ಬೆಂಗಳೂರು, ಆ.7 www.bengaluruwire.com : ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಕುಟುಂಬದೊಂದಿಗೆ ಬ್ಯಾಂಕಾಕ್ಗೆ ತೆರಳಿದ್ದ ಸಂದರ್ಭದಲ್ಲಿ ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.
ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸ್ಪಂದನಾ ಅವರು ನಟಿಯಾಗಿ, ಸಿನಿಮಾ ನಿರ್ಮಾಣ ಮಾಡಿ ಗಮನಸೆಳೆದಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರಿ ಸ್ಪಂದನಾ ಅವರು 16 ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
ರವಿಚಂದ್ರನ್ ಜೊತೆ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ನಟಿಸಿ ಗಮನ ಸೆಳೆದಿದ್ದರು. ಇದೀಗ ಅವರು, ಬಹು ನಿರೀಕ್ಷೆಯ ‘ಕಿಸ್ಮತ್’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾದ ಪ್ರಮೋಷನ್ ಕಾರ್ಯಕ್ರಮ ಕೂಡಾ ಆಯೋಜಿತವಾಗಿತ್ತು. ಆದರೆ ಅವರು ಏಕಾಏಕಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಕುಟುಂಬದವರ ಜೊತೆಗೆ ಬ್ಯಾಂಕಾಕ್ ಪ್ರವಾಸಕ್ಕೆ ತರಳಿದ್ದ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಬ್ಯಾಂಕಾಕ್ ನಲ್ಲಿ ಅವರಿಗೆ ಹೃದಯಘಾತವಾಗಿತ್ತು, ಈ ವೇಳೆ ಅವರಿಗೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಹ ತ್ಯಜಿಸಿದ್ದಾರೆ.
ಸದ್ಯ ಅವರ ಮೃತ ದೇಹ ಬ್ಯಾಂಕಾಕ್ ಆಸ್ಪತೆಯಲ್ಲಿ ಇದ್ದು, ಅವರ ಅಪ್ಪ ಮತ್ತು ಕುಟಂಬ ವರ್ಗದವರು ಅಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಬ್ಯಾಂಕಾಕ್ಗೆ ವಿಜಯ್ ರಾಘವೇಂದ್ರ ಅವರು ತೆರಳುತ್ತಿದ್ದು, ಇಂದು ಸಂಜೆ ಅಲ್ಲಿಗೆ ತಲುಪುವ ಸಾಧ್ಯತೆ ಇದ್ದು, ನಾಳೆ ಸಂಜೆ ಹೊತ್ತಿಗೆ ಬ್ಯಾಂಕಾಕ್ನಿಂದ ಸ್ಪಂದನ ಅವರ ಮೃತ ದೇಹವನ್ನು ತರಲಾಗುತ್ತದೆ ಎಂದು ತಿಳಿದು ಬಂದಿದೆ.