ಇಂಫಾಲ, ಏ.16 www.bengaluruwire.com : ರಾಜಸ್ಥಾನದ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅವರ ಜೊತೆಗೆ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆದರೆ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2 ನೇ ರನ್ನರ್ ಅಪ್ ಕಿರೀಟವನ್ನು ಪಡೆದರು.
19 ವರ್ಷದ ನಂದಿನಿ ಗುಪ್ತಾ ಮೂಲತಃ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಆಕಾಂಕ್ಷಿಗಳಿಗಾಗಿ ದೇಶದ ಅತಿದೊಡ್ಡ ಕೋಚಿಂಗ್ ಕೇಂದ್ರಗಳಲ್ಲಿ ಒಂದಾಗಿರುವ ಕೋಟಾದ ಮೂಲದವರು. ಸೌಂದರ್ಯದ ಜೊತೆಗೆ ಬುದ್ಧಿವಂತೆಯಾಗಿರುವ ಈಕೆ ಬಿಸಿನೆಸ್ ಮ್ಯಾನೇಜ್‌ಮೆಂಟ್ ಓದುತ್ತಿದ್ದಾರೆ. ಸವಾಲುಗಳನ್ನು ಸ್ವೀಕರಿಸುವ ಮತ್ತು ಅದನ್ನು ಯಶಸ್ವಿಯಾಗಲು ತಮ್ಮನ್ನೇ ಸಮರ್ಪಿಸಿಕೊಳ್ಳುವ ಗಯಣ ಹೊಂದಿದ್ದಾರೆ.
ಭಾರತದ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಯಾದ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 59 ನೇ ಆವೃತ್ತಿಯು ಮಣಿಪುರದ ಇಂಫಾಲದಲ್ಲಿನ ಇಂಡೋರ್ ಸ್ಟೇಡಿಯಂನಲ್ಲಿ ಮೋಡಿಮಾಡುವ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಯಿತು. ತಾರೆಗಳಿಂದ ಕೂಡಿದ ಸಂಭ್ರಮಾಚರಣೆಯು ವೈವಿಧ್ಯತೆಯಲ್ಲಿ ಸೌಂದರ್ಯದ ತತ್ವವನ್ನು ಆಚರಿಸಿತು ಮತ್ತು ಸೆಲಿಬ್ರೆಟಿಗಳಾದ ಕಾರ್ತಿಕ್ ಆರ್ಯನ್ ಮತ್ತು ಮನಮೋಹಕ ಚೆಲುವೆ ಅನನ್ಯ ಪಾಂಡೆಯವರ ಸ್ಮರಣೀಯ ಪ್ರದರ್ಶನಗಳನ್ನು ಒಳಗೊಂಡಿತ್ತು.
ಸಂಜೆಯ ವಿಶೇಷವೆನಿಸಿದ ಮತ್ತೊಂದು ಪ್ರದರ್ಶನದಲ್ಲಿ ಫೆಮಿನಾ ಸೌಂದರ್ಯ ಸ್ಪರ್ಧೆಯ ಮಾಜಿ ವಿಜೇತರಾದ ಸಿನಿ ಶೆಟ್ಟಿ, ರೂಬಲ್ ಶೇಖಾವತ್, ಶಿನಾತಾ ಚೌಹಾಣ್, ಮಾನಸ ವಾರಣಾಸಿ, ಮಾಣಿಕಾ ಶೆಕಾಂದ್, ಮಾನ್ಯ ಸಿಂಗ್, ಸುಮನ್ ರಾವ್ ಮತ್ತು ಶಿವಾನಿ ಜಾಧವ್ ಅವರು ವೇದಿಕೆಯಲ್ಲಿ ಸೊಗಸಾದ ಪ್ರದರ್ಶನ ನೀಡಿದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.