Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | Power Demand | ತಾಪಮಾನ ಹೆಚ್ಚಳ : ಬೆಸ್ಕಾಂ ವಿದ್ಯುತ್ ಬೇಡಿಕೆ ಬಳಕೆಯೂ ಜೋರು – ಕರೆಂಟ್ ಸರಾಸರಿ ಬೇಡಿಕೆ 7,282 ಮೆಗಾವ್ಯಾಟ್ ಏರಿಕೆ

ಕಳೆದ ವರ್ಷಕ್ಕಿಂತ ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಹುತೇಕ ದಿನಗಳಲ್ಲಿ ತಾಪಮಾನ ಏರಿಕೆಯಿಂದಾಗಿ ವಿದ್ಯುತ್ ಬೇಡಿಕೆ ಹಾಗೂ ಬಳಕೆ ಕೂಡ ಹೆಚ್ಚಾಗಿರುವುದು ಬೆಸ್ಕಾಂ ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್ ನಲ್ಲಿ ಸರಾಸರಿ ವಿದ್ಯುತ್ ಬಳಕೆ 22.919 ದಶಲಕ್ಷ ಯೂನಿಟ್ ಗೆ ಹೆಚ್ಚಳವಾಗಿದೆ.

by Bengaluru Wire Desk
April 22, 2023
in Bengaluru Focus, BW Special, News Wire
Reading Time: 1 min read
0
ವಿದ್ಯುತ್ ಸರಬರಾಜು ಮಾಡುವ ದೊಡ್ಡ ದೊಡ್ಡ ಸಂಪರ್ಕ ಮಾರ್ಗಗಳ ಸಾಂದರ್ಭಿಕ ಚಿತ್ರ

ವಿದ್ಯುತ್ ಸರಬರಾಜು ಮಾಡುವ ದೊಡ್ಡ ದೊಡ್ಡ ಸಂಪರ್ಕ ಮಾರ್ಗಗಳ ಸಾಂದರ್ಭಿಕ ಚಿತ್ರ

ಬೆಂಗಳೂರು, ಏ.22 www.bengaluruwire.com : ರಾಜ್ಯದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬೆಳಗ್ಗೆ ಹೊತ್ತು ಮನೆಯೊಳಗೆ, ಕಚೇರಿಯೊಳಗೆ ಇರೋದು ಕುಕ್ಕರ್ ನಲ್ಲಿ ಹಾಕಿ ಬೇಸಿದಂತಾಗುವಷ್ಟು ತಾಪಮಾನ ಏರಿಕೆಯಾಗಿದೆ. ಇನ್ನೊಂದೆಡೆ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆ ಪ್ರಮಾಣವೂ ಏರಿಕೆಯಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಬೆಸ್ಕಾಂನಲ್ಲಿನ ವಿದ್ಯುತ್ ಬೇಡಿಕೆಯು 18ನೇ ತಾರೀಖಿನವರೆಗೆ ಸರಾಸರಿಯಾಗಿ 7,282 ಮೆಗಾವ್ಯಾಟ್ ಗೆ ತಲುಪಿದೆ.

ಕಳೆದ ವರ್ಷ (2022) ಮಾರ್ಚ್ ತಿಂಗಳಿನಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವಿದ್ಯುತ್ ಬೇಡಿಕೆ ಸರಾಸರಿಯಾಗಿ 6,334 ಮೆಗಾವ್ಯಾಟ್ ನಷ್ಟಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ವಿದ್ಯುತ್ ಬೇಡಿಕೆ 7,155 ಮೆ.ವ್ಯಾ ನಷ್ಟಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 821 ಮೆಗಾವ್ಯಾಟ್ ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನ ಸಾಂದರ್ಭಿಕ ಚಿತ್ರ

ಮಾರ್ಚ್ ತಿಂಗಳು ಬಿಟ್ಟು ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣದ ಗ್ರಾಫ್ ಮತ್ತಷ್ಟು ಏರಿಕೆಯಾಗಿದೆ. 2022ರ ಏಪ್ರಿಲ್ ನಲ್ಲಿ 18ನೇ ತಾರೀಖಿನವರೆಗೆ ವಿದ್ಯುತ್ ಬೇಡಿಕೆ ಸರಾಸರಿಯಾಗಿ 6,256 ಮೆ.ವ್ಯಾ ಇದ್ದರೆ, 2023ರ ಏಪ್ರಿಲ್ ನ ಇದೇ ಅವಧಿಯಲ್ಲಿ 7,282 ಮೆ.ವ್ಯಾ ನಷ್ಟು ಏರಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬೇಡಿಕೆ ಸರಾಸರಿಯಾಗಿ 1,026 ಮೆ.ವ್ಯಾ ನಷ್ಟು ಏರಿಕೆಯಾಗಿದೆ.

ಏಪ್ರಿಲ್ ನಲ್ಲಿ ಸರಾಸರಿ ವಿದ್ಯುತ್ ಬಳಕೆ 22.919 ದಶಲಕ್ಷ ಯೂನಿಟ್ ಹೆಚ್ಚಳ :

ಇನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆಯ ಸರಾಸರಿ ಪ್ರಮಾಣ 2022ರ ಮಾರ್ಚ್ ನಲ್ಲಿ 122.068 ಮಿಲಿಯನ್ ಯೂನಿಟ್ ಗೆ ತಲುಪಿದ್ದರೆ, 2023ರ ಮಾರ್ಚ್ ನಲ್ಲಿ 126.917 ದಶಲಕ್ಷ ಯೂನಿಟ್ ಗೆ ತಲುಪಿದೆ. ಅಂದರೆ ಇಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ಕಳೆದ ವರ್ಷಕ್ಕಿಂತ 4.849 ದಶಲಕ್ಷ ಯೂನಿಟ್ ಹೆಚ್ಚಳವಾಗಿದೆ. ಇನ್ನು ಏಪ್ರಿಲ್ ನಲ್ಲಿ ವಾತಾವರಣದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ವಿದ್ಯುತ್ ಬಳಕೆಯ ಪ್ರಮಾಣವು ಹೆಚ್ಚಾಗಿದೆ. 2022ರ ಏಪ್ರಿಲ್ (ಏ.1ರಿಂದ 18ರ ತನಕ) ನಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ಸರಾಸರಿಯಾಗಿ ದಿನಕ್ಕೆ 115.715 ದಶಲಕ್ಷ ಯೂನಿಟ್ ನಷ್ಟಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ಬಳಕೆಯು 138.634 ದಶಲಕ್ಷ ಯೂನಿಟ್ ನಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿದ್ಯುತ್ ಬಳಕೆಯು ಪ್ರತಿ ದಿನ ಸರಾಸರಿ 22.919 ಮಿಲಿಯನ್ ಯೂನಿಟ್ ನಷ್ಟು ಹೆಚ್ಚಾಗಿದೆ.

ವ್ಯವಸಾಯ ಭೂಮಿಗೆ ಪಂಪ್ ಸೆಟ್ ಮೂಲಕ ನೀರು ಹರಿಸುತ್ತಿರುವ ಪ್ರಾತಿನಿಧಿಕ ಚಿತ್ರ

ಬೆಂಗಳೂರಿನ ಏಪ್ರಿಲ್ ಸರಾಸರಿ ವಿದ್ಯುತ್ ಬೇಡಿಕೆ 489 ಮೆ.ವ್ಯಾ ಏರಿಕೆ :

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳಿಗಿಂತ ಏಪ್ರಿಲ್ ತಿಂಗಳಿನಲ್ಲಿ ಬಿಸಿಲ ಝಳ ಹೆಚ್ಚು. ಹೀಗಾಗಿ ವಿದ್ಯುತ್ ಬೇಡಿಕೆಯಲ್ಲೂ ಹೆಚ್ಚಳವಾಗಿರುವುದನ್ನು ಕಾಣಬಹುಹುದಾಗಿದೆ. ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳಿನ ಸರಾಸರಿ ವಿದ್ಯುತ್ ಬೇಡಿಕೆ 2022ರಲ್ಲಿ 2,738 ಮೆ.ವ್ಯಾ ನಷ್ಟಿತ್ತು. ಆದರೆ 2023ರ ಮಾರ್ಚ್ ನಲ್ಲಿ 12ನೇ ತಾರೀಖಿನ ನಂತರ ನಗರದಲ್ಲಿ ಉಷ್ಣಾಂಶ ಪ್ರಮಾಣ 33 ಡಿಗ್ರಿಯಿಂದ 35 ಡಿಗ್ರಿ ಸೆಲ್ಸಿಯಸ್ ವರೆಗಿತ್ತು. ಹೀಗಾಗಿ  ಇದೇ ಅವಧಿಯಲ್ಲಿ ಸರಾಸರಿ ವಿದ್ಯುತ್ ಬೇಡಿಕೆ 3,147 ಮೆ.ವ್ಯಾ ನಷ್ಟಿತ್ತು. ಅಂದರೆ ಬೇಸಿಗೆ ಬಿಸಿಯ ಕಾರಣಕ್ಕೆ 409 ಮೆ.ವ್ಯಾ ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.

ಇನ್ನು 2022ರ ಏಪ್ರಿಲ್ ತಿಂಗಳಿನಲ್ಲಿ (18ನೇ ತಾರೀಖಿನವರೆಗೆ) ಸರಾಸರಿ ವಿದ್ಯುತ್ ಬೇಡಿಕೆ ಪ್ರಮಾಣವು 2804 ಮೆಗಾವ್ಯಾಟ್ ನಷ್ಟಿದ್ದರೆ, ಈ ವರ್ಷದ ಏಪ್ರಿಲ್ ನಲ್ಲಿ 3,221 ಮೆಗಾವ್ಯಾಟ್ ನಷ್ಟು ಬೇಡಿಕೆಯಿತ್ತು. ಏಪ್ರಿಲ್ 18ನೇ ತಾರೀಖಿನ ವರೆಗೆ ಹವಾಮಾನ ಇಲಾಖೆಯ ವರದಿಯನ್ವಯ ಉಷ್ಣಾಂಶವು ಬಹು ಭಾಗ 35 ರಿಂದ 36 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಹೀಗಾಗಿ ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕಿಂತ 489 ಮೆಗಾವ್ಯಾಟ್ ನಷ್ಟು ಏರಿಕೆಯಾಗಿತ್ತು. ವಿಧಾನಸಭೆ ಚುನಾವಣೆಯಿರುವ ಕಾರಣ ಈ ಬಾರಿ ವಿದ್ಯುತ್ ಕಡಿತ ಅಷ್ಟಾಗಿ ಜನರನ್ನು ಬಾಧಿಸುತ್ತಿಲ್ಲ. ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಕಣ್ಣಮುಚ್ಚಾಲೆಯ ಬಿಸಿ ಅನುಭವಿಸಬೇಕಿತ್ತು.

ಇಂಧನ ತಜ್ಞರು ಏನಂತಾರೆ?

“ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಜಾಸ್ತಿ. ಆದರೆ ಈ ಬಾರಿ ಒಂದೆಡೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಜನರು ಮನೆ ಮತ್ತು ಕಚೇರಿಗಳಲ್ಲಿ ಫ್ಯಾನ್, ಹವಾನಿಯಂತ್ರಕ ಉಪಕರಣ (AC) ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ವಿದ್ಯುತ್ ಉಪಯೋಗ ಹೆಚ್ಚಾಗಿದೆ ಹಾಗೂ ಇನ್ನಿತರ ಕಾರಣಗಳಿಂದ ವಿದ್ಯುತ್ ಬಳಸುವ ಪ್ರಮಾಣ ಏರಿಕೆಯಾಗಿದೆ. ಕೈಗಾರಿಕೆಗಳಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಉತ್ಪಾದನೆ ಪ್ರಮಾಣ ಸಾಮಾನ್ಯವಾಗಿರುತ್ತದೆ. ಹಾಗಾಗಿ ವಿದ್ಯುತ್ ಬಳಕೆಯಲ್ಲಿ ಏರಿಕೆ ಇಳಿಕೆ ಕಮ್ಮಿ. ಇದಲ್ಲದೆ ಕೋವಿಡ್ ನಂತರ ಖಾಲಿಯಿದ್ದ ಅಥವಾ ಹೊಸದಾಗಿ ನಿರ್ಮಿಸಿದ ಮನೆ, ಕಟ್ಟಡಗಳಿಗೆ ಹೆಚ್ಚೆಚ್ಚು ಜನರು ಬಂದು ಸೇರುತ್ತಿದ್ದಾರೆ. ಇದೆಲ್ಲ ಕಾರಣಗಳಿಂದಾಗಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಹೆಚ್ಚಾಗಿದೆ.”

ಎಂ.ಜಿ.ಪ್ರಭಾಕರ್, ಇಂಧನ ತಜ್ಞರು

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Election News | ಸಾರಿಗೆ ಅಧಿಕಾರಿಗಳ ಗೊಂದಲ : ರಾಜ್ಯ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಚುನಾವಣಾ ವಾಹನ ವಶ!!

Next Post

BBMP News | ಮತದಾನ ಜಾಗೃತಿ ಮೂಡಿಸಲು ಬಿಬಿಎಂಪಿಯಿಂದ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಕಾರ್ಯಕ್ರಮ

Next Post
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಮತದಾರರ ಜಾಗೃತಿ ಕುರಿತ ಕಾಲ್ನಡಿಗೆ ಜಾಥಾ ಮತ್ತು ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

BBMP News | ಮತದಾನ ಜಾಗೃತಿ ಮೂಡಿಸಲು ಬಿಬಿಎಂಪಿಯಿಂದ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಕಾರ್ಯಕ್ರಮ

Bangalore Qute Taxi Service | ಬೆಂಗಳೂರಿನಲ್ಲಿ ಕ್ಯೂಟ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭ : ಇದರ ಆರಂಭಿಕ ಕನಿಷ್ಠ ದರವೆಷ್ಟು ಗೊತ್ತಾ?

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d