ಬೆಂಗಳೂರು, ಏ.29 www.bengaluruwire.com : ನಂದಿ ರೈಲು ನಿಲುಗಡೆ ತಾಣವನ್ನು ಪಾರಂಪರಿಕ ನಿಲ್ದಾಣವಾಗಿ ಮರು ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಕಾರ್ಯಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.
108 ವರ್ಷಗಳಷ್ಟು ಹಳೆಯದಾದ ನಿಲ್ದಾಣವನ್ನು ಇನ್ಟ್ಯಾಕ್ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಕರಲ್ ಹೆರಿಟೇಜ್ -INTACH) ಎಂಬ ಪಾರಂಪರಿಕ ತಾಣಗಳ ಸಂರಕ್ಷಣೆಗಾಗಿ ಕೆಲಸ ಮಾಡುವ ಲಾಭರಹಿತ ಸಂಸ್ಥೆಯ ಸಹಯೋಗದಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. ಈ ನಿಲ್ದಾಣದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪಾರಂಪರಿಕ ಮೌಲ್ಯ ಹೆಚ್ಚಿಸಲು ನೈರುತ್ಯ ರೈಲ್ವೆ ಉದ್ದೇಶಿಸಿದೆ. ಒಂದು ವರ್ಷದ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಲಹಂಕ- ಚಿಕ್ಕಬಳ್ಳಾಪುರ- ಕೋಲಾರ ಮಾರ್ಗದಲ್ಲಿ ನಂದಿ ಹಾಲ್ ಸ್ಟೇಷನ್ ಸೇರಿದಂತೆ ದೇವನಹಳ್ಳಿ, ದೊಡ್ಡಜಾಲ, ಅವತಿಹಳ್ಳಿ ರೈಲ್ವೆ ನಿಲ್ದಾಣಗಳ ನವೀಕರಣವನ್ನೂ ನೈರುತ್ಯ ರೈಲ್ವೆ ಕೈಗೆತ್ತಿಕೊಂಡಿದೆ ಎಂದು ವಿವರಿಸಿದರು.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಇನ್ಟ್ಯಾಕ್ ಸಂಚಾಲಕಿ ಮೀರಾ ಅಯ್ಯರ್, ಸಹ ಸಂಚಾಲಕ ಸಿ. ಅರವಿಂದ್ ಇದ್ದರು.