ಬೆಂಗಳೂರು, ಜೂ.24 www.bengaluruwire.com : ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಿಸಲು ಈ ಹಿಂದೆ ರಚಿಸಲಾಗಿದ್ದ ‘ಬಿಬಿಎಂಪಿ ವಾರ್ಡ್‌ಗಳ ವಿಂಗಡಣಾ ಆಯೋಗ’ವನ್ನು ಸರ್ಕಾರ ಪುನರ್ ರಚಿಸಿ ಜೂನ್ 23ರಂದು ಆದೇಶ ಹೊರಡಿಸಿದೆ.
ಹೈಕೋರ್ಟ್ ನೀಡಿದ ಆದೇಶದಂತೆ ವಾರ್ಡ್‌ಗಳ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಮುಖ್ಯ ಆಯುಕ್ತರ ನೇತೃತ್ವದ ಆಯೋಗವನ್ನು ರಾಜ್ಯ ಸರ್ಕಾರ ಪುನರ್ ರಚಿಸಿದೆ. ನ್ಯಾಯಾಲಯ ನೀಡಿರುವ ಗಡುವಿನ ಒಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯಪತ್ರದಲ್ಲಿ ಸೂಚಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಆಯೋಗದ ಅಧ್ಯಕ್ಷರಾಗಿದ್ದು, ಬಿಡಿಎ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿ ಸದಸ್ಯರಾಗಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಪಾಲಿಕೆ ವಾರ್ಡ್ ಪುನರ್ ವಿಂಗಡಿಸಲು ಹೈಕೋರ್ಟ್ ಜೂನ್ 19ರಂದು 12 ವಾರಗಳ ಕಾಲಾವಕಾಶ ನೀಡಿತ್ತು. ಈ ಅವಧಿಯೊಳಗೆ ವಾರ್ಡ್‌ಗಳ ಮರು ವಿಂಗಡಣೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿದೆ.
ಬಿಬಿಎಂಪಿ ಪುನರ್ ವಿಂಗಡಣೆ ಈ ಹಿಂದೆ ಆಗಿದ್ದು ಯಾವಾಗ? :
ಬಿಬಿಎಂಪಿ 20218 ಜ.29ರಂದು ವಾರ್ಡ್‌ಗಳ ಮರು ವಿಂಗಡಣೆಗೆ ‘ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು, 20220 ಜೂನ್ 6ರಂದು ಈ ಆಯೋಗ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ, 2011ರ ಜನಗಣತಿ ಆಧಾರದ ಮೇರೆಗೆ ವಾರ್ಡ್‌ಗಳ ಪುನರ್ ವಿಗಂಡಣೆಯನ್ನು ಅಂತಿಮಗೊಳಿಸಿ 2022ರ ಜುಲೈ 14ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಈ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ 2022ರ ಸೆ.16ರಂದು ವಜಾಗೊಳಿಸಿತ್ತು. ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಬಿ.ಎನ್. ಮಂಜುನಾಥ ರೆಡ್ಡಿ ಮತ್ತು ಇತರರು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಸಂದರ್ಭದಲ್ಲಿ 20230 ಜೂನ್ 19ರಂದು ಹೈಕೋರ್ಟ್ ವಾರ್ಡ್‌ಗಳ ಪುನರ್ ವಿಂಗಡಣೆಗೆ 12 ವಾರಗಳ ಕಾಲಾವಕಾಶ ನೀಡಿದೆ.

ರಾಜ್ಯ ಸರ್ಕಾರ ಆಯೋಗಕ್ಕೆ ವಿಧಿಸಿದ ಷರತ್ತುಗಳಿವು :
- ಹೈಕೋರ್ಟ್ ಆದೇಶದಂತೆ ಅವಧಿಯೊಳಗೆ ವರದಿ ಸಲ್ಲಿಸಬೇಕು.
- ಹೈಕೋರ್ಟ್ ಆದೇಶದಂತೆ, ಸಂಬಂಧಿಸಿದ ಕಾನೂನು ಹಾಗೂ ಮಾರ್ಗಸೂಚಿಗಳ ಪ್ರಕಾರ ಹೊಸದಾಗಿ ವಾರ್ಡ್‌ಗಳ ಮರು ವಿಂಗಡಣೆ ಪ್ರಕ್ರಿಯೆ ನಡೆಸಲು ಕ್ರಮ ವಹಿಸಬೇಕು.
- ಆಯೋಗದ ಸದಸ್ಯ ಕಾರ್ಯದರ್ಶಿ ಅಗತ್ಯ ಕ್ಷೇತ್ರ ಅಧ್ಯಯನ, ಸ್ಥಳ ಪರಿಶೀಲನೆ ಕಾರ್ಯ, ಸಮಾಲೋಚನೆ ನಿರ್ವಹಿಸಬೇಕು.
- ಅಗತ್ಯವಾಗಿರುವ ಎಲ್ಲ ವ್ಯವಸ್ಥೆ ಮತ್ತು ಇತರೆ ವೆಚ್ಚಗಳನ್ನು ಬಿಬಿಎಂಪಿ ನಿಧಿಯಿಂದಲೇ ಭರಿಸಬೇಕು.