ಬೆಂಗಳೂರು, ಏ.28 www.bengaluruwire.com : ಸುಡಾನ್ನಲ್ಲಿ ಸಂಘರ್ಷ ವಲಯಗಳಲ್ಲಿ ಸಿಲುಕಿರುವ 362 ಮಂದಿ ಭಾರತೀಯ ನಾಗರಿಕರು ಶುಕ್ರವಾರ ಸುರಕ್ಷಿತವಾಗಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಸಂಜೆ 4.30ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅದರಲ್ಲಿ 114 ಮಂದಿ ಕರ್ನಾಟಕದವರು ಸೇರಿದ್ದಾರೆ
ಸುಡಾನ್ ನಿಂದ ಸೌದಿ ಏರ್ ವೇಸ್ ನಾಲ್ಕು ವಿಮಾನದಲ್ಲಿ ದೆಹಲಿಗೆ ಎರಡು ವಿಮಾನ, ಮುಂಬೈ ಹಾಗೂ ಕರ್ನಾಟಕಕ್ಕೆ ತಲಾ ಒಂದು ವಿಮಾನದಲ್ಲಿ ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಸುಡಾನ್ ನಿಂದ ದೇಶಕ್ಕೆ ಬಂದವರಲ್ಲಿ 241 ಪುರುಷರು, 107 ಮಹಿಳೆಯರು, 12 ಮಕ್ಕಳು, 2 ಶಿಶುಗಳಾಗಿದ್ದಾರೆ. ಅದರಲ್ಲಿ 114 ಮಂದಿ ಕರ್ನಾಟಕದವರು. ಕರ್ನಾಟಕದಿಂದ ಬಂದಿರುವ ಜನರನ್ನು ಸುರಕ್ಷಿತವಾಗಿ ಅವರವರ ಸ್ಥಳಗಳಿಗೆ ಸ್ಥಳಾಂತರಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದರು.
ಸುಡಾನ್ ನಿಂದ ಕೆಐಎಎಲ್ ಗೆ ಬಂದ 114 ಕರ್ನಾಟಕದವರಲ್ಲಿ ಶಿವಮೊಗ್ಗದ 50 ಮಂದಿ, ಮೈಸೂರಿನ 45, ಬೆಂಗಳೂರಿನ 9, ಕಲರ್ಬುರ್ಗಿಯ 4, ಉಡುಪಿ ಹಾಗೂ ರಾಮನಗರದ ತಲೆ ಇಬ್ಬರು ಮತ್ತು ದಾವಣಗೆರೆ, ಹಾಸನದ ತಲಾ ಒಬ್ಬರನ್ನು ಅವರವರ ಸ್ಥಳಗಳಿಗೆ ತಲುಪಿಸಲಾಗುತ್ತದೆ ಎಂದರು.
ಸುಡಾನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಸ್ಥಳಾಂತರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಏಪ್ರಿಲ್ 24 ರಂದು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತು. ಭಾರತೀಯ ವಾಯುಪಡೆಯ ಸಾರಿಗೆ ವಿಮಾನಗಳು ಮತ್ತು ಭಾರತೀಯ ನೌಕಾಪಡೆಯ ಹಡಗುಗಳನ್ನು ಕಾರ್ಯತಂತ್ರದ ಸ್ಥಳಗಳಲ್ಲಿ ಇರಿಸಲಾಗಿದೆ. ಸುಡಾನ್ ನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ಜೆಡ್ಡಾಕ್ಕೆ ಸ್ಥಳಾಂತರಿಸಿ ಅಲ್ಲಿಂದ ದೆಹಲಿ ಹಾಗೂ ಮುಂಬೈಗೆ ಕರೆತರಲು ಕಾರ್ಯತಂತ್ರ ರೂಪಿಸಲಾಗಿದೆ.
ಕರ್ನಾಟಕದಿಂದ ದೆಹಲಿ ಮತ್ತು ಮುಂಬೈನಲ್ಲಿ ಬಂದಿಳಿದ ಆಪರೇಷನ್ ಕಾವೇರಿ ಮೂಲಕ ಆಗಮಿಸುವವರ ಸುಗಮ ಪ್ರಯಾಣವನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರವು ಹಿರಿಯ ಅಧಿಕಾರಿಗಳನ್ನು ನೇಮಿಸಿತ್ತು.
ನವದೆಹಲಿ, ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಮೂರು ಫೆಸಿಲಿಟೇಶನ್ ಕೌಂಟರ್ಗಳನ್ನು ತೆರೆಯಲಾಗಿದ್ದು, ಇದನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಫೆಸಿಲಿಟೇಶನ್ ಕೌಂಟರ್ಗಳು ಆಪರೇಷನ್ ಕಾವೇರಿ ಮೂಲಕ ಬಂದ ಕರ್ನಾಟಕದ ಮೂಲದವರನ್ನು ರಾಜ್ಯಕ್ಕೆ ಸ್ಥಳಾಂತರಿಸಲು ಅವರ ಮುಂದಿನ ಪ್ರಯಾಣಕ್ಕೆ ವಿಮಾನ ಟಿಕೆಟ್ಗಳನ್ನು ವ್ಯವಸ್ಥೆಗೊಳಿಸುತ್ತಿದೆ.
ಸುಡಾನ್ ನಿಂದ ದೇಶಕ್ಕೆ ಮರಳಿದವರನ್ನು ಅವರ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಗಳನ್ನು ಮಾಡಲಾಗಿದೆ, ಅಂದರೆ, ಬೆಂಗಳೂರು ವಿಮಾನ ನಿಲ್ದಾಣದಿಂದ ಅವರ ಸ್ವಂತ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಆರೋಗ್ಯ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ Google News ಹಾಗೂ ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.