ಬೆಂಗಳೂರು, ಮೇ.10 www.bengaluruwire.com : ಐದು ವರ್ಷಗಳಿಗೊಮ್ಮೆ ಬರುವ ಪ್ರಜಾತಂತ್ರದ ಹಬ್ಬವಾದ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಸರಾಸರಿ ಶೇ.69.95ರಷ್ಟು ಮತದಾನವಾಗಿದೆ. ಈ ಮತದಾನವು ಅಂಚೆಮತಗಳನ್ನು ಒಳಗೊಂಡಿರುವುದಿಲ್ಲ.
ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಶೇ.65.69ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ವರೆಗೆ ಸರಾಸರಿ ಶೇ.52.18ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವರೆಗೆ ಸರಾಸರಿ ಶೇ.37.25ರಷ್ಟು ಮತದಾನವಾಗಿದ್ದರೆ. ಬೆಳಗ್ಗೆ 11.00ರ ತನಕ ಒಟ್ಟಾರೆ ಶೇ.20.99ರಷ್ಟು ಮತದಾನವಾಗಿತ್ತು. ಅಲ್ಲದೆ 9.00ರ ತನಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು ಶೇ.8.21ರಷ್ಟು ಮತದಾನವಾಗಿತ್ತು.
ಜನತಂತ್ರದ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಹೆಚ್ಚಾಗಿ ಭಾಗವಹಿಸಿ ಮತದಾನ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಜನರು ತಮ್ಮ ಹಕ್ಕು ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಹಾಗೂ ಸ್ಥಳೀಯ ಜಿಲ್ಲಾಡಳಿತಗಳು ಈ ಬಾರಿ ಸಾಕಷ್ಟು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 5,31,33,054 ಮತದಾರರಿದ್ದಾರೆ. ಅದರಲ್ಲಿ 11,71,558 ಯುವ ಮತದಾರರು, 5.71,281 ಅಂಗವಿಕಲ ಮತದಾರರು, 80 ವರ್ಷ ಮೇಲ್ಪಟ್ಟ 12,15,920 ಮತದಾರರಿದ್ದಾರೆ. 4 ಲಕ್ಷ ಒಟ್ಟು ಮತಗಟ್ಟೆ ಸಿಬ್ಬಂದಿಯು ಸರಾಗ ಮತದಾನಕ್ಕಾಗಿ ಕರ್ತವ್ಯದಲ್ಲಿದ್ದಾರೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 97,13,349 ಒಟ್ಟು ಮತದಾರರಿದ್ದಾರೆ. ಅದರಲ್ಲಿ 50,24,775 ಪುರುಷ, 46,86,813 ಮಹಿಳಾ ಮತದಾರರಿದ್ದಾರೆ. 1,761 ಲೈಂಗಿಕ ಅಲ್ಪಸಂಖ್ಯಾತರು, 2,37,206 ಮಂದಿ 80 ವರ್ಷ ಮೇಲ್ಪಟ್ಟವರು, 1,43,536 ಯುವ ಮತದಾರರು, 25,790 ಅಂಗವಿಕಲರು ಹಾಗೂ 2,107 ಅನಿವಾಸಿ ಭಾರತೀಯ ಮತದಾರರಿದ್ದಾರೆ. ಒಟ್ಟಾರೆ ವಿವಿಧ ರಾಜಕೀಯ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ 389 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಂಗಳೂರಿನಲ್ಲಿ 2013 ಹಾಗೂ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಶೇ.62 ಹಾಗೂ ಶೇ.57ರಷ್ಟು ಮತದಾನವಾಗಿತ್ತು.
ಮತದಾರರನ್ನು ಮತಕೇಂದ್ರದತ್ತ ಆಕರ್ಷಿಸಲು ಮತ್ತು ಮತದಾನ ಮಾಡುವಂತೆ ಉತ್ತೇಜಿಸಲು ಚುನಾವಣಾ ಆಯೋಗವು ನಗರದ ಕೆಲವು ಮತಕೇಂದ್ರಗಳಲ್ಲಿ ಪಿಂಕ್ ಬೂತ್, ಸಾಂಸ್ಕೃತಿಕ ಬೂತ್, ಐಟಿ ಬೂತ್, ಯಕ್ಷಗಾನ ಬೂತ್, ಬೆಂಗಳೂರಿನ ಸ್ಮಾರಕಗಳ ಥೀಮ್ ಆಧಾರಿತ ಬೂತ್, ಅರಣ್ಯ, ಕನ್ನಡ ಸಾಹಿತ್ಯ, ಚುನಾವಣಾ ಜಾಗೃತಿ ಸೇರಿದಂತೆ ಮತ್ತಿತರ ವಿವಿಧ ವಿಷಯಾಧಾರಿತ ಬೂತ್ ಗಳನ್ನು ತೆರೆದಿತ್ತು.
ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಒಟ್ಟಾರೆ ಸರಾಸರಿ ಅಂದಾಜು ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.54.45ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.50.02, ದಕ್ಷಿಣದಲ್ಲಿ ಶೇ.51.15 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.53.71ರಷ್ಟು ಮತದಾನವಾಗಿತ್ತು. ಒಟ್ಟಾರೆ ಬೆಂಗಳೂರಿನಲ್ಲಿ ಈ ಬಾರಿ ಸರಾಸರಿಯಾಗಿ ಶೇ.52.17ರಷ್ಟು ಮತ ಚಲಾವಣೆಯಾಗಿದೆಯಷ್ಟೆ.
ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಸಂಜೆ 5.00 ಗಂಟೆಯವರೆಗೆ ಆದ ಸರಾಸರಿ ಅಂದಾಜು ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.50.10ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.50.02, ದಕ್ಷಿಣದಲ್ಲಿ ಶೇ.48.63 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.52.19ರಷ್ಟು ಮತದಾನವಾಗಿತ್ತು. ಒಟ್ಟಾರೆ ಬೆಂಗಳೂರಿನಲ್ಲಿ ಈ ಅವಧಿಯಲ್ಲಿ ಶೇ.50.23ರಷ್ಟು ಮತ ಚಲಾವಣೆಯಾಗಿದೆಯಷ್ಟೆ.
ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಮಧ್ಯಾಹ್ನ 3.00 ಗಂಟೆಯವರೆಗೆ ಆದ ಸರಾಸರಿ ಅಂದಾಜು ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.40.69ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.41.19, ದಕ್ಷಿಣದಲ್ಲಿ ಶೇ.30.28 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.41.82ರಷ್ಟು ಮತದಾನವಾಗಿತ್ತು.
ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಮಧ್ಯಾಹ್ನ 1.00 ಗಂಟೆಯವರೆಗೆ ಆದ ಸರಾಸರಿ ಅಂದಾಜು ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.29.41ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.29.90, ದಕ್ಷಿಣದಲ್ಲಿ ಶೇ.30.68 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 31.54ರಷ್ಟು ಮತದಾನವಾಗಿತ್ತು.
ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ಬೆಳಗ್ಗೆ 11.00ಗಂಟೆಯವರೆಗೆ ಆದ ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.19.30ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.18.34, ದಕ್ಷಿಣದಲ್ಲಿ ಶೇ.19.18 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 17.72ರಷ್ಟು ಮತದಾನವಾಗಿತ್ತು.
ಬೆಳಗ್ಗೆ 9.00ಗಂಟೆಯವರೆಗೆ ಆದ ಮತದಾನ ಪ್ರಮಾಣ ಹೀಗಿದೆ : ಬೆಂಗಳೂರು ಕೇಂದ್ರದಲ್ಲಿ ಶೇ.7.89ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.7.55, ದಕ್ಷಿಣದಲ್ಲಿ ಶೇ.9.37 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 9.11ರಷ್ಟು ಮತದಾನವಾಗಿತ್ತು.
- ಚುನಾವಣಾ ಜಿಲ್ಲೆ – ಬಿಬಿಎಂಪಿ ಕೇಂದ್ರ ಶೇ.54.45 ಮತದಾನದ ಪ್ರಮಾಣ
ವಿಧಾನಸಭಾ ಕ್ಷೇತ್ರ | ಅಂದಾಜು ಮತದಾನದ ಪ್ರಮಾಣ |
ಚಾಮರಾಜಪೇಟೆ | 53.59% |
ಚಿಕ್ಕಪೇಟೆ | 57.60% |
ಗಾಂಧಿನಗರ | 57.28% |
ರಾಜಾಜಿನಗರ | 56.65% |
ರಾಜರಾಜೇಶ್ವರಿನಗರ | 52.56% |
ಶಾಂತಿನಗರ | 54.33% |
ಶಿವಾಜಿನಗರ | 56.59% |
- 2.ಚುನಾವಣಾ ಜಿಲ್ಲೆ : ಬಿಬಿಎಂಪಿ ಉತ್ತರ – ಶೇ.50.02 ಮತದಾನದ ಪ್ರಮಾಣ
ವಿಧಾನಸಭಾ ಕ್ಷೇತ್ರ | ಅಂದಾಜು ಮತದಾನದ ಪ್ರಮಾಣ |
ಸಿ.ವಿ.ರಾಮನ್ ನಗರ | 42.10% |
ಹೆಬ್ಬಾಳ | 52.00% |
ಕೆ.ಆರ್.ಪುರ | 49.97% |
ಮಹಾಲಕ್ಷ್ಮಿ ಲೇಔಟ್ | 53.48% |
ಮಲ್ಲೇಶ್ವರ | 52.93% |
ಪುಲಕೇಶಿನಗರ | 54.79% |
ಸರ್ವಜ್ಞನಗರ | 49.10% |
- 3.ಚುನಾವಣಾ ಜಿಲ್ಲೆ : ಬಿಬಿಎಂಪಿ ದಕ್ಷಿಣ – ಶೇ.51.15 ಮತದಾನದ ಪ್ರಮಾಣ
ವಿಧಾನಸಭಾ ಕ್ಷೇತ್ರ | ಅಂದಾಜು ಮತದಾನದ ಪ್ರಮಾಣ |
ಬಿಟಿಎಂ ಲೇಔಟ್ | 49.15% |
ಬಸವನಗುಡಿ | 51.77% |
ಬೊಮ್ಮನಹಳ್ಳಿ | 45.50% |
ಗೋವಿಂದರಾಜ ನಗರ | 53.50% |
ಜಯನಗರ | 58.00% |
ಪದ್ಮನಾಭನಗರ | 56.48% |
ವಿಜಯನಗರ | 51.96% |
- 4.ಚುನಾವಣಾ ಜಿಲ್ಲೆ : ಬೆಂಗಳೂರು ನಗರ ಜಿಲ್ಲೆ – ಶೇ.53.71 ಮತದಾನದ ಪ್ರಮಾಣ
ವಿಧಾನಸಭಾ ಕ್ಷೇತ್ರ | ಅಂದಾಜು ಮತದಾನದ ಪ್ರಮಾಣ |
ಆನೇಕಲ್ | 55.43% |
ಬೆಂಗಳೂರು ದಕ್ಷಿಣ | 46.86% |
ಬ್ಯಾಟರಾಯನಪುರ | 51.85% |
ದಾಸರಹಳ್ಳಿ | 47.42% |
ಮಹದೇವಪುರ | 55.04% |
ಯಲಹಂಕ | 57.00% |
ಯಶವಂತಪುರ | 63.69% |