ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ವಿನೋತ್ ಪ್ರಿಯ ಅವರನ್ನು ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸೌಹಾರ್ದಯುತವಾಗಿ ಭೇಟಿ ಮಾಡಿದರು.
ಇದೇ ವೇಳೆ ಪತ್ರಕರ್ತರು ಕೋವಿಡ್ ಗೆ ಬಲಿಯಾದ ಸಂದರ್ಭದಲ್ಲಿ ಅವರ ಕುಟುಂಬ ಅನುಭವಿಸಿದ ಕಷ್ಟಗಳನ್ನು ಕುರಿತ ಮತ್ತು ಕೆಯುಡಬ್ಲ್ಯೂಜೆ ಆ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ಕೊಡಿಸಿದ ಪ್ರಕರಣಗಳನ್ನು ಒಳಗೊಂಡ ತಗಡೂರು ಅವರ “ಕೋವಿಡ್ ಕಥೆಗಳು” ಪುಸ್ತಕವನ್ನು ಅವರಿಗೆ ನೀಡಲಾಯಿತು.