ಮಂಡ್ಯ, ಮಾ.12 www.bengaluruwire.com : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು 8479 ಕೋಟಿ ರೂ.ಗಳ ವೆಚ್ಚದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ರಸ್ತೆಯನ್ನು ರಾಷ್ಟಕ್ಕೆ ಸಮರ್ಪಿಸಿದರು.
ಇದೇ ವೇಳೆ 4128 ಕೋಟಿ ರೂ. ವೆಚ್ಚದ ಮೈಸೂರು – ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್ ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ ಶಂಕುಸ್ಥಾಪನೆ ನೆರವೇರಿಸಿದರು.
ಎಕ್ಸ್ಪ್ರೆಸ್ ವೇ ವಿಶೇಷತೆ ಏನಿದೆ? :
ಈ ಎಕ್ಸ್ಪ್ರೆಸ್ ವೇ ರಾಜ್ಯದಲ್ಲೇ ಮೊತ್ತ ಮೊದಲು. 118 ಕಿ.ಮೀ. ಉದ್ದದ ರಸ್ತೆ ಇದಾಗಿದೆ. 8,479 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರಯಾಣ ಅವಧಿ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ. 4 ರೈಲ್ವೆ ಸೇತುವೆಗಳು, 49 ಅಂಡರ್ಪಾಸ್ ಮತ್ತು 13 ಮೇಲ್ಸುತುವೆ, 69 ಬಸ್ ಬೇ ಗಳು ಒಳಗೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಮೊದಲಾದ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.