ಬೆಂಗಳೂರು, ಮೇ.26 www.bengaluruwire.com : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಬಹುಮತದ ಸರ್ಕಾರ ರಚನೆಯಾಗಿ ಇಂದಿಗೆ ಸರಿಯಾಗಿ ಏಳು ದಿನವಾಗುತ್ತಾ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ 8 ಮಂದಿ ಶಾಸಕರನ್ನು ಆಯ್ಕೆ ಮಾಡಿದ್ದು ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಶುಕ್ರವಾರ ಪುನಃ 24 ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಈ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ 8 ಮಂದಿ ಸಚಿವರಾಗಿ ಮೇ.20ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆ ಬಳಿಕ ಹೊಸ ಸಚಿವರಿಗೆ ಸೂಕ್ತ ಇಲಾಖೆಗಳನ್ನು ಹಂಚಿಕೆ ಮಾಡಿರಲಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಾಕಷ್ಟು ಚರ್ಚೆ ನಡೆಸಿ, ಅಳೆದು ತೂಗಿ ಕೊನೆಗೂ 24 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಕಾಂಗ್ರೆಸ್ ವರಿಷ್ಠರೊಂದಿಗೆ ಸುಧೀರ್ಘ ಚರ್ಚೆ ಬಳಿಕ ಈ ಪಟ್ಟಿಯನ್ನು ಸಿದ್ದಪಡಿಸಿದೆ.
ಶನಿವಾರ ಬೆಳಗ್ಗೆ 11.45ಕ್ಕೆ ರಾಜಭವನದಲ್ಲಿ ನೂತನ ಸರ್ಕಾರದ ಮಂತ್ರಿಮಂಡಲದ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಆ ಮೂಲಕ ಸಿದ್ದರಾಮಯ್ಯ ಸಂಪುಟ ಸದಸ್ಯರ ಒಟ್ಟು ಸಂಖ್ಯೆ 32ಕ್ಕೆ ಏರಿಕೆಯಾಗಲಿದೆ. ನೂತನ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾದ ಆ 24 ಶಾಸಕರ ಹೆಸರು ಈ ಕೆಳಕಂಡಂತಿದೆ :
- ಎಚ್.ಕೆ. ಪಾಟೀಲ್
- ಕೃಷ್ಣ ಬೈರೇಗೌಡ
- ಎನ್.ಚೆಲುವರಾಯಸ್ವಾಮಿ
- ಕೆ.ವೆಂಕಟೇಶ್
- ಡಾ.ಎಚ್.ಸಿ. ಮಹಾದೇವಪ್ಪ
- ಈಶ್ವರ ಖಂಡ್ರೆ
- ಕ್ಯಾತಸಂದ್ರ ಎನ್.ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಾಪುರ
- ಶಿವಾನಂದ ಪಾಟೀಲ
- ತಿಮ್ಮಾಪುರ ರಾಮಪ್ಪ ಬಾಳಪ್ಪ
- ಎಸ್.ಎಸ್.ಮಲ್ಲಿಕಾರ್ಜುನ್
- ತಂಗಡಗಿ ಶಿವರಾಜ್ ಸಂಗಪ್ಪ
- ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ್
- ಮನಕಲ್ ವೈದ್ಯ
- ಲಕ್ಷ್ಮಿ ಆರ್ ಹೆಬ್ಬಾಳ್ಕರ್
- ರಹೀಮ್ ಖಾನ್
- ಡಿ.ಸುಧಾಕರ್
- ಸಂತೋಷ್ ಎಸ್ ಲಾಡ್
- ಎನ್.ಎಸ್. ಬೋಸರಾಜು
- ಸುರೇಶ. ಬಿ.ಎಸ್.
- ಮಧು ಬಂಗಾರಪ್ಪ
- ಡಾ.ಎಂ.ಸಿ. ಸುಧಾಕರ್
- ಬಿ.ನಾಗೇಂದ್ರ