ಶ್ರೀಹರಿಕೋಟಾ, ಜು.30 www.bengaluruwire.com : ಯಶಸ್ವಿಯಾಗಿ ಚಂದ್ರಯಾನ-3 ಉಪಗ್ರಹ ಉಡಾವಣೆ ಬಳಿಕ ಉತ್ಸಾಹದಲ್ಲಿರುವ ಭಾರತೀಹ ಬಾಹ್ಯಾಕಾಶ ಸಂಸ್ಥೆ (ISRO) ಭಾನುವಾರ ಬೆಳಗ್ಗೆ 6.30ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾ ಕೇಂದ್ರದಿಂದ ಸಿಂಗಾಪುರದ 7 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
360 ಕೆ.ಜಿ ತೂಕದ ‘ಡಿಎಸ್-ಎಸ್ಆರ್’ (DS-SAR Mission) ಉಪಗ್ರಹ ಮತ್ತು ಇತರ ಆರು ಉಪಗ್ರಹಗಳನ್ನು ‘ಪಿಎಸ್‌ಎಲ್‌ವಿ-ಸಿ56’ (PSLV-C56) ರಾಕೆಟ್ ಬಾನಂಗಳಕ್ಕೆ
ಹೊತ್ತೊಯ್ದಿದೆ.
ಸಿಂಗಾಪುರದ ತನಿಖಾ ಸಂಸ್ಥೆಗಳ ಉಪಗ್ರಹ ಆಧಾರಿತ ಚಿತ್ರಣದ ಅಗತ್ಯತೆಗಳನ್ನು ‘ಡಿಎಸ್-ಎಸ್‌ಆರ್’ ಪೂರೈಸಲಿದೆ. ಈ ಉಪಗ್ರಹವು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಅಪೆರ್ಚರ್ ರೇಡಾರ್ ಅನ್ನು ಹೊಂದಿದ್ದು ಇದು ಎಲ್ಲಾ ಹವಾಮಾನದಲ್ಲೂ, ಹಗಲು ಮತ್ತು ರಾತ್ರಿಯ ಸಂದರ್ಭದಲ್ಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.
ಇಸ್ರೋದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಯೋಜನೆಯಡಿ ಉಪಗ್ರಹ ಉಡಾವಣೆ ಮಾಡಲಾಗಿದ್ದು, ಈ ಯೋಜನೆಯಡಿ ಖಾಸಗಿಯವರಿಗೂ ಉಪಗ್ರಹ ಉಡಾವಣೆಗೆ ಅವಕಾಶ ನೀಡಲಾಗಿದೆ.
ಪಿಎಸ್‌ಎಲ್‌ವಿ ಉಡಾವಣೆಯ 21 ನಿಮಿಷದ ಬಳಿಕ ಡಿಎಸ್ ಎಸ್‌ಎಆರ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ. ನಂತರ ಮೂರು ನಿಮಿಷದಲ್ಲಿ ಉಳಿದ ಆರು ಉಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಈ ಬಗ್ಗೆ ಮಾತನಾಡುತ್ತಾ, ಯೋಜನೆಯು ಯಶಸ್ವಿಯಾಗಿ ಕಕ್ಷೆ ಸೇರಿದೆ. ಮುಂದಿನ ಮಿಷನ್, ಸೆಪ್ಟೆಂಬರ್ ಆರಂಭದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇಸ್ರೋ ಸಂಸ್ಥೆಯು ಪಿಎಲ್ ಎಲ್ ವಿ ಮೂಲಕ ಈ ತನಕ 58 ಉಡಾವಣೆಗಳನ್ನು ಮಾಡಿದ್ದು, ಅವುಗಳ ಪೈಕಿ 55 ರಾಕೆಟ್ ಗಳು ಯಶಸ್ವಿಯಾಗಿ ನಿಗದಿತ ಗುರಿಯತ್ತ ಉಪಗ್ರಹಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಸ್ರೋನ ಪಿಎಲ್ ಎಲ್ ವಿ ಶೇ.95ರಷ್ಟು ಯಶಸ್ಸನ್ನು ಹೊಂದಿದ್ದು, ಇಸ್ರೋವಿನ ಬಹು ವಿಶ್ವಾಸಾರ್ಹ ರಾಕೆಟ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.