ಬೆಂಗಳೂರು, ಜೂ.21 www.bengaluruwire.com : ಬ್ರಾಂಡ್ ವೆಂಗಳೂರು ಅಭಿವೃದ್ಧಿಗೆ ಸಾರ್ವಜನಿಕರು ಸಲಹೆ ನೀಡಲು ಬೆಂಗಳೂರು ಅಭಿವೃದ್ಧಿ ಇಲಾಖೆಯು ನೂತನ ವೆಬ್ ಪೋರ್ಟಲ್ ಅನ್ನು ಆರಂಭಿಸಿದ್ದು, ಜೂ.30ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ನೀಡಲು, www.brandabengaluru.karnataka.gov.in ಎಂಬ ನೂತನ ವೆಬ್ ಪೋರ್ಟಲ್ ಪ್ರಾರಂಭಿಸಿದ್ದೇವೆ.
ಚೆನ್ನೈ, ಇಂಧೋರ್ ನಲ್ಲಿ ಉತ್ತಮ ಸಂಚಾರ ನಿರ್ವಹಣೆ ಮಾಡಲಾಗಿರುವುದು ತಿಳಿದುಬಂದಿದೆ. ಮುಂಬೈ ಆಡಳಿತಕ್ಕಾಗಿ ಏಳು ಭಾಗಗಳಾಗಿ ವಿಭಜಿಸಲಾಗಿದೆ ಈ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಬೆಂಗಳೂರಿನ ಆಚೆ ಖಾಸಗಿ, ಸರ್ಕಾರಿ ಜಾಗ ತೆಗೆದುಕೊಂಡು ಕಸ ಹಾಕುವುದು ಸರಿಯಲ್ಲ. ಮುಂದೆ ಅದು ಸಮಸ್ಯೆ ಆಗಬಹುದು. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಲಭ್ಯವಿರುವ ಸರ್ಕಾರಿ ಭೂಮಿ, ಸಂಪನ್ಮುಲ ದೃಷ್ಟಿಯಲ್ಲಿಟ್ಟುಕೊಂಡು ದೀರ್ಘಾವಧಿ ದೃಷ್ಟಿಯಿಂದ ಬ್ರಾಂಡ್ ಬೆಂಗಳೂರು ರಚನೆಗೆ ಪ್ರಯತ್ನಿಸುತ್ತೇವೆ ಎಂದರು.
ಕೆಲವು ಕಡೆ ಆಸ್ತಿ ತೆರಿಗೆ ಕಟ್ಟುತ್ತಿಲ್ಲ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಿದೆ. ಈಗೆಲ್ಲ ಸ್ಯಾಟಲೈಟ್ ಇಮೇಜ್, ನನ್ನಂತಹವರು ಆಸ್ತಿ ತೆರಿಗೆ ಕಡಿಮೆ ಲೆಕ್ಕಾಚಾರ ಮಾಡಿದ್ದೇನೆ. ಅದೇ ರೀತಿ ಬೇರೆಯವರು ಮಾಡುತ್ತಿದ್ದಾರೆ. ಇದನ್ನೆಲ್ಲ ಸರಿಪಡಿಸುವ ಕಾರ್ಯ ನಡೆಯಲಿದೆ.
ಸಿಡಿಪಿ ಮತ್ತು ಕಂದಾಯ ಇಲಾಖೆಗಳು ಒಟ್ಟಿಗೆ ಕೆಲಸ ಮಾಡಬೇಕು. ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಇವೆರಡು ಒಟ್ಟಿಗೆ ಹೋಗಬೇಕು. ಕಸದ ನಿರ್ವಹಣೆಗೆ ನಮ್ಮದೇ ಆದ ವ್ಯವಸ್ಥೆಯಿದೆ. 2014ರಿಂದ ಬೆಂಗಳೂರು ಜಲಮಂಡಳಿ ನೀರು ದರ ಏಎಇಕೆಯಾಗಿಲ್ಲ. ವಿದ್ಯುತ್ ಏರಿಕೆ ಆಗಿ ವೆಚ್ಚ ತಿಂಗಳಿಗೆ 96 ಕೋಟಿ ರೂ. ಬರುತ್ತಿದೆ. ನಗರದಲ್ಲಿ ಬಿಬಿಎಂಪಿ ಗಿಡ ಹಾಕುವಾಗ ಸ್ಥಳೀಯ ಮಕ್ಕಳೊಬ್ಬರಿಂದ ಒಂದೊಂದು ಗಿಡ ಹಾಕಿ ಅವರೇ ಅದನ್ನು ನಿರ್ವಹಣೆ ಮಾಡಿದರೆ ನಗರದಲ್ಲಿ ಹಸಿರು ವಾತಾವರಣ ಹೆಚ್ಚಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈಗಾಗಲೇ ಟೆಂಡರ್ ಕಾಮಗಾರಿ ಹಣ ಪಾವತಿಗೆ ಮುಂಚೆ ಅಂದಾಜು ವೆಚ್ಚ, ಟೆಂಡರ್ ಮೊತ್ತ, ಕಾಮಗಾರಿ ಇವನ್ನೆಲ್ಲ ಡಬಲ್ ಚೆಕ್ ಮಾಡಿಯೇ ಉಳಿದ ವಿಚಾರ. ತಾವು ಜನವರಿಯಲ್ಲೇ ಟೆಂಡರ್ ನಲ್ಲಿ ಪಾಲ್ಗೊಳ್ಳುವ ಗುತ್ತಿಗೆದಾರರಿಗೆ ಎಚ್ಚರಿಕೆ ಕೊಟ್ಟಿದ್ದೆ. ಕೆಲಸ ಮುಗಿಸಿದ ಕಾಂಟ್ರಾಕ್ಟರ್ ಗೆ ಹಣ ಪಾವತಿಸಿಲ್ಲ ಎಂದು ಅವರು ನನ್ನನ್ನ ಹೆದರಿಸಲಿ, ಟ್ರ್ಯಾಪ್ ಮಾಡಲಿ ತೊಂದರೆಯಿಲ್ಲ. ಎಲ್ಲವನ್ನು ಪರಿಶೀಲಿಸಿದ ಮೇಲಷ್ಟೆ ಹಣ ಕಾಮಗಾರಿಗಳಿಗೆ ಪಾವತಿ ಮಾಡುತ್ತೇವೆ. ಅಲ್ಲಿಯವರೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳ ಹಣ ಪಾವತಿ ಮಾಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರದ ಸಮಗ್ರ ಸುಧಾರಣೆಗೆ ಕೆಳಕಾಣಿಸಿದ ಏಳು ವಿಚಾರಗಳಲ್ಲಿ ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡಬಹುದಾಗಿದೆ :
- ಸಂಚಾರಯುಕ್ತ ಬೆಂಗಳೂರು (URBAN MOBILITY)
- ಹಸಿರು ಬೆಂಗಳೂರು (ENVIRONMENT & ECOLOGY)
- ಸ್ವಚ್ಛ ಬೆಂಗಳೂರು (SOLID WASTE MANAGEMENT)
4.ಜನಹಿತ ಬೆಂಗಳೂರು (PUBLIC PLACE UTILISATION) - ಆರೋಗ್ಯಕರ ಬೆಂಗಳೂರು (PUBLIC HEALTH AND ANIMAL HEALTH)
- ಟೆಕ್ ಬೆಂಗಳೂರು (PEOPLE FRIENDLY E GOVERNANCE)
- ಜಲಸುರಕ್ಷಾ ಬೆಂಗಳೂರು (WATER SECURITY).