ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು, ಬ.ನ.ಸುಂದರರಾವ್ ಅವರ ಬೆಂಗಳೂರಿನ ಇತಿಹಾಸ ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು.
“ಉಪ ಮುಖ್ಯಮಂತ್ರಿ, ಗೆಳೆಯ ಶಿವಕುಮಾರ್ ಅವರಿಗೆ ಆದರ ಪೂರಕವಾಗಿ” ಎಂದು ಪುಸ್ತಕದಲ್ಲಿ ಎಸ್.ಎಂ.ಕೃಷ್ಣ ಅವರು ಬರೆದು ತಮ್ಮ ಸಹಿ ಹಾಕಿ ನೀಡಿದರು.