ಬೆಂಗಳೂರು, ಮೇ.3 www.bengaluruwire.com : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ-1 (ಬಿಯುಡಿ-01) ಅಬಕಾರಿ ಉಪ ಆಯುಕ್ತರು ಕಛೇರಿ ವತಿಯಿಂದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಈ ವರೆಗೆ ಒಟ್ಟು 816 ದಾಳಿ ಕಾರ್ಯಚರಣೆ ನಡೆಸಿ ಒಟ್ಟು 700 ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಈ ಪ್ರಕರಣಗಳಲ್ಲಿ ಸುಮಾರು 37,757.865 ಲೀಟರ್ ಮದ್ಯ , 28,537.875 ಲೀಟರ್ ಬಿಯರ್ ಹಾಗೂ 30 ವಾಹನಗಳ ಜಪ್ತಿ ಮಾಡಲಾಗಿದ್ದು, ಅದರ ಒಟ್ಟು ಮೌಲ್ಯ 7,69,02,490 ರೂ. (ಏಳು ಕೋಟಿ ಅರವತ್ತೊಂಭತ್ತು ಲಕ್ಷದ ಎರಡು ಸಾವಿರದ ನಾಲ್ಕು ನೂರು ತೊಂಭತ್ತು ರೂಪಾಯಿ)ಗಳಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆ-1, ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.