ಬೆಂಗಳೂರು, ಮೇ.2 www.bengaluruwire.com : ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ ಮರುದಿನವೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸೋಮವಾರವಾದ ಇಂದು ರಾಜ್ಯ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದೆ.
ಕಾಂಗ್ರೆಸ್ ಈಗಾಗಲೇ ಹಲವು ಗ್ಯಾರಂಟಿ ಘೋಷಣೆಯ ಮೂಲಕ ಹಲವು ಭರವಸೆಯನ್ನ ನಾಡಿನ ಜನರಿಗೆ ನೀಡಿದ್ದು, ರಾಜ್ಯ ಚುನಾವಣಾ ಪ್ರಣಾಳಿಕೆಯನ್ನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ (ಶಾಂಗ್ರಿಲಾ) ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ಮಹಿಳೆಯರಿಗೆ, ಯುವಕರ ಹಾಗೂ ರೈತರ ಸಮುದಾಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಇದೀಗ ಬಿಜೆಪಿಗೆ ಕೊಡಲು ಮತಾರರ ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ.
ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ದತೆ ಹೆಸರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು, “ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ” ಎಂದು ಘೋಷವಾಕ್ಯವನ್ನ ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯ ವಿವರ ಈ ಕೆಳಕಂಡಂತಿದೆ :
• ಗೃಹಲಕ್ಷ್ಮೀ- ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ. ಭತ್ಯೆ
• ಗೃಹ ಜ್ಯೋತಿ – ಪ್ರತಿ ಮನೆಗೂ 200 ಯೂನಿಟ್ ಉಚಿತ
ವಿದ್ಯುತ್
• ಯುವ ನಿಧಿ – ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸಿದ 18 -25 ವರ್ಷ ವಯೋಮಾನದ ಯುವಕರಿಗೆ 3 ಸಾವಿರ ರೂ. ಮಾಸಿಕ ಧನ ಹಾಗೂ ಡಿಪ್ಲೋಮಾ ಮಾಡಿದವರಿಗೆ 1500 ರೂ. ಮಾಸಿಕ ನಿರುದ್ಯೋಗ ಭತ್ಯೆ ಪಾವತಿ
ಅನ್ನಭಾಗ್ಯ- ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಉಚಿತ
ಶಕ್ತಿ- ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
• ಕೋಮು ಸೌಹಾರ್ದತೆಗಾಗಿ ಭಾರತ್ ಜೋಡೋ ಸಾಮಾಜಿಕ ಸೌಹಾರ್ದ ಸಮಿತಿ ರಚನೆ
• ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ
• ಹಳೆಯ ಪಿಂಚಣಿ ಯೋಜನೆ ಜಾರಿಗೆ ನಿರ್ಧಾರ
ಕೃಷಿ:
• ಬಿಜೆಪಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ದು ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಲ್ಲಾ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗುವುದು
*ಕೃಷಿ ಸರ್ವೋದಯ ನಿಧಿ- ಕೃಷಿ ಆಧುನೀಕರಣ, ಸಬ್ಸಿಡಿ, ಸಾಲ ಹಾಗೂ ವಿಮೆಗಳಗೆ ರೂ 1.50 ಲಕ್ಷ ಕೋಟಿ ವಿನಿಯೋಗ
*ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಂಬಲ ಬೆಲೆ ನೀತಿಯನ್ನು ಜಾರಿ ಮಾಡುವುದು
*ರೈತರಿಗೆ ಬಡ್ಡಿ ರಹಿತ ಸಾಲ ರೂ 3 ಲಕ್ಷದಿಂದ ರೂ 10 ಲಕ್ಷಕ್ಕೆ
ವಿಸ್ತರಣೆ.
ಕೃಷಿ ಉನ್ನತಿ ನಿಧಿ- ಕೃಷಿ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಉತ್ತೇಜನ
ಕೃಷಿ ಆಧಾರಿತ ಗ್ರಾಮೀಣ ಉದ್ಯಮಗಳ ಉತ್ತೇಜನಕ್ಕೆ ರೂ 200 ಕೋಟ ಹೂಡಿಕೆ
• ಗ್ರಾಮೀಣ ಪ್ರದೇಶಗಳಿಗೆ ಹಗಲಿನಲ್ಲಿ 8 ಗಂಟೆ 3 ಫೇಸ್ ವಿದ್ಯುತ್
• ಸಾವಯವ ಸರದಾರ ಯೋಜನೆ-ಸಾವಯವ ಕೃಷಿ ಉತ್ತೇಜನಕ್ಕೆ ರೂ 2,500 ಕೋಟಿ ಹೂಡಿಕೆ.
ನೀರಾವರಿ :
• ಮುಂದಿನ 5 ವರ್ಷಗಳಲ್ಲಿ ನೀರಾವರಿಗಾಗಿ ರೂ. 1.50 ಲಕ್ಷ ಕೋಟಿ ವಿನಿಯೋಗ
• ಈ ಕೆಳಕಂಡ ನೀರಾವರಿ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುವುದು:
• ಮೇಕೆದಾಟು ಯೋಜನಾ ವೆಚ್ಚ ರೂ 9,000 ಕೋಟಿ, ಮಹದಾಯಿ ರೂ 3,000 ಕೋಟಿ ಮೀಸಲು
• ಬೆಳಗಾವಿ, ಹುಬ್ಬಳ್ಳಿ ಧಾರವಾಡ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಮಹಾದಾಯಿ ಯೋಜನೆ ಅನುಷ್ಠಾನ
• ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಳಸಾ-ಬಂಡೂರಿ ಯೋಜನೆಯನ್ನು ಪೂರೈಸಲಾಗುವುದು.
*ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷದೊಳಗಡೆ
ಸಂಪೂರ್ಣಗೊಳಿಸುವುದು
• ರಾಜ್ಯದ ಪ್ರಮುಖ ನದಿಗಳ ಸ್ವಚ್ಛತೆಗಾಗಿ ವರ್ಷಕ್ಕೆ ರೂ 1 ಸಾವಿರ ಕೋಟಿ ನೆರವು
• 200 ಟಿಎಂಸಿ ಹೆಚ್ಚು ನೀರು ಶೇಕರಣೆಗೆ ತುಂಗಭದ್ರಾ ಅಣಿಕಟ್ಟನ ಹೂಳು ತೆಗೆಯುವುದು
ಪುಣ್ಯಕೋಟಿ – ನಂದಿನಿ ಹಾಲು ವಿಶೇಷ ಯೋಜನೆ
ಕನ್ನಡಿಗರ ಹೆಮ್ಮೆಯ ನಂದಿನಿಯ ಅಸ್ತಿತ್ವವನ್ನು ನಿರ್ಮೂಲನೆ ಮಾಡದಿರಲು ಕ್ರಮ
• ಮಿಷನ್ ಕ್ಷೀರ ಕ್ರಾಂತಿ- ಪ್ರತಿ ದಿನ 1.5 ಕೋಟಿ ಲೀಟರ್ ಹಾಲು
ಪಶುಸಂಗೋಪನೆ:
• ಪಶು ಭಾಗ್ಯ- ಉತ್ತಮ ತಳಿಯ ಹಸು/ಎಮ್ಮೆಖರೀದಿಗೆ ಶೂನ್ಯ ಬಡ್ಡಿದರದಲ್ಲಿ ರೂ 3 ಲಕ್ಷದವರೆಗೆ ಸಾಲ
• 1 ಸಾವಿರ ಕೋಟಿಯ ಕುರಿಗಾಹಿ ಸಂವರ್ಧನಾ ನಿಧಿ ಸ್ಥಾಪನೆ
• ಗ್ರಾಮೀಣ ಪ್ರತಿ ಪಂಚಾಯತ್‌ನಲ್ಲಿ ಗೊಬ್ಬರ ತಯಾರಿಕಾ ಕೇಂದ್ರಗಳ ಸ್ಥಾಪನೆ
- ಮತ್ಸಕ್ರಾಂತಿ- ಮೀನುಗಾರಿಕೆಯಿಂದ ರೂ 12 ಸಾವಿರ ಕೋಟಿಯ ಬ್ಲೂ ಎಕಾನಮಿ ಗುರಿ
- ಮತ್ಸಭಾಗ್ಯ- ಆಳ ಸಮುದ್ರ ಮೀನುಗಾರಿಕೆಗೆ ಪ್ರತಿ ವರ್ಷ 500 ಲೀಟರ್‌ವರೆಗೆ ತೆರಿಗೆ ಮುಕ್ತ ಡೀಸೆಲ್
• ಮೀನುಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ನೇರ ಮತ್ತು ಪರೋಕ್ಷ
ಉದ್ಯೋಗ ಸೃಷ್ಟಿ
ತೋಟಗಾರಿಕೆ:
ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು ರೂ 500 ಕೋಟಿ
• ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರಗಳಲ್ಲಿ ಪುಷ್ಪದ್ಯಮಕ್ಕೆ ವಿಶೇಷ ಪ್ಯಾಕೇಜ್
ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ ರೂ 2000 ಕೋಟಿ ಅನುದಾನ
ಗ್ರಾಮೀಣ ಮೂಲಸೌಲಭ್ಯ :
• ಹಳ್ಳಿಗಳಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಗೆ 50 ಸಾವಿರ ಕೋಟಿ ರೂ. ಹೂಡಿಕೆ
• ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಹೈಸ್ಪೀಡ್ ವೈಫೈ ಹಾಟ್‌ಸ್ಪಾಟ್ ಸ್ಥಾಪನೆ
ನಗರಾಭಿವೃದ್ಧಿ :
• ಸ್ಲಂ ಪ್ರದೇಶಗಳಿಗೆ ಶ್ರಮಿಕ ನಿವಾಸ ಪ್ರದೇಶ ಎಂದು ಮರುನಾಮಕರಣ
• 1972ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಿಕತ್ವ ಕಾಯ್ದೆಗೆ ತಿದ್ದುಪಡಿ
• ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಶಕ್ತಿಯುತಗೊಳಿಸುವುದು
• ಅಪಾರ್ಟ್‌ಮೆಂಟ್ ಪೂರ್ಣಗೊಂಡ ಮೇಲೆ ಮಾಲಿಕರಿಗೆ ಹಸ್ತಾಂತರ ಮಾಡುವ ಬಿಗಿ ಕಾನೂನು.
• ಪ್ರತಿ ವಾರ್ಡ್‌ಗಳಲ್ಲಿ ಅಪಾರ್ಟ್‌ಮೆಂಟ್ ಸಂಘ ರಚನೆ ಮತ್ತು ಮಾಹಿತಿ ನಿರ್ವಹಣೆ
• ಸರ್ಕಾರ ವಶಪಡಿಸಿಕೊಂಡ ಭೂಮಿಯ ಮಾಲೀಕರು ಟಿ.ಡಿ.ಆರ್ ಪಡೆಯಲು ಸರಳ ಸೂತ್ರ
ವಸತಿ :
• 5 ಸಾವಿರ ಕೋಟಿ ಮೂಲ ನಿಧಿಯೊಂದಿಗೆ ಶಾಶ್ವತ ಪ್ರಕೃತಿ
ವಿಕೋಪ ನಿಧಿ ಸ್ಥಾಪನೆ
• ಶರಾವತಿ ಹಿನ್ನೀರು ಪುನರ್ವಸತಿ ಸಮಸ್ಯೆಗೆ ಆದ್ಯತೆಯಲ್ಲಿ ಪರಿಹಾರ
• ವಸತಿ ಸಮಸ್ಯೆಗೆ ತೊಡಗಕಾಗಿರುವ ಅರಣ್ಯ ಕಾಯ್ದೆಯ ವಿಧಿಗಳ ತಿದ್ದುಪಡಿ
ಕಾನೂನು ಸುವ್ಯವಸ್ಥೆ :
• ರಾತ್ರಿ ಪಾಳಿಯ ಪೊಲೀಸರಿಗೆ 5 ಸಾವಿರ ವಿಶೇಷ ಮಾಸಿಕ ಭತ್ಯೆ
• ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
• ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
• ನ್ಯಾಯಾಲಯಗಳ ಆಧುನೀಕರಣಕ್ಕಾಗಿ 2 ಸಾವಿರ ಕೋಟಿಯ ಪ್ರತ್ಯೇಕ ನಿಧಿ
• ಬಿಜೆಪಿ ಜಾರಿಗೆ ತಂದ ಎಲ್ಲಾ ಜನವಿರೋಧಿ ಕಾನೂನುಗಳು ಒಂದು ವರ್ಷದೊಳಗೆ ರದ್ದು
ಕೈಗಾರಿಕೆ ಮತ್ತು ವಾಣಿಜ್ಯ :
• ಬೀದರ್‌ನಿಂದ ಚಾಮರಾಜನಗರದವರೆಗೆ ಕೈಗಾರಿಕಾ ಪಾರ್ಕ್‌ಗಳು, ಉಪನಗರಗಳ ನಿರ್ಮಾಣ.
• ಮಂಗಳೂರಿನಲ್ಲಿ ಚಿನ್ನ ಮತ್ತು ವಜ್ರದ ಪಾರ್ಕ್ ಸ್ಥಾಪನೆ
• ಕೈಗಾರಿಕೆಗಳ ಉತ್ತೇಜನಕ್ಕಾಗಿ ಗಡಿಭಾಗದಲ್ಲಿ ಕೈಗಾರಿಕಾ
ಅಭಿವೃದ್ಧಿ ನಿಗಮ ಸ್ಥಾಪನೆ
• ರೈತರಿಗೆ ತಮ್ಮ ಸ್ವಂತ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ನೆರವು
• ಸ್ಟಾರ್ಟ್‌ಅಪ್ ನಿಧಿ- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ 10 ಕೋಟಿ ನೀಡಿಕೆ
• ಆಧುನಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ರೂ 1 ಸಾವಿರ ಕೋಟಿ ಹೂಡಿಕೆ
• ಬಳ್ಳಾರಿ ಅಂತಾರಾಷ್ಟ್ರೀಯ ಗುಣಮಟ್ಟದ ಜೀನ್ಸ್ ಬಟ್ಟೆಗಳ ಅಪರಲ್ ಪಾರ್ಕ್ ನಿರಮಾಣ
• ಚರ್ಮೇತರ ಪಾದರಕ್ಷೆ ಉದ್ಯಮದಲ್ಲಿ ತೊಡಗಿಕೊಳ್ಳಲು ಉತ್ತೇಜನ
ಐಟಿ ವಲಯ:
• ಐಟಿ ಕ್ಷೇತ್ರ ವಿಸ್ತರಣೆಗೆ ಕ್ರಮ
• ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಹಾರ್ಡ್‌ವೇ ಪಾರ್ಕ್ ಸ್ಥಾಪನೆ
ಮಹಿಳೆ ಮತ್ತು ಮಕ್ಕಳು :
• ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ಭತ್ಯೆ – ಗೃಹಲಕ್ಷ್ಮಿ ಯೋಜನೆ ಜಾರಿ • ಮಹಿಳಾ ಉದ್ಯಮಶೀತೆ ಉತ್ತೇಜಿಸಲು ಪ್ರತೀ ವರ್ಷ 5 ಸಾವಿರ ಮಹಿಳೆಯರಿಗೆ ಬೆಂಬಲ
• ಕಾಶ್ಮೀರಿ ವಲಸಿಗರ ಕಲ್ಯಾಣ
• ಕಾಶ್ಮೀರಿ ವಲಸಿಗರಿಗೆ ವಾರ್ಷಿಕ 1 ಕೋಟಿ ಅನುದಾನ
• ಕಾಶ್ಮೀರಿ ಯುವಕರಿಗೆ ಉದ್ಯೋಗ ಭದ್ರತೆ
• ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ
• ಅನಿವಾಸಿ ಕನ್ನಡಿಗರು ಉದ್ಯಮ ನಡೆಸಲು 1,000 ಕೋಟಿ ಆವರ್ತನ ನಿಧಿ
ಕಾರ್ಮಿಕ ವಲಯ:
• 25 ಸಾವಿರ ಪೌರ ಕಾರ್ಮಿಕರ ಉದ್ಯೋಗ ಖಾಯಂ ಜೊತೆಗೆ 10ಲಕ್ಷ ವಿಮಾ ಯೋಜನೆ
• ಪೌರಕಾರ್ಮಿಕರಿಗೆ ಉಚಿತ ಬಸ್‌ಪಾಸ್
• ಡ್ರೈವರ್‌ಗಳ ಕಲ್ಯಾಣಕ್ಕಾಗಿ 200 ಕೋಟಿ ಮೀಸಲು
• ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿ 20 ಸಾವಿರ
• ಗಾರ್ಮೆಂಟ್ ಕೆಲಸಗಾರರಿಗೆ ಕನಿಷ್ಟ ವೇತನ ಪರಿಷ್ಕರಣೆ
• ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ 3 ಸಾವಿರ ಕೋಟಿ ಅನುದಾನ
ಎಸ್‌ಸಿ ಎಸ್‌ಟಿ ಕಲ್ಯಾಣ:
• ಭೀಮರಾವ್ ಅಂಬೇಡ್ಕರ್ ಉದ್ಯಮಶೀಲತಾ ನಿಧಿ ಸ್ಥಾಪನೆ
• ಎಸ್‌ಸಿ ಎಸ್‌ಟಿ ಕಲ್ಯಾಣಕ್ಕೆ ಮೀಸಲಿಟ್ಟ ಬಜೆಟ್ ಹಣ ಉಪಯೋಗ ಕಡ್ಡಾಯಗೊಳಿಸುವುದು
• 50 ಹೊಸ ಏಕಲವ್ಯ ವಸತಿ ಶಾಲೆ ನಿರ್ಮಾಣ
• ಎಸ್‌ಸಿ ಎಸ್‌ಟಿ ಜನಾಂಗದವರ ದರ್ಖಾಸ್ತು ಭೂಮಿ ಖಾಯಮಾತಿಗೆ ಕ್ರಮ
• ಎಸ್‌ಸಿ ಎಸ್‌ಟಿ ಯುವಕರಿಗೆ ಟ್ಯಾಕ್ಸಿ ಚಾಲನೆಯ ಸ್ವ ಉದ್ಯೋಗಕ್ಕಾಗಿ ಐರಾವತ ಯೋಜನೆ ಜಾರಿ
• ಪ್ರತೀ ಜಿಲ್ಲೆಯಲ್ಲಿ ವಾರ್ಷಿಕ 200 ಉದ್ಯಮಿಗಳಿಗೆ ಬೆಂಬಲ
• ಸಣ್ಣ ವ್ಯಾಪಾರಿಗಳಿಗೆ ಹಾಗೂ ಅಂಗಡಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ
• ಕಿರು ಉದ್ಯಮಗಳ ಸಾಲ ಖಾತರಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಜಾರಿ
ಪ್ರವಾಸೋದ್ಯಮ:
• ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ 5 ಸಾವಿರ ಕೋಟಿ ನಿಧಿ
• ಕರಾವಳಿಯಲ್ಲಿ ಬೋಟ್‌ಹೌಸ್ ಮತ್ತು ಕ್ಯೂಸ್ ಶಿಪ್ ಸಂಚಾರಕ್ಕೆ ಉತ್ತೇಜನ
• ಕೇರಳ ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಲಾನಯನ, ನವೀ ತೀರ ಮತ್ತು ಸಮುದ್ರ ದಂಡೆಗಳ ನಿರ್ವಹಣೆಗೆ ಹೊಸ ನೀತಿ
• ಕರಾವಳಿ ಬೀಚ್ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಮತ್ತು ಯೋಜನೆ
• ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ 50 ಪ್ರವಾಸೀ
ಟ್ಯಾಕ್ಸಿಗಾಗಿ ಸಹಾಯಧನ
ಹೋಟೆಲ್ ಮತ್ತು ಆತಿಥ್ಯ ಉದ್ಯಮ:
• 20ಕ್ಕಿಂತ ಅಧಿಕ ನೌಕರರು ಇರುವ ಹೋಟೆಲ್‌ಗಳಿಗೆ ಉದ್ಯಮದ ಸ್ಥಾನಮಾನ
• ಸಣ್ಣ ಹೋಟೆಲ್ / ಬೇಕರಿ / ಸ್ವೀಟ್ ಸ್ಟಾಲ್‌ಗಳಿಗೆ 6% ಬಡ್ಡಿದರದಲ್ಲಿ ಸಾಲ
ಇಂಧನ:
• ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ – “ಗೃಹ ಜ್ಯೋತಿ” ಯೋಜನೆ
• 5000 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್
• ಸೋಲಾರ್ ಪಾರ್ಕ್‌ಗಳ ನಿರ್ಮಾಣ
ಸಾರಿಗೆ :
• ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
• ಸಾರ್ವಜನಿಕ ಸಾರಿಗೆ ಪಾಲನ್ನು ಶೇ 55ರಿಂದ ಶೇ 70ಕ್ಕೆ ಹೆಚ್ಚಿಸುವುದು
• ಒಟ್ಟು ಬಸ್‌ಗಳ ಸಂಖ್ಯೆಯಲ್ಲಿ ಶೇ 50ರಷ್ಟು ಬಸ್‌ಗಳು ವಿದ್ಯುತ್ ಚಾಲಿತ ಬಸ್‌ಗಳೇ ಇರುವಂತೆ ಯೋಜನೆ
• ಗಣಿಗಾರಿಕೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ
• ಗಣಿಗಾರಿಕೆ ಮಾಫಿಯಾಕ್ಕೆ ತಡೆ ಹಾಕಿ ಗಣಿಗಾರಿಕಾ ಕಾನೂನನ್ನು ಬಿಗಿಗೊಳಿಸುವುದು
• ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆಯುವ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು.
ಆರೋಗ್ಯ :
• ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಖಾಲಿ ಹುದ್ದೆಗಳ ಭರ್ತಿ
• ಖಾಲಿ ಹುದ್ದೆಗಳ ಭರ್ತಿ ರಾಷ್ಟ್ರೀಯ ಸ್ವಾಸ್ಥ್ಯವಿಮಾ ಯೋಜನೆ ಅಸಂಘಟಿತ ಕ್ಷೇತ್ರಗಳಿಗೆ ವಿಸ್ತರಣೆ
• ಧನ್ವಂತರಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಶ್ವವಿದ್ಯಾಲಯ ಸ್ಥಾಪನೆ
• ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ ರೀತಿಯ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ಸ್ಥಾಪನೆ
• ಯಶಸ್ವಿನಿ ಯೋಜನೆ ರಾಜ್ಯದೆಲ್ಲೆಡೆಗೆ ವಿಸ್ತರಣೆ
• ಡಾ. ಪುನೀತ್ ರಾಜಕುಮಾರ್ ಹೃದಯ ಆರೋಗ್ಯ ಯೋಜನೆ
ಆಹಾರ, ನಾಗರಿಕ ಪೂರೈಕೆ :
• “ಅನ್ನಭಾಗ್ಯ”- ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಉಚಿತ
• ಸಂಪರ್ಕ ಇಲ್ಲದ ಹಳ್ಳಿಗಳಿಗೆ ಸಂಚಾರಿ ನ್ಯಾಯಬೆಲೆ ಅಂಗಡಿ
ಶಿಕ್ಷಣ :
• ಸರಕಾರಿ ಮತ್ತು ಅನುದಾನಿತ ಶಾಲೆ/ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ
• ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿ ಅನುಷ್ಠಾನ
• ಬಿಜೆಪಿ ಸರ್ಕಾರ ವಿರೂಪಗೊಳಿಸಿರುವ ಪಠ್ಯಪುಸ್ತಕ ಸರಿಪಡಿಸುವುದು
• ಕುವೆಂಪು, ಬಸವಣ್ಣ ಆದಿಕವಿ ಪಂಪ ಮತ್ತು ಸಾಂವಿಧಾನಿಕ, ವೈಜ್ಞಾನಿಕ ಮನೋಭಾವವನ್ನು ಮರಳಿ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕ್ರಮ
• ಸ್ಕಾಲಶಿಪ್‌ಗಳನ್ನು ಒಂದೇ ವ್ಯವಸ್ಥೆಯಡಿಯಲ್ಲಿ ನಿರ್ವಹಿಸಲು ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪನ
• ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್/ ಡಿಜಿಟಲ್ ನೋಟ್‌ಪ್ಯಾಡ್
• ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕೆ ರೂ. 2,000 ಕೋಟಿ ಆವರ್ತನ ನಿಧಿ ಸ್ಥಾಪನೆ.
• ವಿದ್ಯಾಸಿರಿ ಸ್ಕಾಲರ್‌ಶಿಪ್ ಮೊತ್ತ ರೂ 15 ಸಾವಿರದಿಂದ ರೂ 20 ಸಾವಿರಕ್ಕೆ ಹೆಚ್ಚಳ
ಕ್ರೀಡೆ ಮತ್ತು ಯುವಜನಸೇವೆ :
• ನಿರುದ್ಯೋಗಿಗಳಿಗೆ ಯುವ ನಿಧಿ ಯೋಜನೆ ಜಾರಿ – ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸಿದ 18 -25 ವರ್ಷ ವಯೋಮಾನದ ಯುವಕರಿಗೆ 3 ಸಾವಿರ ರೂ. ಮಾಸಿಕ ಧನ ಹಾಗೂ ಡಿಪ್ಲೋಮಾ ಮಾಡಿದವರಿಗೆ 1500 ರೂ. ಮಾಸಿಕ ನಿರುದ್ಯೋಗ ಭತ್ಯೆ ಪಾವತಿ
• ಯುವಕರ ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಪಂಚಾಯತ್ ನಲ್ಲಿ ಭಾರತ್ ಜೋಡೋ ಯುವಶಕ್ತಿ ಉದ್ಯೋಗ ಮಾಹಿತಿ ಕೇಂದ್ರಗಳ ಸ್ಥಾಪನೆಯ
• ಭಾರತ ರತ್ನ ಸಿಎನ್‌ಆರ್ ರಾವ್ ಅವರ ಹೆಸರಿನಲ್ಲಿ ಯುವ ಸಂಶೋಧನಾ ನಿಧಿಗೆ 500 ಕೋಟಿ
• ಖಾಸಗಿ ಕ್ಷೇತ್ರದಲ್ಲಿ ಶೇ 80 ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡುವ ಭರವಸೆ
• 1 ವರ್ಷದಲ್ಲಿ ಖಾಲಿಯಿರುವ 2.5 ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿ
• ಮೈಸೂರಿನಲ್ಲಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯದ ಸ್ಥಾಪನೆ
ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ತರಬೇತಿ ನೀಡುವುದಕ್ಕೆ ಆದ್ಯತೆ
ಹಚ್ಚೇವು ಕನ್ನಡದ ದೀಪ – ಕನ್ನಡ ಸಂಸ್ಕೃತಿ :
• ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಯನ್ನು ನೈಸರ್ಗಿಕ ಪ್ರವಾಸಿ ಕಲಾಕೇಂದ್ರವನ್ನಾಗಿಸಲು ಕ್ರಮ
• ಯುವ ಕವಿಗಳ ಪ್ರೋತ್ಸಾಹಿಸಲು ಕುವೆಂಪು ಕನ್ನಡ ಸಾಹಿತ್ಯ ಅಭಿಯಾನ
• ಭುವನೇಶ್ವರಿ ತಾಯಿ ದೇವಾಲಯ ಪ್ರವಾಸೀ ತಾಣವಾಗಿ
ಮಾರ್ಪಾಡು
• ಯುವ ಗಾಯಕರ ಉತ್ತೇಜನಕ್ಕಾಗಿ ಪಿ ಕಾಳಿಂಗರಾವ್
• ಸುಗಮ ಸಂಗೀತ ಫೆಲೋಶಿಪ್
• ಸಾಕ್ಷ್ಯಚಿತ್ರ ನಿರ್ದೇಶಕರ ಉತ್ತೇಜನಕ್ಕೆ ದೇವಿಕಾರಾಣಿ ರೋರಿಚ್ ಫೆಲೋಶಿಪ್
ದೇವಸ್ಥಾನ ಮತ್ತು ಯಾತ್ರಾ ಕೇಂದ್ರಗಳು :
• ಕೊಡವ ಸಂಸ್ಕೃತಿಯ ಅಭಿವೃದ್ಧಿಗಾಗಿ ಕೊಡವ ಅಕಾಡೆಮಿಗೆ 2 ಕೋಟಿ ರೂ. ಅನುದಾನ
• ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಆರಾಧನಾ ಕಾರ್ಯಕ್ರಮಗಳ ಮರು ಅನುಷ್ಠಾನ
• ಅರ್ಚಕ ಗೌರವ ನಿಧಿ- 60 ವರ್ಷ ಮೀರಿದ ಎಲ್ಲಾ ಅರ್ಚಕರಿಗೆ 5 ಸಾವಿರ ರೂ. ಗೌರವಧನ
• ಧಾರ್ಮಿಕ ನಿಧಿ- ಸಣ್ಣ ದೇಗುಲಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ
• ಗ್ರಾಮಗಳ ಮಟ್ಟದ ಎಲ್ಲಾ ಗ್ರಾಮ ದೇವತೆ ಹಬ್ಬಗಳಿಗೆ 20 ಸಾವಿರ ನೆರವು
• ಸಂಸ್ಕೃತ ಅಧ್ಯಯನಕ್ಕಾಗಿ ಶಂಕರಾಚಾರ್ಯ ಅಧ್ಯಯನ ಪೀಠ ವಿಶೇಷ ಯೋಜನೆ