ಬೆಂಗಳೂರು, ಆ.5 www.bengaluruwire.com : ಭಾರತೀ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಹೆಮ್ಮೆಯ ಚಂದ್ರಯಾನ-3 ಯೋಜನೆ ಇಂದು ಮಹತ್ವ ಮೈಲಿಗಲ್ಲು ಸಾಧಿಸಿದೆ.
ಇಂದು ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸುವ (LOI) ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ #Chandrayan3 ಅನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸುವ ಮೂಲಕ ಈ ಯೋಜನೆಯ ಮಹತ್ವದ ಘಟ್ಟವೊಂದನ್ನು ದಾಟಿದಂತಾಗಿದೆ.
ಮುಂದಿನ ಚಂದ್ರನ ಕಕ್ಷೆಯ ಸುತ್ತುವಿಕೆಯನ್ನು ನಾಳೆ (ಆಗಸ್ಟ್ 06, 2023) ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಸಮಯಕ್ಕೆ ನಿಗದಿಪಡಿಸಲಾಗಿದೆ. ಜು.14ರಂದು ಇಸ್ರೋ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಚಂದ್ರಯಾನ-3 ಉಪಗ್ರಹವನ್ನು ಉಡಾವಣೆ ಮಾಡಿತ್ತು.
ಬೆಂಗಳೂರಿನಲ್ಲಿರುವ ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ನಿಂದ ಬಾಹ್ಯಾಕಾಶ ನೌಕೆಯ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಚಂದ್ರಯಾನ-3 ರ ಎಲ್ಲಾ ವ್ಯವಸ್ಥೆಗಳು ಆರೋಗ್ಯಕರವಾಗಿವೆ ಎಂದು ಇಸ್ರೋ ಟ್ವಿಟ್ ಮಾಡಿದೆ.