತ್ತು ಮಂದಿಯ ಉಸಿರಾಟ ವ್ಯವಸ್ಥೆಗೆ ಹಾನಿಯಾಗಿದ್ದು, ಮುಂದಿನ 24ರಿಂದ 48 ಗಂಟೆಯವರೆಗೆ ಆ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರ ಆರೋಗ್ಯ ಸ್ಥಿರತೆಗಾಗಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಬಿಎಂಸಿಆರ್ ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯ ಎಂಜಿನಿಯರ್ ಶ್ರೀನಿವಾಸ್ (40) ಕೈ ಮತ್ತು ಮುಖಕ್ಕೆ ತೀವ್ರ ಗಾಯವಾಗಿತ್ತು. ಅವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದು, ಶೇ. 25ರಷ್ಟು ಸುಟ್ಟಗಾಯಗಳಾಗಿದ್ದರೆ, ಆಪರೇಟರ್ ಜ್ಯೋತಿ (21) ಅವರಿಗೆ ಶೇ.28ರಷ್ಟು ಗಾಯಗಳಾಗಿದ್ದು ಇವರ ಪರಿಸ್ಥಿತಿಯೂ ಗಂಭೀರವಾಗಿದೆ.
ಗಣಕಯಂತ್ರ ನಿರ್ವಾಹಕ ಮನೋಜ್ (31) ಅವರಿಗೆ ಶೇ.17ರಷ್ಟು , ಕಿರಣ್ (35) ಅವರಿಗೆ ಶೇ.12, ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್(37) ಅವರಿಗೆ ಶೇ.27, ಪ್ರಥಮ ದರ್ಜೆ ಸಹಾಯಕ ಸಿರಾಜ್ (29) ಅವರಿಗೆ ಶೇ.28, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್(38) ಅವರಿಗೆ ಶೇ.18ರಷ್ಟು ಗಾಯಗಳಾಗಿದೆ. ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್(47) ಅವರಿಗೆ ಶೇ.11, ಕಾರ್ಯಪಾಲಕ ಎಂಜಿನಿಯರ್ ವಿಜಯಮಾಲಾ (27) ಅವರಿಗೆ ಶೇ.25ರಷ್ಟು ಸುಟ್ಟ ಗಾಯಗಳಾಗಿದೆ ಎಂದು ಬಿಎಂಸಿಆರ್ ಐ ನಿರ್ದೇಶಕ ಹಾಗೂ ಡೀನ್ ಡಾ.ಕೆ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ಬೆಂಜಿಮಿನ್ ರಾಸಾಯನಿಕವಿದ್ದ ಕ್ಯಾನ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಂಭತ್ತು ಮಂದಿ ಪಾಲಿಕೆ ಎಂಜಿನಿಯರ್ ಮತ್ತು ಸಿಬ್ಬಂದಿಗೆ ನಿನ್ನೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲಿಕೆ ಈ 9 ಮಂದಿಗೆ ವಿಶೇಷ ಚಿಕಿತ್ಸೆ ನೀಡುವಂತೆ ಹಾಗೂ ದುರ್ಘಟನೆ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದರು.
ಶುಕ್ರವಾರ ಸಂಜೆ 4.45ರ ಸಂದರ್ಭದಲ್ಲಿ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿ ಗುಣಮಟ್ಟ ಕುರಿತಂತೆ ಪ್ರಯೋಗ ನಡೆಯುತ್ತಿದ್ದಾಗ ಬೆಂಜಿಮಿನ್ ರಾಸಾಯನಿಕ ಸೋರಿಕೆಯಾಗಿ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿ ಕಚೇರಿ ಸಹಾಯಕ ಸುರೇಶ್ ಕುಮಾರ್ ತಿಳಿಸಿದ್ದರು.
ಬೆಂಜೀನ್ ರಾಸಾಯನಿಕ ಬಗ್ಗೆ ಮಾಹಿತಿ :
ಬೆಂಜೀನ್ ಕಚ್ಚಾ ತೈಲ ಮತ್ತು ಪೆಟ್ರೋಲ್ ಎರಡರ ನೈಸರ್ಗಿಕ ಅಂಶವಾಗಿದೆ. ಇದು ಚರ್ಮದ ಮೂಲಕ ನಿಮ್ಮ ದೇಹಕ್ಕೆ ಹೀರಲ್ಪಡುತ್ತದೆ ಅಥವಾ ನೀವು ಅದನ್ನು ಉಸಿರಾಡಿದರೆ ಮತ್ತು ದೀರ್ಘಾವಧಿಯ ಮಾನ್ಯತೆ ರಕ್ತಹೀನತೆ ಮತ್ತು ಲ್ಯುಕೇಮಿಯಾ (ಕ್ಯಾನ್ಸರ್ ಒಂದು ರೂಪ) ನಂತಹ ಗಂಭೀರ ರಕ್ತ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ಹೆಚ್ಚು ಕೇಂದ್ರೀಕರಿಸಿದ ಬೆಂಜೀನ್ ಆವಿಗಳು ಅಥವಾ ದ್ರವ ಬೆಂಜೀನ್ ಚರ್ಮದ ಮೇಲೆ ಸೋರಿಕೆಗಳು ಎರಡನೇ ಹಂತದ ಸುಟ್ಟಗಾಯಗಳಿಗೆ ಕಾರಣವಾಗಬಹುದು.