ಬೆಂಗಳೂರು, ಮೇ.26 www.bengaluruwire.com : ರಾಜಧಾನಿ ಬೆಂಗಳೂರನ್ನು ದೇಶದ ಪ್ರಿಂಟಿಂಗ್ ಮತ್ತು ಪ್ಯಾಕಿಂಗ್ ತಂತ್ರಜ್ಞಾನದ ರಾಜಧಾನಿಯನ್ನಾಗಿ ಮಾಡಲು ಹೊಸ ಸರ್ಕಾರವು ಕೆಲಸ ಮಾಡಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಘೋಷಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಮುದ್ರಣ ಮತ್ತು ಪ್ಯಾಕಿಂಗ್ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಮುದ್ರಕರ ಸಂಘದ ಅಧ್ಯಕ್ಷ ಸಿಆರ್.ಜನಾರ್ಧನ, ಎಫ್ಐಸಿಸಿಐ ಮತ್ತು ಅಸೋಚಾಮ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಾಕೋಬ್ ಕ್ರಾಸ್ತಾ, ಐಎಂಎಸ್ ಫೌಂಡೇಶನ್ ಎಚ್ವಿಎಸ್ ಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.