ಬೆಂಗಳೂರು, ಮೇ.26 www.bengaluruwire.com : ಮನರಂಜನಾ ಆಟಗಳಿಗೆ ಪ್ರಸಿದ್ಧಿ ಪಡೆದ ವಂಡರ್‌ಲಾ ಸಂಸ್ಥೆಯು 2022-2023ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಫಲಿತಾಂಶನವನ್ನು ಪ್ರಕಟಿಸಿದ್ದು, 112.6 ಕೋಟಿ ರೂ. ಆದಾಯಗಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಂಡರ್‌ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್.ಕೆ ಚಿಟ್ಟಿಲಪ್ಪಿಳ್ಳಿ, ‘ಕೋವಿಡ್ ಬಳಿಕ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನ ಆದಾಯ ಹೆಚ್ಚಳವಾಗುತ್ತಿರುವುದು ಸಂತೋಷ ತಂದಿದೆ. 2020ರ ನಾಲ್ಕನೇ ತ್ರೈಮಾಸಿಕದ ಆದಾಯ 44.91 ಕೋಟಿ ರೂ. ಇದ್ದಿತ್ತು. ಆದರೆ ಈ ಬಾರಿ ಇದೇ ಅವಧಿಯಲ್ಲಿ 112.6 ಕೋಟಿ ರೂ.ಗೆ ತಲುಪಿದ್ದು, ಆದಾಯದ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ’ ಎಂದು ತಿಳಿಸಿದ್ದಾರೆ.
‘ಇನ್ನು ವಂಡರ್‌ಲಾ ಪಾರ್ಕ್ ಗೆ ಭೇಟಿ ನೀಡಿದವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಾ ಬಂದಿದ್ದು, ಬೆಂಗಳೂರಿನ ವಂಡರ್ ಲಾ ಪಾರ್ಕ್‌ಗೆ 2.69 ಲಕ್ಷ ಜನರು ನಾಲ್ಕನೇ ತ್ರೈಮಾಸಿಕದಲ್ಲಿ ಭೇಟಿ ನೀಡಿದ್ದಾರೆ. ಅದೇ ರೀತಿ ಕೊಚ್ಚಿ ಪಾರ್ಕ್‌ಗೆ 3.03 ಲಕ್ಷ ಹಾಗೂ ಹೈದರಾಬಾದ್ ಪಾರ್ಕ್‌ಗೆ 2.33 ಲಕ್ಷ ಜನರು ಭೇಟಿ ನೀಡಿದ್ದಾರೆ. ಇನ್ನು ರೆಸಾರ್ಟ್ ಮುಂಗಡವಾಗಿ ಕಾಯ್ದಿರಿಸುವಲ್ಲಿಯೂ ಶೇ.49ರಷ್ಟು ಹೆಚ್ಚಾಗಿದೆ.’
‘2023 ರ ವಾರ್ಷಿಕ ಆದಾಯವೂ ಪ್ರಸ್ತುತ 452.4 ಕೋಟಿ ರೂ. ಇದ್ದು, 2020-21ರ ಅವಧಿಯಲ್ಲಿ 282.9ರಷ್ಟಿತ್ತು. ವರ್ಷದಿಂದ ವರ್ಷಕ್ಕೆ ಆದಾಯದ ಪ್ರಮಾಣವೂ ಹೆಚ್ಚಳವಾಗುತ್ತಿದೆ’ ಎಂದು ಅವರು ವಿವರಿಸಿದರು.
‘ಜನಸಾಮಾನ್ಯರ ಮನರಂಜನೆಗಾಗಿ ವಂಡರ್‌ಲಾ ಸದಾ ಹೊಸತನಕ್ಕೆ ತೆರೆದುಕೊಂಡಿದೆ. ಈಗಾಗಲೇ ಸಾಕಷ್ಟು ಹೊಸ ಆಟಗಳನ್ನು ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಆಟಗಳ ಸೇರ್ಪಡೆ ಮಾಡಲಾಗುವುದು’ ಎಂದು ಹೇಳಿದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.