ಬೆಂಗಳೂರು, ಜು.6 www.bengaluruwire.com : ನಗರದಲ್ಲಿ ಅಕ್ರಮವಾಗಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಒಟ್ಟು 17.594 ಕೆ.ಜಿ. ಗಾಂಜಾವನ್ನು ಜು.5 ರಂದು ಕಾರ್ಯಾಚರಣೆ ನಡೆಸಿ ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಒಡಿಶಾ ರಾಜ್ಯದ ನರೇಶ ಮತ್ತು ಮಧುಸ್ಮಿತಾ ಎಂಬ ಇಬ್ಬರು ಆರೋಪಿತರನ್ನು ಬಂಧಿಸಿ ಅವರ ವಿರುದ್ಧ ಎನ್ ಡಿಪಿಎಸ್ ಕಾಯ್ದೆ (NDPS ACT-1985)ಯಡಿ ಎರಡು ಪ್ರತ್ಯೇಕವಾಗಿ ಮೊಕದ್ದಮೆ ದಾಖಲಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಅಬಕಾರಿ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆ-5ರ ಅಬಕಾರಿ ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಮಾರ್ಗದರ್ಶನದಲ್ಲಿ ಉಪವಿಭಾಗ-9 ಅಬಕಾರಿ ಉಪ ಅಧೀಕ್ಷಕರಾದ ಬಸವರಾಜ ಕರಮಣ್ಣವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಸಿದ್ದಾನಾಯಕ್ ಮತ್ತು ಸಿಬ್ಬಂದಿಗಳು ಈ ದಾಳಿನಡೆಸಿದ್ದಾರೆ.
(ಸೂಚನೆ : ಮಾದಕ ವಸ್ತು ಸೇವನೆ ಹಾಗೂ ಬಳಕೆ ಕಾನೂನು ಬಾಹಿರ ಮತ್ತು ಆರೋಗ್ಯಕರ ಜೀವನಕ್ಕೆ ಹಾನಿಕಾರಕ)