ಸಾಲಿಗ್ರಾಮ (ಉಡುಪಿ), ಮಾ.10 www.bengaluruwire.com : ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಮಾ.11, 12 ಹಾಗೂ 13ನೇ ತಾರೀಖಿನಂದು ದೇವಸ್ಥಾನದ ಹೆಬ್ಬಾಗಿಲಿನ ಛಾವಣಿ ಮತ್ತು ಗೋ ಕುಟೀರ ಗಳನ್ನು ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಶ್ರೀ ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 11 ಹಾಗೂ 12 ರಂದು ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಮಾ.13 ರಂದು ಆಯುತ ಸಂಖ್ಯಾ ನರಸಿಂಹ ಹೋಮ, ಬ್ರಹ್ಮಕಲಶಾಭಿಷೇಕ, ಹೆಬ್ಬಾಗಲಿನ ತಾಮ್ರದ ಛಾವಣಿ ಸಮರ್ಪಣೆ ಹಾಗೂ ಗೋಕುಟೀರ ಉದ್ಘಾಟನೆ ನಡೆಯಲಿದೆ ಎಂದು ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮಾ.12ರಂದು ನಡೆಯುವ ಕಲಾಶಾಭಿಷೇಕ, ಮಹಾಪೂಜೆ, ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕುಂಭ ಸ್ಥಾಪನೆ, ಅಷ್ಟಾವಧಾನ ಸೇವೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೂಟ ಮಹಾಜಗತ್ತು ಸಾಲಿಗ್ರಾಮದ ಕೇಂದ್ರಾಧ್ಯಕ್ಷರಾದ ಕೆ.ಸತೀಶ್ ಹಂದೆ ಉಪಸ್ಥಿತರಿಲಿದ್ದಾರೆ. ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸಂಸ್ಕೃತ ಪ್ರಾಧ್ಯಾಪಕರಾದ ನಾರಾಯಣಮೂರ್ತಿ ಉಡುಪ ಇದೇ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.